logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

calicle
ನಾಮವಾಚಕ
(ಜೀವವಿಜ್ಞಾನ) (ಹವಳ ಮೊದಲಾದವುಗಳಲ್ಲಿರುವ) ಕಿರುಬಟ್ಟಲು; ಸಣ್ಣ ಬಟ್ಟಲಿನಾಕಾರದ ಕುಳಿ ಯಾ ರಚನೆ.

calico
ನಾಮವಾಚಕ
  • ಕ್ಯಾಲಿಕೋ ಬಟ್ಟೆ; ಹತ್ತಿ ಬಟ್ಟೆ; ಶುದ್ಧ ಬಿಳಿಯ ಬಟ್ಟೆ; ಮುಖ್ಯವಾಗಿ ಚೆಲುವೆ ಮಾಡಿದ ಯಾ ಮಾಡಿರದ, ಚಿತ್ತಾರಗಳಿಲ್ಲದ, ಬಿಳಿಯ ಹತ್ತಿಬಟ್ಟೆ.
  • (ಹಿಂದೆ) (ಪೂರ್ವದೇಶಗಳಿಂದ ಮುಖ್ಯವಾಗಿ ಇಂಡಿಯಾದಿಂದ ಹೋಗುತ್ತಿದ್ದ) ಹತ್ತಿಬಟ್ಟೆ.
  • (ಅಮೆರಿಕನ್‍ ಪ್ರಯೋಗ) (ಹತ್ತಿಯ) ಚೀಟಿಬಟ್ಟೆ; ಚಿತ್ತಾರ ಮುದ್ರಿಸಿದ ಹತ್ತಿಬಟ್ಟೆ.

  • calico
    ಗುಣವಾಚಕ
  • ಹತ್ತಿಬಟ್ಟೆಯ.
  • (ನೋಡಲು) ಹತ್ತಿಬಟ್ಟೆಯಂಥ.
  • ಹತ್ತಿ ಬಟ್ಟೆಯಿಂದ ಮಾಡಿದ.
  • (ಅಮೆರಿಕನ್‍ ಪ್ರಯೋಗ) ಬಣ್ಣಬಣ್ಣದ; ರಂಗುರಂಗಿನ; ವಿವಿಧ ವರ್ಣದ; ಬಣ್ಣಬಣ್ಣದ ಚುಕ್ಕೆಗಳು ಯಾ ಪಟ್ಟೆಗಳಿರುವ.

  • calico-ball
    ನಾಮವಾಚಕ
    (ಭಾಗವಹಿಸುವವರೆಲ್ಲರೂ ಹತ್ತಿಬಟ್ಟೆಯನ್ನೇ ಧರಿಸುವ) ಕ್ಯಾಲಿಕೋ ಕುಣಿತ.

    calico-printer
    ನಾಮವಾಚಕ
    ಕ್ಯಾಲಿಕೋ ಮುದ್ರಕ; ಹತ್ತಿಬಟ್ಟೆಯ ಮೇಲೆ ಬಣ್ಣ ಹೋಗದಂಥ ನಮೂನೆಗಳನ್ನು ಮುದ್ರಿಸುವವನು.

    calico-printing
    ನಾಮವಾಚಕ
    ಕ್ಯಾಲಿಕೋ ಮುದ್ರಣ; ಹತ್ತಿಬಟ್ಟೆಯ ಮೇಲೆ ಗಟ್ಟಿ ಬಣ್ಣದ ಚಿತ್ತಾರಗಳನ್ನು ಮುದ್ರಿಸುವುದು.

    calicular
    ಗುಣವಾಚಕ
    (ಜೀವವಿಜ್ಞಾನ) ಬಟ್ಟಲಿನಂಥ; ಸಣ್ಣ ಬಟ್ಟಲಿನಾಕಾರದ.

    calif
    ನಾಮವಾಚಕ
    =caliph.

    Calif.
    ಸಂಕ್ಷಿಪ್ತ
    California.

    californium
    ನಾಮವಾಚಕ
    (ರಸಾಯನವಿಜ್ಞಾನ) ಕ್ಯಾಲಿಹೋರ್ನಿಯಂ; ಕೃತಕವಾಗಿ ಸೃಷ್ಟಿಸಿರುವ, ಆಕ್ಟಿನಿಯಂ ಶ್ರೇಣಿಗೆ ಸೇರಿದ, 98 ಪರಮಾಣ್ವಂಕದ, ಯುರೇನಿಯಂ ಆಚೆಯ, ವಿಕಿರಣಕ್ರಿಯೆಯುಳ್ಳ ಲೋಹಧಾತು.


    logo