logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lambdoid
ಗುಣವಾಚಕ
ಲಾಮ್ಡಾಕಾರದ; ಲ್ಯಾಮ್ಡ್‍ $(Latinಅದ)$ ಆಕೃತಿಯ: lambdoid suture ಲ್ಯಾಮ್ಡ ಹೊಲಿಗೆ; ತಲೆಬುರುಡೆಯ ಮೇಲ್ಭಾಗದ ಪಕ್ಕದ ಮೂಳೆಗಳನ್ನೂ ಹಿಂದಲೆಯ ಮೂಳೆಯನ್ನೂ ಕೂಡಿಸುವ ಸೇರುವೆ.

lambdoidal
ಗುಣವಾಚಕ
= lambdoid.

lambency
ನಾಮವಾಚಕ
  • ಸೌಮ್ಯಪ್ರಕಾಶ; ಮೃದು, ಮಿದು ಬೆಳಕು.
  • ಕಣ್ಣು, ಆಕಾಶ, (ಮೊದಲಾದವುಗಳ ವಿಷಯದಲ್ಲಿ) ಮೃದು ಕಾಂತಿ.
  • (ಬುದ್ಧಿಯ ವಿಷಯದಲ್ಲಿ) ನಯವಾದ ಸೊಬಗು.

  • lambent
    ಗುಣವಾಚಕ
  • (ಉರಿಯ ವಿಷಯದಲ್ಲಿ) ಸುಡದೆ ಸುಳಿದಾಡುವ; ಮೇಲ್ಮೈಯನ್ನು ಸುಡದೆ ಹಗುರವಾಗಿ (ಒಂದರ ಮೇಲೆ) ಆಡುತ್ತಿರುವ.
  • (ಬೆಳಕಿನ ವಿಷಯದಲ್ಲಿ) ಮಿದುಬೆಳಕಿನ; ಸೌಮ್ಯ ಪ್ರಕಾಶದ; ತೀಕ್ಷ್ಣವಲ್ಲದ; ಮೃದುವಾದ.
  • (ಕಣ್ಣು, ಆಕಾಶ, ಮೊದಲಾದವುಗಳ ವಿಷಯದಲ್ಲಿ) ಮಂದ ಪ್ರಕಾಶದ; ಮೃದುಕಾಂತಿಯ; ಸೌಮ್ಯ ಪ್ರಕಾಶದಿಂದ ಕೂಡಿದ.
  • (ಬುದ್ಧಿ, ಚಮತ್ಕಾರ, ಮೊದಲಾದ) ನಯಸೊಬಗಿನ.

  • lambently
    ಕ್ರಿಯಾಪದ
  • (ಉರಿಯ ವಿಷಯದಲ್ಲಿ) ಸುಡದೆ ಮೇಲೆ ಸುಳಿದಾಡುತ್ತಾ.
  • (ಬೆಳಕಿನ ವಿಷಯದಲ್ಲಿ) ಸೌಮ್ಯಪ್ರಕಾಶದಿಂದ.
  • (ಕಣ್ಣು ಮೊದಲಾದವುಗಳ ವಿಷಯದಲ್ಲಿ) ಮೃದುಕಾಂತಿಯಿಂದ ತುಂಬಿ.
  • (ಬುದ್ಧಿಯ ವಿಷಯದಲ್ಲಿ) ನಯ ಸೊಬಗಿನಿಂದ.

  • lamber
    ನಾಮವಾಚಕ
  • (ಗಬ್ಬದ ಕುರಿಯ) ಆರೈಕೆದಾರ; ಗಬ್ಬದ ಕುರಿಗಳನ್ನು ಆರೈಕೆ ಮಾಡುವವನು.
  • ಗಬ್ಬದ ಕುರಿ.

  • lambert
    ನಾಮವಾಚಕ
    ಲ್ಯಾಂಬರ್ಟ್‍; ಯಾವುದೇ ಮೇಲ್ಮೈ ಪ್ರಕಾಶವನ್ನು ಅಳೆಯುವಾಗ ಬಳಸುವ ಮಾನ, ಚದರ ಸೆಂಮೀ. ಒಂದು ಲ್ಯೂಮೆನ್‍.

    Lambeth Conference
    ನಾಮವಾಚಕ
    ಲ್ಯಾಂಬೆತ್‍ ಸಮ್ಮೇಳನ; ಕ್ರೈಸ್ತ ಆಂಗ್ಲಿಕನ್‍ ಪಂಗಡದ ಸರ್ವಬಿಷಪ್ಪರ ಸಮ್ಮೇಳನ, ಸಭೆ.

    Lambeth degree
    ನಾಮವಾಚಕ
    ಲ್ಯಾಂಬೆತ್‍ ಪದವಿ; ಆರ್ಚ್‍ ಬಿಷಪ್‍ ಆಹ್‍ ಕ್ಯಾಂಟರ್ಬರಿ ನೀಡುವ ಗೌರವ ಪದವಿ.

    lambhood
    ನಾಮವಾಚಕ
    ಕುರಿಮರಿತನ; (ಕುರಿಮರಿಯ) ಎಳೆತನ, ಎಳಮೆ.


    logo