logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

edit
ಸಕರ್ಮಕ ಕ್ರಿಯಾಪದ ಪದಗುಚ್ಛ
edit out ಬಿಟ್ಟುಬಿಡು; ತೆಗೆದುಹಾಕು; ವರ್ಜಿಸು: the censor board edited out the undesirable portions ಸೆನ್ಸಾರ್‍ ಮಂಡಲಿಯವರು ಅನಪೇಕ್ಷಣೀಯ ಭಾಗಗಳನ್ನು ಕತ್ತರಿಸಿ (ತೆಗೆದು) ಹಾಕಿದರು.
  • (ಇನ್ನೊಬ್ಬರ ಗ್ರಂಥ, ಲೇಖನಗಳನ್ನು) ಪರಿಷ್ಕರಿಸು; ತಿದ್ದು; ಸಂಪಾದಿಸು.
  • (ಮುಖ್ಯವಾಗಿ ಬೇರೆಯವರು ಒದಗಿಸಿದ ಲೇಖನ, ಸುದ್ದಿ, ಮೊದಲಾದ ಸಾಮಗ್ರಿಯನ್ನು ಸರಿ ನೋಡಿ, ಪರಿಷ್ಕರಿಸಿ) ಮುದ್ರಣಕ್ಕೆ ಸಿದ್ಧಪಡಿಸು.
  • (ತ್ತಪತ್ರಿಕೆಯಲ್ಲಿ ವರದಿ ಮೊದಲಾದವನ್ನು) ಸಂಸ್ಕರಿಸಿ ಪ್ರಕಟಿಸು; ಸಂಪಾದನೆ ಮಾಡು.
  • (ಪತ್ರಿಕೆ ಮೊದಲಾದವುಗಳ) ಸಂಪಾದಕನಾಗು; ಸಂಪಾದಕತನ ನಡೆಸು.
  • (ಹೋಟೋಗ್ರಾಹಿಕ್‍ ಚಿತ್ರ, ಧ್ವನಿಮುದ್ರಿಕೆ, ಮೊದಲಾದವನ್ನು) ಜೋಡಿಸು; ಸಂಪಾದಿಸು; ಪರಿಷ್ಕರಿಸು; ಅವುಗಳಿಂದ ಭಾಗಗಳನ್ನು ಆಯ್ದು, ಅದೊಂದು ಸಮಗ್ರ ಕೃತಿಯಾಗುವಂತೆ ಕೂಡಿಸು, ಜೋಡಿಸು, ರಚಿಸು.
  • (ಯಾವುದೋ ಒಂದು ಉದ್ದೇಶಕ್ಕಾಗಿ) ಬೇರೆ ರೀತಿಯಲ್ಲಿ ಬರೆ; ಬೇರೆ ಪದಗಳಲ್ಲಿಡು.

  • editio princeps
    ನಾಮವಾಚಕ
    ಗ್ರಂಥವೊಂದರ ಮೊದಲನೆಯ ಮುದ್ರಣ; ಪ್ರಥಮ — ಮುದ್ರಣ, ಆತ್ತಿ.

    edition
    ನಾಮವಾಚಕ ಪದಗುಚ್ಛ
  • ಆವೃತ್ತಿ; ಮುದ್ರಣ; ಛಾಪೆ; ಪ್ರತಿ; ಗ್ರಂಥವೊಂದು ಪ್ರಕಟವಾಗಿರುವ ರೂಪ ಯಾ ಆತಿ: first edition ಮೊದಲ ಮುದ್ರಣ. cheap edition ಅಗ್ಗದ ಆವೃತ್ತಿ.
  • ಹೀಗೆ ಪ್ರಕಟವಾದದ್ದರ ಒಂದು ಪ್ರತಿ: this is the first edition ಇದು ಮೊದಲನೇ ಮುದ್ರಣದ ಪ್ರತಿ.
  • ಆತ್ತಿ; ಒಂದೇ ಮುದ್ರಣ ರೂಪದಲ್ಲಿ, ಒಂದೇ ಕಾಲದಲ್ಲಿ, ಪ್ರಕಟವಾದ ಪುಸ್ತಕ, ತ್ತಪತ್ರಿಕೆ, ಮೊದಲಾದವುಗಳ ಒಟ್ಟು ಸಂಖ್ಯೆ.
  • (ರೂಪಕವಾಗಿ) ಪ್ರತಿತಿ ; ಪ್ರತಿರೂಪ; ಯಾವುದೋ ಒಂದು ಮಾದರಿ ವಸ್ತು ಯಾ ವ್ಯಕ್ತಿಯನ್ನು, ಹೋಲುವ ಅದೇ ಬಗೆಯ ವಸ್ತು, ವ್ಯಕ್ತಿ ಮೊದಲಾದವು: a more charming edition of her sister ಅವಳ ಸೋದರಿಗಿಂತ ಹೆಚ್ಚು ಮೋಹಕವಾದ ಪ್ರತಿರೂಪ.

  • editor
    ನಾಮವಾಚಕ
    ಸಂಪಾದಕ:
  • ಗ್ರಂಥ ಮೊದಲಾದವುಗಳ ಸಂಪಾದಕ; ಬೇರೆಯವರ ಪುಸ್ತಕ, ಲೇಖನ, ಮೊದಲಾದವನ್ನು ಸರಿನೋಡಿ, ಪರಿಷ್ಕರಿಸಿ ಪ್ರಕಾಶನ, ಬಾನುಲಿ ಪ್ರಸಾರ, ಮೊದಲಾದವುಗಳಿಗೆ ಸಿದ್ಧಗೊಳಿಸುವವನು.
  • ಪತ್ರಿಕಾ ಸಂಪಾದಕ; ತ್ತಪತ್ರಿಕೆ ಯಾ ನಿಯತಕಾಲಿಕೆ ಯಾ ಆಟ, ಆರ್ಥಿಕ, ಮೊದಲಾದ ಪತ್ರಿಕಾ ವಿಭಾಗಗಳನ್ನು ನಿರ್ವಹಿಸಿ ನಡೆಸುವವನು: financial editor ಆರ್ಥಿಕ (ವಿಷಯಗಳ) ಸಂಪಾದಕ. sports editor ಕ್ರೀಡಾ (ವಿಷಯಗಳ) ಸಂಪಾದಕ.
  • ಪ್ರಕಟನ ಸಂಸ್ಥೆಯ ಒಂದು ವಿಭಾಗದ ಮುಖ್ಯಸ್ಥ.
  • ಸಿನಿಮಾ ಮೊದಲಾದವುಗಳ ಕೆಲವು ವಿಭಾಗಗಳನ್ನು ಕತ್ತರಿಸಿ ಹಾಕಿ ಉಳಿದವನ್ನು ಏಕತೆಯಿಂದ ಕೂಡಿದ ಸಮಗ್ರತಿಯಾಗುವಂತೆ ರಚಿಸುವವನು, ಜೋಡಿಸುವವನು.

  • editorial
    ಗುಣವಾಚಕ
    ಸಂಪಾದಕೀಯ; ಸಂಪಾದಕನ; ಸಂಪಾದಕೀಯಕ್ಕೆ ಯಾ ಸಂಪಾದಕನಿಂದಲೋ ಎಂಬಂತೆ ಬರೆಯಲಾದ (ಸುದ್ದಿಯೋ ಜಾಹೀರಾತೋ ಅಲ್ಲ).

    editorial
    ನಾಮವಾಚಕ
    ಸಂಪಾದಕೀಯ (ಲೇಖನ); ಅಗ್ರಲೇಖನ; ಸಂಪಾದಕ ಬರೆಹ; ಸಂಪಾದಕನೇ ಬರೆದ ಯಾ ಆತನ ಜವಾಬ್ದಾರಿಯ ಮೇಲೆ ಬರೆಸಿದ ತ್ತಪತ್ರಿಕೆಯ ಲೇಖನ.

    editorialist
    ನಾಮವಾಚಕ
    ಸಂಪಾದಕೀಯ ಲೇಖಕ; ಸಂಪಾದಕೀಯ (ಲೇಖನವನ್ನು) ಬರೆಯುವವ.

    editorialize
    ಸಕರ್ಮಕ ಕ್ರಿಯಾಪದ
    ಸಂಪಾದಕೀಯ ಬರೆ; ಸಂಪಾದಕೀಯ ಲೇಖನವನ್ನು ಬರೆ.

    editorially
    ಕ್ರಿಯಾವಿಶೇಷಣ
  • ಸಂಪಾದಕೀಯವಾಗಿ; ಸಂಪಾದಕನ ರೀತಿಯಲ್ಲಿ; ಸಂಪಾದಕನ ಸ್ಥಾನದಿಂದ.
  • ಸಂಪಾದಕೀಯದಲ್ಲಿ; ಸಂಪಾದಕೀಯ ಲೇಖನದಲ್ಲಿ.

  • editorship
    ನಾಮವಾಚಕ
  • ಸಂಪಾದಕತ; ಸಂಪಾದಕನ — ಸ್ಥಾನ, ಹುದ್ದೆ.
  • ಸಂಪಾದಕನ ಪರಿಶೀಲನೆ; ಸಂಪಾದಕನು ಪುನಃ ಪರಿಶೀಲಿಸುವುದು ಯಾ ಬದಲಾಯಿಸುವುದು.


  • logo