logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

edgy
ಗುಣವಾಚಕ
  • ಚೂಪುತಿದಿಯ; ಚೂಪಲಗಿನ; ಕೂರ್ಮೊನೆಯ.
  • (ಚಿತ್ರಕಲೆ) ಬಹಳ ಸ್ಫುಟವಾದ; ಕೂರಾದ ಹೊರರೇಖೆಯುಳ್ಳ.
  • ಕಿರಿಕಿರಿಯ; ಸಿಡುಕಿನ; ರೇಗುಸ್ವಭಾವದ.

  • edh
    ನಾಮವಾಚಕ
    ಹಳೆಯ ಇಂಗ್ಲಿಷ್‍ ಮತ್ತು ಐಸ್‍ಲಂಡ್‍ ಭಾಷೆಗಳ th ಎಂಬ ಅಕ್ಷರ.

    edibility
    ನಾಮವಾಚಕ
    ಖಾದ್ಯತೆ; ತಿನ್ನಲು ಯೋಗ್ಯವಾಗಿರುವಿಕೆ; ತಿನ್ನತಕ್ಕುದಾಗಿರುವುದು.

    edible
    ಗುಣವಾಚಕ
    ತಿನ್ನುವಂತಹ; ತಿನ್ನಲು ಬರುವ; ತಿನ್ನಲು ಯೋಗ್ಯ; ಖಾದ್ಯ; ಭೋಜ್ಯ.

    edible
    ನಾಮವಾಚಕ
    ತಿಂಡಿತಿನಸು; ಭಕ್ಷ್ಯ; ಖಾದ್ಯ.

    edict
    ನಾಮವಾಚಕ ಪದಗುಚ್ಛ
    (ತಕ್ಕ ಅಧಿಕಾರಿ ಘೋಷಿಸಿದ, ಪ್ರಕಟಿಸಿದ) ಆಜ್ಞೆ; ರಾಜಶಾಸನ; ರಾಜಲೇಖ; ಫರ್ಮಾನು; ಹುಕುಮು; ಆದೇಶ; ವಿಧಿ; ಕಟ್ಟಳೆ. Edict of Nantes ನಾಂತೆಯ ಶಾಸನ; ಪ್ರಾಟೆಸ್ಟಂಟರ ಬಗ್ಗೆ ಸಹನೆ ತೋರಲು ಹ್ರಾನ್ಸಿನ ನಾಲ್ಕನೆಯ ಹೆನ್ರಿ ಹೊರಡಿಸಿದ, ಆಮೇಲೆ ಹದಿನಾಲ್ಕನೆಯ ಲೂಯಿ ಹಿಂತೆಗೆದುಕೊಂಡ, ರಾಜಾಜ್ಞೆ.

    edictal
    ಗುಣವಾಚಕ
    ರಾಜಶಾಸನದ; ರಾಜಾಜ್ಞೆಗೆ ಸಂಬಂಧಿಸಿದ.

    edification
    ನಾಮವಾಚಕ
  • ಆತ್ಮೋದ್ಧಾರ; ಆತ್ಮೋನ್ನತಿ; ಆಧ್ಯಾತ್ಮಿಕ ಪ್ರಯೋಜನ.
  • ನೈತಿಕ ಅಭಿದ್ಧಿ.
  • ಮಾನಸಿಕ — ಬೆಳವಣಿಗೆ, ಅಭಿದ್ಧಿ.
  • (ವ್ಯಂಗವಾಗಿ ಸಹ) (ಒಬ್ಬನನ್ನು ಉತ್ತಮಗೊಳಿಸುವ) ಅರಿವು; ತಿಳಿವಳಿಕೆ; ಜ್ಞಾನ; ನೀತಿಬೋಧೆ.

  • edifice
    ನಾಮವಾಚಕ
    (ರೂಪಕವಾಗಿ ಸಹ) (ಮುಖ್ಯವಾಗಿ ದೊಡ್ಡ, ಭವ್ಯವಾದ) ಕಟ್ಟಡ; ಭವನ; ಮಂದಿರ; ಸೌಧ: the edifice of science ವಿಜ್ಞಾನ — ಮಂದಿರ, ಸೌಧ, ಭವನ.

    edify
    ಸಕರ್ಮಕ ಕ್ರಿಯಾಪದ
  • ಆಧ್ಯಾತ್ಮಿಕವಾಗಿ ಉತ್ತಮಗೊಳಿಸು; ಆತ್ಮೋದ್ಧಾರಕ್ಕೆ ಮಾರ್ಗ ತೋರು.
  • ನೈತಿಕವಾಗಿ ಮೇಲೆತ್ತು; ನೀತಿಬೋಧೆ ಮಾಡು; ನೀತಿಯನ್ನು ಉಪದೇಶಿಸು.
  • ಮನಸ್ಸನ್ನು ಅಭಿದ್ಧಿಗೊಳಿಸು.
  • (ಹೆಚ್ಚಾಗಿ ವ್ಯಂಗ್ಯಾರ್ಥದಲ್ಲಿ) ಉಪದೇಶಿಸು; ಬೋಧಿಸು; ನೀತಿಬೋಧೆ ಮಾಡು; ತಿಳಿವಳಿಕೆ ಕೊಡು; ಜ್ಞಾನ ನೀಡು.


  • logo