ಅನಿರೀಕ್ಷಿತವಾಗಿ; ಇದ್ದಕ್ಕಿದ್ದ ಹಾಗೆ; ಹಠಾತ್ತಾಗಿ: came upon them unawares ಅವರನ್ನು ಹಠಾತ್ತಾಗಿ ಸಂಧಿಸಿದ.
ಪರಿವೆಯಿಲ್ಲದೆ; ತಿಳಿಯದೆ; ಪರಿಜ್ಞಾನವಿಲ್ಲದೆ; ಅರಿವಿಲ್ಲದೆ: must have dropped it unawares ಅದನ್ನು ಎಲ್ಲೋ ಅರಿವಿಲ್ಲದೆ ಉದುರಿಸಿರಬೇಕು.
unbacked
ಗುಣವಾಚಕ
ಬೆಂಬಲ ಕೊಡುವವರಿಲ್ಲದ; ಸಹಾಯಕರಿಲ್ಲದ.
(ಜೂಜು, ಪಂದ್ಯ, ಮೊದಲಾದವುಗಳಲ್ಲಿ) ಪಂಥ, ಪಂದ್ಯ – ಕಟ್ಟುವವರಿಲ್ಲದ.
(ಕುರ್ಚಿ, ಚಿತ್ರ, ಮೊದಲಾದವುಗಳ ವಿಷಯದಲ್ಲಿ) ಬೆನ್ನಿಲ್ಲದ; ಬೆನ್ನಾಸರೆಯಿಲ್ಲದ.
unbag
ಸಕರ್ಮಕ ಕ್ರಿಯಾಪದ
ಚೀಲದಿಂದ ಹೊರತೆಗೆ.
unbalance
ಸಕರ್ಮಕ ಕ್ರಿಯಾಪದ
ಸಮತೂಕ ತಪ್ಪಿಸು.
(ದೇಹ, ಮನಸ್ಸು, ಮೊದಲಾದವನ್ನು) ಹದಗೆಡಿಸು; ಕೆಡಿಸು; ಏರುಪೇರಾಗಿಸು; ಸಮತೋಲ ತಪ್ಪಿಸು: unbalanced by the blow ಏಟಿನಿಂದ ಸಮತೋಲ ತಪ್ಪಿತು. the shock unbalanced him ಆಘಾತ ಅವನನ್ನು ಹದಗೆಡಿಸಿತು.