logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abstemiousness
ನಾಮವಾಚಕ
ಹಿಡಿತ; ಮಿತತ್ತ್ವ; ಸಂಯಮ.

abstention
ನಾಮವಾಚಕ
  • (ಭೋಗಗಳ ವಿಷಯದಲ್ಲಿ) ವರ್ಜನೆ; ನಿವೃತ್ತಿ; ವಿಮುಖತೆ.
  • ತಟಸ್ಥತೆ; ತಟಸ್ಥವಾಗಿರುವುದು; ಮುಖ್ಯವಾಗಿ ಮತಚಲಾಯಿಸದಿರುವುದು, ಓಟು ಕೊಡದಿರುವುದು.

  • absterge
    ಸಕರ್ಮಕ ಕ್ರಿಯಾಪದ
  • (ಒರಸಿ, ಉಜ್ಜಿ, ತಿಕ್ಕಿ) ಚೊಕ್ಕಟಗೊಳಿಸು; ಶುಚಿಗೊಳಿಸು; ಶುಭ್ರಮಾಡು.
  • (ವೈದ್ಯಶಾಸ್ತ್ರ) ವಿರೇಚಿಸು.

  • abstergent
    ಗುಣವಾಚಕ
  • ಶುಚಿಕಾರಕ; ಮಲಾಪಹಾರಿ; ಕಶ್ಮಲಹಾರಿ; ಅಪಮಾರ್ಜಕ.
  • ವಿರೇಚಕ; ಭೇದಿಮಾಡಿಸುವ ಔಷಧ ಯಾ ವಸ್ತುವಿಗೆ ಸಂಬಂಧಿಸಿದ.

  • abstergent
    ನಾಮವಾಚಕ
  • ಶುಚಿಕಾರಕ; ಮಲಾಪಹಾರಿ; ಕಶ್ಮಲಹಾರಿ; ಅಪಮಾರ್ಜಕ; ಕೊಳೆ ತೆಗೆಯುವ ವಸ್ತು.
  • ವಿರೇಚಕ; ಭೇದಿ ಮಾಡಿಸುವ ಔಷಧ ಯಾ ವಸ್ತು.

  • abstersion
    ನಾಮವಾಚಕ
  • ಶುಚೀಕರಣ; ಕೊಳೆ ತೆಗೆಯುವಿಕೆ.
  • ವಿರೇಚನ; ಭೇದಿಮಾಡಿಸುವಿಕೆ.

  • abstersive
    ಗುಣವಾಚಕ
    (ಗತಪ್ರಯೋಗ) = 1abstergent.

    abstinence
    ನಾಮವಾಚಕ
  • (ಅನ್ನ, ಪಾನ, ಭೋಗ, ಮೊದಲಾದವುಗಳ) ವರ್ಜನೆ: total abstinence ಮದ್ಯದ ಪೂರ್ಣವರ್ಜನೆ.
  • ಸಂಯಮ; ಇಂದ್ರಿಯನಿಗ್ರಹ.
  • ಆಂಶಿಕ ಉಪವಾಸ; ಖಂಡೋಪವಾಸ; ಚರ್ಚಿನ ನಿಯಮಕ್ಕನುಸಾರವಾಗಿ ಕೆಲವು ದಿನಗಳಲ್ಲಿ ಕೆಲವು ಪದಾರ್ಥಗಳನ್ನು (ಉದಾಹರಣೆಗೆ ಶುಕ್ರವಾರಗಳಲ್ಲಿ ಮಾಂಸವನ್ನು)ತಿನ್ನದಿರುವುದು.

  • abstinency
    ನಾಮವಾಚಕ
    (ಮುಖ್ಯವಾಗಿ ಆಹಾರದ ವಿಷಯದಲ್ಲಿ) ವರ್ಜನಶೀಲತೆ.

    abstinent
    ಗುಣವಾಚಕ
  • ವರ್ಜನಶೀಲ.
  • ಮಿತವಾಗಿರುವ; ಸಂಯಮದಿಂದ ಕೂಡಿದ; ಸಂಯಮವನ್ನು ಪಾಲಿಸುವ.


  • logo