(ವಾಣಿಜ್ಯ ನೌಕೆಯಲ್ಲಿ) ಮುಂದಣ ದಕ್ಕೆಗೂ ಹಿಂಭಾಗದ ಅತ್ಯಂತ ಮೇಲಣ ದಕ್ಕೆಗೂ ನಡುವಣ ದಕ್ಕೆ.
main line
ನಾಮವಾಚಕ
ಮುಖ್ಯವಾದ, ಪ್ರಮುಖವಾದ – ರೈಲು ಮಾರ್ಗ, ರೈಲು ಹಾದಿ.
(ಅಶಿಷ್ಟ) (ಮುಖ್ಯವಾಗಿ ಮಾದಕ ಪದಾರ್ಥ ಚುಚ್ಚಿಕೊಳ್ಳುವ) ಪ್ರಮುಖವಾದ ರಕ್ತನಾಳ.
(ಅಮೆರಿಕನ್ ಪ್ರಯೋಗ) ಮುಖ್ಯರಸ್ತೆ; ಪ್ರಧಾನ ಮಾರ್ಗ.
main stem
ನಾಮವಾಚಕ
(ಅಮೆರಿಕನ್ ಪ್ರಯೋಗ) (ಆಡುಮಾತು)= main street\((1)\).
main street
ನಾಮವಾಚಕ
(ಒಂದು ಪಟ್ಟಣದ) ಪ್ರಧಾನ ವೀಥಿ, ಬೀದಿ; ದೊಡ್ಡಬೀದಿ; ಪ್ರಧಾನಬೀದಿ; ರಾಜಬೀದಿ; ರಾಜಮಾರ್ಗ.
(Main Street) (ಅಮೆರಿಕನ್ ಪ್ರಯೋಗ) ಐಹಿಕ ಭೋಗಸಿದ್ಧಾಂತ; ಲೌಕಿಕ ಸುಖ ಸಿದ್ಧಾಂತ; (ಅಮೆರಿಕದ ಸಾಹಿತಿ ಸಿಂಕ್ಲೇರ್ ಲೂಯಿಸ್‍ನ ಈ ಹೆಸರಿನ ಕಾದಂಬರಿಯಲ್ಲಿ ಚಿತ್ರಿಸಿರುವ ಜೀವನರೀತಿಯನ್ನು ಸೂಚಿಸಲು ಬಳಸಿದ ಪದ): Main Street ideals ಭೋಗಜೀವನದ ಆದರ್ಶಗಳು; ದೊಡ್ಡ ಬೀದಿಯ ಧ್ಯೇಯಗಳು.
main yard
ನಾಮವಾಚಕ
(ನೌಕಾಯಾನ) ಮುಖ್ಯ ಹಾಯಿಯನ್ನು ಕಟ್ಟುವ ಪ್ರಧಾನ ಅಡ್ಡ – ದಿಮ್ಮಿ, ಹಲಗೆ.
mainframe
ನಾಮವಾಚಕ
ಮೇನ್‍ಹ್ರೇಮ್:
(ಕಂಪ್ಯೂಟರಿನಲ್ಲಿ) ಕೇಂದ್ರ ಸಂಸ್ಕರಣಾ ಘಟಕ (central processing unit) ಮತ್ತು ಪ್ರಧಾನ ಸ್ಮೃತಿಕೋಶ.
(ಅನೇಕ ವೇಳೆ ವಿಶೇಷಣವಾಗಿ ಪ್ರಯೋಗ) ದೊಡ್ಡ ಕಂಪ್ಯೂಟರು; ಬೃಹತ್ ಕಂಪ್ಯೂಟರು, ಗಣಕ ಯಂತ್ರ.
mainland
ನಾಮವಾಚಕ
(ಸುತ್ತಲ ದ್ವೀಪಗಳನ್ನು ಬಿಟ್ಟು, ಒಂದು ದೇಶಕ್ಕೋ ಖಂಡಕ್ಕೋ ಸೇರಿದ) ಮುಖ್ಯ ಭೂಭಾಗ; ಪ್ರಧಾನ ಭೂಭಾಗ.
(Mainland) ಮೇನ್‍ಲಂಡ್; ಆರ್ಕ್‍ನಿ ಮತ್ತು ಷೆಟ್ಲಂಡ್ ದ್ವೀಪಗಳಲ್ಲಿ ಅತ್ಯಂತ ದೊಡ್ಡ ದ್ವೀಪ(ದ ಹೆಸರು).
mainlander
ನಾಮವಾಚಕ
(ಸುತ್ತಲ ದ್ವೀಪಗಳನ್ನು ಬಿಟ್ಟು, ಒಂದು ದೇಶಕ್ಕೋ ಖಂಡಕ್ಕೋ ಸೇರಿದ) ಮುಖ್ಯ ಭೂಭಾಗವಾಸಿ; ಪ್ರಧಾನ ಭೂಭಾಗದಲ್ಲಿ ವಾಸಿಸುವವ.
mainline
ಕ್ರಿಯಾಪದ
ಅಕರ್ಮಕ ಕ್ರಿಯಾಪದ
(ಅಶಿಷ್ಟ) ಸಕರ್ಮಕ ಕ್ರಿಯಾಪದ (ಮಾದಕ ವಸ್ತುಗಳನ್ನು) ರಕ್ತನಾಳದ ಮೂಲಕ (intravenous) ಚುಚ್ಚು. ರಕ್ತನಾಳದ ಮೂಲಕ ಮಾದಕ ಪದಾರ್ಥಗಳನ್ನು ಚುಚ್ಚಿಕೊ.