logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಸ್ವಾರಿಗಾಡಿ
(ನಾ)
ಮಾರಾಟಕ್ಕೆ ಕೊಂಡೊಯ್ಯಲು ಮಡಕೆಗಳನ್ನು ತುಂಬಿಟ್ಟ ಎತ್ತಿನಗಾಡಿ ಬಳ್ಳಾರಿ, ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲಿ ಈ ಪದ ಹೆಚ್ಚು ಬಳಕೆಯಲ್ಲಿದೆ. ಗಡಿಗೆಗಾಡಿ, ಮಡಕೆಗಾಡಿ ಎಂತಲೂ ಕರೆಯುವರು.

ಸೀಳು
(ಕ್ರಿ)
ಎರಡುಭಾಗ ಮಾಡು ಅರೆ ಹಸಿ ಇದ್ದಾಗ ಹಂಚನ್ನು ಎರಡು ಭಾಗ ಮಾಡುವರು. ಸೀಳು ಮುಚ್ಚುವರು. ಸುಟ್ಟ ನಂತರ ಹೋಳು ಮಾಡಲು ಅನುಕೂಲವಾಗುವದು.

ಸುಣ್ಣದ ಬಾನಿ
(ನಾ)
ಕರಿಬಾನಿ, ಅಗಲಬಾಯಿಯ ಮಣ್ಣಿನ ಪಾತ್ರೆ. ಇದರಲ್ಲಿ ಸುಣ್ಣದ ನೀರನ್ನು ಹಾಕಿ ಚರ್ಮವನ್ನು ನೆನೆಸಿ ಹದ ಮಾಡಲು ಬಳಸುವರು.

ಸುತ್ತು
(ಕ್ರಿ)
ಹರವೆ - ರಂಜಣಿಗೆಯಂತೆ ದೊಡ್ಡ ಪಾತ್ರೆಯನ್ನು ಮಾಡುವಾಗ: ಕೆಳಭಾಗದ ಮಣ್ಣನ್ನು ತೆಗೆದು ಮಡಿಕೆ ಸುತ್ತಲೂ ಮೆತ್ತುವುದಕ್ಕೆ ಸುತ್ತು ಹಚ್ಚು ಎನ್ನುವರು.

ಸುರಾಯಿ
(ನಾ)
ಉದ್ದ ಕುತ್ತಿಗೆಯ ಹೂಜೆ

ಸುರಿಗಡಗಿ
(ನಾ)
ಹೆಂಡದ ಗಡಿಗೆ, ಮಲೆನಾಡಿನಲ್ಲಿ ಸುಬ್ಬಿ ಎನ್ನುವ ಪದ ಪ್ರಯೋಗದಲ್ಲಿದೆ.

ಸೆದೆಮುಚ್ಚುವುದು
(ಕ್ರಿ)
ಆವಿಗೆಯಲ್ಲಿ ಮಡಕೆಗಳನ್ನು ಸುಡಲು ಜೋಡಿಸಿಟ್ಟ ಮೇಲೆ ಆವಿಗೆಯ ಮೇಲ್ಬಾಗಕ್ಕೆ ಸೊಪ್ಪುಸೆದೆ ಹಾಕಿ ಮುಚ್ಚುವುದು. ನಂತರ ಅದರ ಮೇಲೆ ಒಣ ಮಸಿ ಮುಚ್ಚುವರು.

ಸೊಡ್ಲು
(ನಾ)
ಪಣತಿ, ಹಣತಿ

ಸೊಳ
(ನಾ)
ಸುಳ, ಸಲಪ, ಕೈಮಣಿ, ಮಡಿಕೆ ಬಡಿಯುವ ಕಟ್ಟಿಗೆಯ ಸಾಧನ, ತಟ್ಟುವ ಹಲಗೆ, ಕುಂಬಾರಿಕೆಯಲ್ಲಿ ಬಳಸುವ ಮುಖ್ಯ ಸಾಧನ, ಇದನ್ನು ಬೇವು, ಜಾಲಿ, ತೇಗಿನ ಮರದ ಹಲಗೆಯಿಂದ ತಯಾರಿಸುವರು ಸೊಳಗಳಲ್ಲಿ ಕುದುಮು ಮಾಡುವ ಸೊಳ, ಗಟ್ಟಿಸುವ ಸೊಳ, ನುಣಿಸುವ ಸೊಳ, ಅಚ್ಚು ಹಾಕುವ ಸೊಳ ಎಂದು ವಿವಿಧ ಪ್ರಕಾರಗಳಿವೆ.

ಸೋರೆ
(ನಾ)
ಸ್ವಾರಿ, ಮುದ್ದಿಸ್ವಾರಿ, ಮಡಕೆ, ಗಡಿಗೆ, ಈ ಪದ ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಳಕೆಯಲ್ಲಿದೆ. ಅಡುವ ಸೋರೆಕೊಟ್ಟು ಬಾಯ್ಗೆ ಬದ್ನಿಕಾಯಿ ಇಟಗಂಡ್ಲು (ಗಾದೆ) ಹಸ್ತನಾಯಿ ಮುದ್ದಿಸ್ವಾರಿ ಮೂಸಿನೋಡ್ತಂತ (ಗಾದೆ)


logo