logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

occurrence
ನಾಮವಾಚಕ ಪದಗುಚ್ಛ
of frequent occurrence ಪದೇ ಪದೇ ನಡೆಯುತ್ತಿರುವ.
  • ನಡೆಯುವುದು; ಸಂಭವಿಸುವುದು; ಆಗುವುದು; ಘಟಿಸುವುದು.
  • ಘಟನೆ; ಸಂಗತಿ; ಆಗುವ ಯಾ ಆದ ವಿಷಯ; ನಡೆಯುವ ಯಾ ನಡೆದ ವಿಚಾರ; ಸಂಭವಿಸಿದ್ದು ಯಾ ಸಂಭವಿಸುವ ವಿಚಾರ, ಸಮಾಚಾರ.

  • ocean
    ನಾಮವಾಚಕ ಪದಗುಚ್ಛ
  • ಸಾಗರ; ಸಮುದ್ರ; ಭೂಗೋಳಶಾಸ್ತ್ರಜ್ಞರು ಪ್ರಪಂಚದ ಜಲರಾಶಿಯನ್ನು ವಿಭಾಗಿಸಿ ಹೆಸರಿಸಿರುವ (ಅಟ್ಲಂಟಿಕ್‍, ಪೆಸಿಹಿಕ್‍, ಇಂಡಿಯನ್‍, ಆರ್ಕ್‍ಟಿಕ್‍ ಮತ್ತು ಅಂಟಾರ್ಕ್‍ಟಿಕ್‍) ಭಾಗಗಳಲ್ಲೊಂದು.
  • (ಭೂ ಮಂಡಲದ ಭೂಪ್ರದೇಶವನ್ನೆಲ್ಲ ಬಳಸಿಕೊಂಡಿರುವ) ವಿಶಾಲ ಸಾಗರ.
  • (ಕಾವ್ಯಪ್ರಯೋಗ) ಕಡಲು; ಸಮುದ್ರ; ಸಾಗರ: the dark unfathomed caves of ocean ಕಡಲಿನ ಆಳವರಿಯದ ಕಗ್ಗವಿಗಳು.
  • (ರೂಪಕವಾಗಿ) (ಬಹುವಚನದಲ್ಲಿ) ಅಪಾರ ವಿಸ್ತಾರ; ಅಪರಿಮಿತ ರಾಶಿ: oceans of time ಕಾಲದ ಅಪಾರ ವಿಸ್ತಾರ, ಅನಂತ ವೈಶಾಲ್ಯ.

  • ocean tramp
    ನಾಮವಾಚಕ
    ಅಲೆಮಾರಿ ನೌಕೆ (ಮುಖ್ಯವಾಗಿ ಸ್ಟೀಮರ್‍); ಯಾವುದೇ ನಿಯತವಾದ ಯಾನ ಮಾರ್ಗವಿಲ್ಲದೆ, ಎಲ್ಲೆಂದರಲ್ಲಿಗೆ ಹೋಗುವ ಹಡಗು.

    ocean-going
    ಗುಣವಾಚಕ
    (ಹಡಗಿನ ವಿಷಯದಲ್ಲಿ) ಸಾಗರಗಾಮಿ; ಸಮುದ್ರವನ್ನು ದಾಟಲು ಶಕ್ತವಾದ; ಸಮುದ್ರಯಾನ ಮಾಡಲು ಶಕ್ತವಾದ.

    oceanarium
    ನಾಮವಾಚಕ
    ಸಾಗರೋದ್ಯಾನ; ಸಾಗರಜೀವಿ ಸಂಗ್ರಹಾಲಯ; ಸಮುದ್ರಪ್ರಾಣಿಗಳನ್ನು ಸಾಕಲು ಬಳಸುವ ಸಮುದ್ರನೀರಿನ ದೊಡ್ಡ ಜಲೋದ್ಯಾನ.

    Oceania
    ನಾಮವಾಚಕ
    ಓಷಿಯಾನಿಯ; ಮಧ್ಯ ಮತ್ತು ದಕ್ಷಿಣ ಪೆಸಿಹಿಕ್‍ ಸಾಗರದ ದ್ವೀಪಗಳು; (ಕೆಲವೊಮ್ಮೆ) ಆಸ್ಟ್ರಲೇಷಿಯ ಮತ್ತು ಮಲೇಷಿಯಾ ದ್ವೀಪಸ್ತೋಮ.

    Oceanian
    ಗುಣವಾಚಕ
    ಓಷಿಯಾನಿಯದ ಯಾ ಓಷಿಯಾನಿಯಕ್ಕೆ ವಿಶಿಷ್ಟವಾದ.

    Oceanian
    ನಾಮವಾಚಕ
    ಓಷಿಯಾನಿಯದವನು; ಓಷಿಯಾನಿಯದ ನಿವಾಸಿ.

    oceanic
    ಗುಣವಾಚಕ
  • ಸಾಗರದ ಯಾ ಸಾಗರದಂಥ ಯಾ ಸಾಗರದ ಹತ್ತಿರದ.
  • (ಹವಾಮಾನದ ವಿಷಯದಲ್ಲಿ) ಸಾಗರಪರಿಣಾಮಿ; ಸಾಗರದಿಂದ ಪ್ರಭಾವಿತವಾಗುವ.
  • ದೂರ ಸಾಗರದ; ಖಂಡಗಳಿಂದ ದೂರವಿರುವ ಸಾಗರದ ಭಾಗದ.
  • (Oceanic) ಓಷಿಯಾನಿಯದ.

  • Oceanid
    ನಾಮವಾಚಕ
    (ಗ್ರೀಕ್‍ ಪುರಾಣ) ಸಾಗರಕನ್ಯೆ; ಕಡಲಪ್ಸರೆ.


    logo