logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

illiberal
ಗುಣವಾಚಕ
  • ಸ್ವತಂತ್ರ ವ್ಯಕ್ತಿಗೆ ಯಾ ಪ್ರಜೆಗೆ – ತರವಲ್ಲದ, ಒಪ್ಪದ, ಸಲ್ಲದ, ಯೋಗ್ಯವಲ್ಲದ.
  • ಅವಿದ್ವಾಂಸ; ಪಾಂಡಿತ್ಯವಿಲ್ಲದ; ಅಶಿಕ್ಷಿತ; ಪಾಮರ; ಸಂಸ್ಕೃತಿ, ಶಿಕ್ಷಣ ಇಲ್ಲದ: illiberal crafts ಪಾಮರ ಕಸಬುಗಳು.
  • ಗ್ರಾಮ್ಯ; ಒರಟು; ಅಸಭ್ಯ; ಅಸಂಸ್ಕೃತ; ಕೀಳು; ತುಚ್ಛ; ಕ್ಷುದ್ರ; ಹೀನ: illiberal occupation ಕೀಳು ಉದ್ಯೋಗ.
  • ಸಂಕುಚಿತ ಮನಸ್ಸಿನ; ಮನಸ್ಸು ಧಾರಾಳವಿಲ್ಲದ; ಅಸಹಿಷ್ಣುತೆಯ.
  • ಜಿಪುಣ; ಜುಗ್ಗ; ಜೀನ; ಕೃಪಣ; ಲೋಭಿ; ಅನುದಾರ; ಧಾರಾಳವಿಲ್ಲದ: an illiberal hand ಧಾರಾಳವಿಲ್ಲದ ಕೈ.

  • illiberality
    ನಾಮವಾಚಕ
  • ಸ್ವತಂತ್ರ ವ್ಯಕ್ತಿಗೆ ತರವಲ್ಲದ ಗುಣ.
  • ಪಾಮರತೆ; ಉದಾರ ಶಿಕ್ಷಣವಿಲ್ಲದಿರುವಿಕೆ.
  • ಗ್ರಾಮ್ಯತೆ; ಒರಟುತನ; ಅಸಂಸ್ಕೃತತೆ; ಕೀಳುತನ.
  • ಅಸಹಿಷ್ಣುತೆ; ಸಂಕುಚಿತ ಮನೋಭಾವ.
  • ಜಿಪುಣತನ; ಜೀನತನ.

  • illiberally
    ಕ್ರಿಯಾವಿಶೇಷಣ
  • ಸ್ವತಂತ್ರ ಪ್ರಜೆಗೆ ತರವಲ್ಲದ ರೀತಿಯಲ್ಲಿ.
  • ಪಾಮರ ರೀತಿಯಲ್ಲಿ; ಪಾಂಡಿತ್ಯವಿಲ್ಲದೆ.
  • ಗ್ರಾಮ್ಯವಾಗಿ; ಒರಟಾಗಿ; ಅಸಂಸ್ಕೃತ ರೀತಿಯಲ್ಲಿ.
  • ಸಂಕುಚಿತ ಮನಸ್ಸಿನಿಂದ; ಅಸಹಿಷ್ಣುತೆಯಿಂದ.
  • ಜಿಪುಣತನದಿಂದ.

  • illicit
    ಗುಣವಾಚಕ
    ನ್ಯಾಯವಿರುದ್ಧ; ನ್ಯಾಯಬಾಹಿರ; ಅಕ್ರಮ; ನಿಷಿದ್ಧ; ಕಳ್ಳ; ಅನುಮತಿಯಿಲ್ಲದ: (ಮುಖ್ಯವಾಗಿ) illicit still ಕಳ್ಳಬಟ್ಟಿ ಇಳಿಸುವ ಸಲಕರಣೆ. illicit sale of opium ನ್ಯಾಯಬಾಹಿರ ಅಹೀಮಿನ ಮಾರಾಟ. illicit dealings ನಿಷಿದ್ಧ ವ್ಯವಹಾರಗಳು. illicit intercourse ಅಕ್ರಮ ಸಂಭೋಗ.

    illicitly
    ಕ್ರಿಯಾವಿಶೇಷಣ
    ನ್ಯಾಯವಿರುದ್ಧವಾಗಿ; ನ್ಯಾಯಬಾಹಿರವಾಗಿ; ಅಕ್ರಮವಾಗಿ; ನಿಷಿದ್ಧವಾಗಿ.

    illimitability
    ನಾಮವಾಚಕ
    ಅನಂತತೆ; ಅಸೀಮಿತತೆ; ಎಲ್ಲೆಯಿಲ್ಲದಿರುವಿಕೆ; ಅಪರಿಮಿತತ್ವ.

    illimitable
    ಗುಣವಾಚಕ
    ಅಮಿತ; ಮಿತಿಯಿಲ್ಲದ; ಎಲ್ಲೆಯಿಲ್ಲದ; ಮೇರೆಯಿಲ್ಲದ; ಅಪರಿಮಿತ; ಅಸೀಮಿತ: illimitable reaches of space and time ಕಾಲದೇಶಗಳ ಅಸೀಮಿತ ವ್ಯಾಪ್ತಿ.

    illimitableness
    ನಾಮವಾಚಕ
    ಅಪರಿಮಿತತೆ; ಅಸೀಮಿತತ್ವ; ಅನಂತತೆ.

    illimitably
    ಕ್ರಿಯಾವಿಶೇಷಣ
    ಪರಿಮಿತಿಯಿಲ್ಲದಂತೆ; ಎಲ್ಲೆಯಿಲ್ಲದಂತೆ; ಸೀಮಾರಹಿತವಾಗಿ; ಅಂತವಿಲ್ಲದೆ.

    illiquid
    ಗುಣವಾಚಕ
    (ಆಸ್ತಿಗಳ ವಿಷಯದಲ್ಲಿ) ಅಪರಿವರ್ತನೀಯ; ಸುಲಭವಾಗಿ ನಗದಾಗಿ ಪರಿವರ್ತಿಸಲಾಗದ.


    logo