logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Bahamian
ನಾಮವಾಚಕ
ಬಹಾಮ ನಿವಾಸಿ; ಬಹಾಮ ದ್ವೀಪಗಳ ನಿವಾಸಿ ಯಾ ಅಲ್ಲಿ ಹುಟ್ಟಿದವನು.

baignoire
ನಾಮವಾಚಕ
ರಂಗಮಂದಿರದಲ್ಲಿ ಮುನ್ಸಾಲಿನ ಪೀಠಗಳ ಅಂತಸ್ತಿನಲ್ಲೇ ರಚಿಸಿದ ಪ್ರತ್ಯೇಕ ಆಸನ.

bail
ನಾಮವಾಚಕ ಪದಗುಚ್ಛ ನುಡಿಗಟ್ಟು
  • ಜಾಈನು; ಹೊಣೆ; ವಿಚಾರಣೆ, ಮೊದಲಾದವುಗಳಿಗಾಗಿ ಕೋರ್ಟಿಗೆ ಹಾಜರಾಗುವನೆಂದು ಭರವಸೆ ನೀಡಿ ಅಪರಾಧಿಯನ್ನು ಬಂಧನದಿಂದ ತಾತ್ಕಲಿಕವಾಗಿ ಬಿಡಿಸಲು ನ್ಯಾಯಾಲಯದಲ್ಲಿ ಠೇವಣಿಯಿಟ್ಟ ಹಣ ಯಾ ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಳಿಕೆ.
  • ಜಾಈನುದಾರ(ರು); ಹೊಣೆಗಾರ(ರು); ಜಾಈನಾಗುವವನು(ರು).
  • ಜಾಈನು ಪಡೆದಿರುವವನ ಯಾ ಜಾಈನಿನ ಆಧಾರದ ಮೇಲೆ ಬಿಡುಗಡೆ ಪಡೆದಿರುವವನ ಸ್ಥಿತಿ, ದೆಸೆ, ಅವಸ್ಥೆ.

  • bail
    ಸಕರ್ಮಕ ಕ್ರಿಯಾಪದ ಪದಗುಚ್ಛ
    bail out
  • ಮಾಲನ್ನು ನಂಬಿಕೆಯ ಮೇಲೆ (ಒಬ್ಬನ) ವಶಕ್ಕೆ ಕೊಡು; ಮಾರಿಫತ್ತು ಕೊಡು.
  • (ನ್ಯಾಯಾಧಿಪತಿಯ ವಿಷಯದಲ್ಲಿ) ಜಾಮೀನಿನ ಮೇಲೆ – ಬಿಡು, ಬಿಡುಗಡೆ ಮಾಡು.
  • (ಒಬ್ಬನನ್ನು) ಜಾಮೀನಾಗಿ ಬಿಡಿಸು; (ಒಬ್ಬನನ್ನು) ಬಿಡಿಸಲು ಜಾಮೀನು ಕೊಡು; ಜಾಮೀನಾಗು.

  • bail
    ನಾಮವಾಚಕ
  • (ಚರಿತ್ರೆ, ದುರ್ಗದ) ದಸಿ – ಕಾಪು, ರಕ್ಷಣೆ; ದಸಿಗಳನ್ನು ನೆಟ್ಟು ರಚಿಸಿರುವ ಹೊರರಕ್ಷಣೆ.
  • (ದುರ್ಗದ) ಒಳ ಆವರಣ ಯಾ ಅಂಗಳ.
  • (ದುರ್ಗದ) ಒಳಪಾಳಿ; ಒಳ ಆವರಣದ ಯಾ ಅಂಗಳದ ಗೋಡೆ.
  • (ಬಯಲು ಲಾಯದಲ್ಲಿ ಕುದುರೆಗಳನ್ನು ಬೇರೆಬೇರೆ ನಿಲ್ಲಿಸಲು ಹಾಕಿರುವ) ಅಡ್ಡ – ಕಂಬಿ, ಮರ.
  • (ಕ್ರಿಕೆ) ಬೇಲು; ವಿಕೆಟ್‍ ಚಿಣ್ಣಿ.
  • ಬೇಲು; (ಟೈಪ್‍ರೈಟರ್‍ ಯಂತ್ರದಲ್ಲಿ) ಫಲಕಕ್ಕೆ ಕಾಗದವನ್ನು ಒತ್ತಿಹಿಡಿಯುವ ದಂಡ.

  • bail
    ನಾಮವಾಚಕ
  • ಬಾಗು ಆಸರೆ; ಲಂಗ, ಬಟ್ಟೆಯ ಚಪ್ಪರ, ಮೊದಲಾದವನ್ನು ಉಬ್ಬಿಸಿ ಹಿಡಿದಿಡಲು ಒದಗಿಸುವ ಆಸರೆ.
  • (ಕೆಟಲ್‍, ಬಕೆಟ್ಟು, ಮೊದಲಾದವುಗಳ) ಬಾಗಿದ ಹಿಡಿ.
  • (ಮುಖ್ಯವಾಗಿ ಆಸ್ಟ್ರೇಲಿಯದಲ್ಲಿ) ತಲೆ ಚೌಕಟ್ಟು; ಹಾಲು ಕರೆಯುವಾಗ ಹಸುವಿನ ತಲೆಯನ್ನು ಹಿಡಿದು ನಿಲ್ಲಿಸಲು ಬಳಸುವ ಚೌಕಟ್ಟು.

  • bail
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
    (ಆಸ್ಟ್ರೇಲಿಯ) (ದರೋಡೆಗೆ ಒಳಗಾದವನ ವಿಷಯದಲ್ಲಿ) ಕೈಯೆತ್ತಿನಿಂತುಕೊ. bail up
  • (ಪೊದೆಗಾಡಿನ ದರೋಡೆಗಾರರ ವಿಷಯದಲ್ಲಿ, ದರೋಡೆಗಾಗಿ) ತಡೆದುನಿಲ್ಲಿಸು; ಕೈಯೆತ್ತಿ ಸುಮ್ಮನೆ ನಿಲ್ಲು ಎನ್ನು.
  • (ಇಚ್ಛೆಯಿಲ್ಲದ ವ್ಯಕ್ತಿಯನ್ನು) ಹಿಡಿದು ನಿಲ್ಲಿಸು.

  • bail
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
    (ದೋಣಿ ಮೊದಲಾದವುಗಳಿಂದ) ನೀರನ್ನು ಮೊಗೆದು – ಸುರಿ, ಚೆಲ್ಲು: bail water out (ದೋಣಿಯಿಂದ) ನೀರನ್ನು ಹೊರಕ್ಕೆ ಚೆಲ್ಲು. (ನೀರನ್ನು) ದೋಣಿಯಿಂದ ಮೊಗೆದು ಸುರಿ: bail out boat (ನೀರನ್ನು) ದೋಣಿಯಿಂದ ಮೊಗೆದು ಸುರಿ. bail out
  • (ವೈಮಾನಿಕನ ವಿಷಯದಲ್ಲಿ) (ಸ್ಫೋಟನೆ, ಬೆಂಕಿ ಮೊದಲಾದ ಅಪಾಯಗಳ ಸೂಚನೆ ಕಂಡು ಬಂದಾಗ ವಿಮಾನದಿಂದ, ಪ್ಯಾರಾಚೂಟಿನ ಸಹಾಯದಿಂದ) ಹೊರಕ್ಕೆ – ಹಾರು, ನೆಗೆ, ಧುಮುಕು.
  • (ಹಲಗೆಯ ಮೇಲೆ ನಿಂತು ತೆರೆಯ ಮೇಲೆ ಸವಾರಿ ಮಾಡುವವನ ವಿಷಯದಲ್ಲಿ) ಸವಾರಿ ಹಲಗೆ ಬಿಟ್ಟು ಧುಮುಕು.
  • (ರೂಪಕವಾಗಿ) = 2bail. ಪದಗುಚ್ಛ(b).

  • bailable
    ಗುಣವಾಚಕ
    (ನ್ಯಾಯಶಾಸ್ತ್ರ) (ಅಪರಾಧಿಯ ಯಾ ಅಪರಾಧದ ವಿಷಯದಲ್ಲಿ) ಜಾಈನು ಯೋಗ್ಯ; ಜಾಈನಾರ್ಹ; ಜಾಈನಿನ ಮೇಲೆ ಬಿಡಬಹುದಾದ; ಜಾಈನಿನ ಮೇಲೆ ಬಿಡಿಸಿಕೊಳ್ಳಬಲ್ಲ.

    bailee
    ನಾಮವಾಚಕ
    (ನ್ಯಾಯಶಾಸ್ತ್ರ) ಅಮಾನತ್ತುದಾರ; ಕರಾರಿನಂತೆ ಮಾಲನ್ನು ಸುಪರ್ದಿನಲ್ಲಿಟ್ಟುಕೊಳ್ಳುವವನು.


    logo