logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abstractness
ನಾಮವಾಚಕ
  • ಅಮೂರ್ತತೆ; ವಾಸ್ತವಿಕವಾಗಿ ಯಾ ಮೂರ್ತವಾಗಿ ಯಾ ಸಾಮಾನ್ಯವಾಗಿ ಇರುವುದರಿಂದ ಭಿನ್ನವಾಗಿರುವಿಕೆ.
  • ದುರವಗಾಹ್ಯತೆ; ಸುಸೂಕ್ಷ್ಮತೆ.

  • abstract noun
    ನಾಮವಾಚಕ
    ಭಾವನಾಮ; ಗುಣವನ್ನು ಯಾ ಸ್ಥಿತಿಯನ್ನು ತಿಳಿಸುವ ನಾಮಪದ: length, goodness, virtue.

    abstractor
    ನಾಮವಾಚಕ
    ಸಂಕ್ಷೇಪಕ; ಸಂಗ್ರಹಕಾರ; ದಾಖಲೆಗಳು, ಲೇಖನಗಳು, ಲೆಕ್ಕಪತ್ರಗಳು, ಮೊದಲಾದವುಗಳ ಸಾರಾಂಶವನ್ನು ತಯಾರಿಸಿಡುವವನು.

    abstriction
    ನಾಮವಾಚಕ
    (ಸಸ್ಯವಿಜ್ಞಾನ) ಬೀಜಕಣ ಸಿಡಿತ; ಬೀಜಕಣ ಪ್ರಕ್ಷೇಪಣ; ಶಿಲೀಂಧ್ರಗಳಲ್ಲಿ ಬೀಜಕಣದಾನಿಯ ತುದಿಯು ಗುಂಡಾಗಿ ರೂಪುಗೊಂಡು ಸಿಡಿದು ಜೀವಕಣವಾಗಿ ಚದುರುತ್ತಾ ಹೋಗುವುದು.

    abstruse
    ಗುಣವಾಚಕ
    ಅತಿ ಗಹನ; ಅತಿ ಕ್ಲಿಷ್ಟ; ದುರ್ಬೋಧ; ದುಜ್ಞೇಯ; ತಿಳಿಯಲು ಕಷ್ಟವಾದ.

    abstrusely
    ಕ್ರಿಯಾವಿಶೇಷಣ
    ಅತಿ ಗಹನವಾಗಿ; ಅತಿ ಕ್ಲಿಷ್ಟವಾಗಿ; ದುರ್ಬೋಧವಾಗಿ; ದುಜ್ಞೇಯವಾಗಿ; ತಿಳಿಯಲು ಕಷ್ಟವಾದ ರೀತಿಯಲ್ಲಿ.

    abstruseness
    ನಾಮವಾಚಕ
    ಗಹನತೆ; ದುಜ್ಞೇಯತೆ.

    absurd
    ಗುಣವಾಚಕ
  • ಅಸಂಬದ್ಧ; ಅಸಂಗತ; ಪರಸ್ಪರ ಹೊಂದಿಕೆಯಿಲ್ಲದ.
  • ಅವಿವೇಕದ; ವಿವೇಚನಾಶೂನ್ಯ; ವಿವೇಚನೆ ಇಲ್ಲದ.
  • ನಗೆಗೀಡಾದ; ಹಾಸ್ಯಾಸ್ಪದವಾದ.
  • ಅರ್ಥಶೂನ್ಯ; ಅರ್ಥವಿಲ್ಲದ.

  • absurdity
    ನಾಮವಾಚಕ
  • ಅಸಂಬದ್ಧತೆ; ಅಸಂಗತತೆ.
  • ಅವಿವೇಕ; ವಿವೇಚನಾಶೂನ್ಯತೆ.
  • ನಗೆಗೇಡುತನ; ಹಾಸ್ಯಾಸ್ಪದವಾಗಿರುವಿಕೆ.
  • ಅಸಂಬದ್ಧ ಪ್ರಲಾಪ; ಅಸಂಗತ ವರ್ತನೆ; ಅವಿವೇಕದ ಯಾ ಅಸಂಗತವಾದ–ಹೇಳಿಕೆ, ಕಾರ್ಯ.

  • absurdly
    ಕ್ರಿಯಾವಿಶೇಷಣ
  • ಅಸಂಗತವಾಗಿ; ಅಸಂಬದ್ಧವಾಗಿ.
  • ಅವಿವೇಕದಿಂದ; ವಿವೇಚನೆಯಿಲ್ಲದೆ.
  • ನಗೆಪಾಟಲಾಗಿ; ಹಾಸ್ಯಾಸ್ಪದವಾಗಿ.
  • ಅರ್ಥಶೂನ್ಯವಾಗಿ.


  • logo