logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

datival
ಗುಣವಾಚಕ
= 2dative(1).

dative
ನಾಮವಾಚಕ ಪದಗುಚ್ಛ
(ವ್ಯಾಕರಣ) ಚತುರ್ಥೀ ವಿಭಕ್ತಿ. dative case = 1dative.

dative
ಗುಣವಾಚಕ
  • (ವ್ಯಾಕರಣ) ಚತುರ್ಥೀ ವಿಭಕ್ತಿಯ.
  • (ಸ್ಕಾಟ್ಲಂಡ್‍) (ನ್ಯಾಯಶಾಸ್ತ್ರ) (ಆಸ್ತಿ ಮೊದಲಾದವುಗಳ ನಿರ್ವಾಹಕನ ವಿಷಯದಲ್ಲಿ) ನ್ಯಾಯಾಲಯ ನೇಮಿತ; ಕೋರ್ಟು ನೇಮಿತ; ಉಯಿಲುದಾರ ಹೆಸರಿಸಿಲ್ಲದ, ಆದರೆ ನ್ಯಾಯಾಲಯ ನೇಮಿಸಿದ.

  • datively
    ಕ್ರಿಯಾವಿಶೇಷಣ
    ಚತುರ್ಥೀ ವಿಭಕ್ತಿಯಂತೆ; ಸಂಪ್ರದಾನಾರ್ಥಕವಾಗಿ.

    datum
    ನಾಮವಾಚಕ
  • ದತ್ತಾಂಶ; ಸಮ್ಮತಾಂಶ; ಪ್ರತಿಜ್ಞೆ; ಆಧಾರಾಂಶ; ಸಿದ್ಧವಾದ, ತಿಳಿದಿರುವ ಯಾ ಅಂಗೀಕೃತವಾದ ವಿಷಯ, ಅಂಶ.
  • (ಮಾಪನಗಳಲ್ಲಿ) ಆಧಾರ; ನಿರ್ದಿಷ್ಟ ಆರಂಭ – ಸ್ಥಾನ, ಬಿಂದು: datum line ಆಧಾರ ರೇಖೆ. datum point ಆಧಾರ ಬಿಂದು.
  • (ಕಂಪ್ಯೂಟರ್‍) ದತ್ತಾಂಶ; ಕಂಪ್ಯೂಟರು ನಿರ್ವಹಿಸಿ ಶೇಖರಿಸಿಡುವ ಪರಿಮಾಣಗಳು, ಅಕ್ಷರಗಳು, ಇತ್ಯಾದಿ.
  • (ಬಹುವಚನದಲ್ಲಿ) (ಏಕವಚನದಲ್ಲಿ ಸಹ ಪ್ರಯೋಗ) (ಮುಖ್ಯವಾಗಿ ಊಹಾನುಮಾನಕ್ಕೆ ಆಧಾರವಾದ) ವಿಷಯಗಳು; ಸಂಗತಿಗಳು; ಮಾಹಿತಿಗಳು.

  • datura
    ನಾಮವಾಚಕ
    ದತೂರ; ಪ್ರಜ್ಞೆ ತಪ್ಪಿಸಿ, ಗಾಢನಿದ್ರೆ ತಂದು ಕೊನೆಗೆ ಪ್ರಾಣವನ್ನು ತೆಗೆವ, ಉಮ್ಮತ್ತಿಯನ್ನೊಳಗೊಂಡ ವಿಷಸಸ್ಯಗಳ ಒಂದು ಕುಲ.

    daub
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಗೋಡೆ ಮೊದಲಾದವಕ್ಕೆ ಜೇಡಿಮಣ್ಣು, ಲೇಪ, ಮೊದಲಾದವುಗಳನ್ನು) ಬಳಿ; ತೊಡೆ; ಲೇಪಿಸು; ಒರೆ; ಮೆತ್ತು; ಗಿಲಾವು ಮಾಡು.
  • (ಮುಲಾಮು ಮೊದಲಾದವನ್ನು) ಬಳಿ; ಹಚ್ಚು; ಲೇಪಿಸು; ಸವರು.
  • ಕೊಳೆ ಮಾಡು; ಕರೆ ಮಾಡು; ಮಲಿನಗೊಳಿಸು.
  • (ಬಣ್ಣ ಸುಣ್ಣ ಮೊದಲಾದವನ್ನು) (ಒರಟೊರಟಾಗಿ) ಬಳಿ; ತೊಡೆ; ಹಚ್ಚು; ಲೇಪಿಸು.
  • ಅಡ್ಡಾದಿಡ್ಡಿಯಾಗಿ ಕಲಾವಂತಿಕೆಯಿಲ್ಲದೆ ವರ್ಣಚಿತ್ರ ರಚಿಸು.

  • daub
    ನಾಮವಾಚಕ
  • (ಗಾರೆ ಮೊದಲಾದ) ಲೇಪ; ಮೆತ್ತಡ; ಬಳಿಯುವ ವಸ್ತು.
  • (ಬಣ್ಣಸುಣ್ಣ ಮೊದಲಾದವುಗಳ) ಮೆತ್ತಣೆ; ಬಳಿತ; ಲೇಪನ; ಲೇಪ.
  • ಒರಟೊರಟಾದ ಯಾ ಅಡ್ಡಾದಿಡ್ಡಿಯಾದ ಬಣ್ಣದ ಬಳಿತ.
  • ಕಲಾತ್ಮಕವಾಗಿರದ ವರ್ಣಚಿತ್ರ.
  • (ಬಣ್ಣ ಮೊದಲಾದವುಗಳ) ಕಲೆ; ಮಚ್ಚೆ; ಬಳಿತ; ಪಟ್ಟೆ.

  • daube
    ನಾಮವಾಚಕ
    ಡೋಬ್‍; ಮೈನ್‍ನಲ್ಲಿ ಬೇಯಿಸಿದ (ಮುಖ್ಯವಾಗಿ ದನದ) ಮಾಂಸ.

    dauber
    ನಾಮವಾಚಕ
  • ಲೇಪಕಾರ; ಗಿಲಾವುಗಾರ; ಬಳಿಯುವವ; ಲೇಪಕ.
  • ಅಕುಶಲ ಯಾ ಒಡ್ಡ – ಚಿತ್ರಕಾರ.
  • ಲೇಪನಿ; ಬಳಿಯುವ ಸಲಕರಣೆ, ಸಾಧನ.


  • logo