logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

date
ನಾಮವಾಚಕ
  • ಖರ್ಜೂರದ ಮರ; ಉತ್ತುತ್ತೆಗಿಡ.
  • ಖರ್ಜೂರ; ಉತ್ತುತ್ತೆಕಾಯಿ.

  • date
    ನಾಮವಾಚಕ ನುಡಿಗಟ್ಟು
  • (ದಾಖಲೆ, ಪತ್ರ, ಕಾಗದ, ಪುಸ್ತಕ, ಶಾಸನ, ಮೊದಲಾದವುಗಳಲ್ಲಿ ನಮೂದಿಸಿರುವ, ಕೆಲವೊಮ್ಮೆ ಸ್ಥಳವೂ ಸೇರಿದಂತೆ ಅವುಗಳನ್ನು ಬರೆದ ಯಾ ಪ್ರಕಟಿಸಿದ ಯಾ ಅನುಷ್ಠಾನಕ್ಕೆ ತಂದ) ತಾರೀಖು; ತೇದಿ; ದಿನಾಂಕ; ದಿನ; ತಿಥಿ.
  • ಸಂಭವ ಕಾಲ; ಯಾವುದಾದರೊಂದು ಜರುಗುವ ಯಾ ಜರುಗಿದ ಕಾಲ.
  • (ಆಡುಮಾತು) (ಕಾಲ, ಸ್ಥಳಗಳ ವಿಷಯದಲ್ಲಿ) ಗೊತ್ತುಪಾಡು; ಏರ್ಪಾಡು; ನಿರ್ಣಯ; ನಿಶ್ಚಯ.
  • ವಯಸ್ಸು; ಜೀವಮಾನ; ಆಯುಸ್ಸು; ಜೀವಿತಕಾಲ.
  • (ಯಾವುದೇ ವಸ್ತು, ವಿಷಯ, ಮೊದಲಾದವು ಉಳಿಯುವ) ಕಾಲ; ಅವಧಿ: sweet things have short date ಒಳ್ಳೆಯದರ ಅವಧಿ ಅಲ್ಪ.
  • (ಪ್ರಾಚೀನ ವಸ್ತುಗಳು ಮೊದಲಾದವುಗಳ) ಅವಧಿ; ಕಾಲ; ಯುಗ.
  • (ಅಮೆರಿಕನ್‍ ಪ್ರಯೋಗ) (ಆಡುಮಾತು) ನಿಶ್ಚಿತಕಾಲ; ವಿಹಾರದಿನಾಂಕ; ಗಂಡು ಹೆಣ್ಣುಗಳು ವಿಹಾರಕ್ಕೆ ಗೊತ್ತು ಮಾಡಿಕೊಂಡಿರುವ ಕಾಲ.
  • ವಿಹಾರವ್ಯಕ್ತಿ; ನಿಶ್ಚಿತವ್ಯಕ್ತಿ; ವಿಹಾರಕ್ಕೆ ಗೊತ್ತು ಮಾಡಿಕೊಂಡ ಹೆಣ್ಣು ಯಾ ಗಂಡು.

  • date
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ ನುಡಿಗಟ್ಟು
    date up (ಆಡುಮಾತು) = 3date (ಸಕರ್ಮಕ ಕ್ರಿಯಾಪದ)\((4)\).
  • (ಪತ್ರ ಮೊದಲಾದವಕ್ಕೆ) ತಾರೀಖು ಹಾಕು; ತೇದಿ ಬರೆ.
  • (ಒಂದು ಘಟನೆಯ, ವಸ್ತುವಿನ) ಕಾಲನಿರ್ದೇಶ ಮಾಡು; ಕಾಲ – ಹೇಳು, ಸೂಚಿಸು: pottery dated to 1500 B.C. ಕ್ರಿಸ್ತಪೂರ್ವ 1500 ಕ್ಕೆ ಸೇರಿದ್ದೆಂದು ಕಾಲನಿರ್ದೇಶ ಮಾಡಿದ ಮಣ್ಣಿನ ಪಾತ್ರೆಗಳು.
  • (ಆಡುಮಾತು) ಹಳೆಯದಾಗಿಸು; ಪ್ರಾಚೀನವಾಗಿಸು; ಗತಕಾಲದ್ದಾಗಿಸು; ಹಿಂದಿನ ಕಾಲಕ್ಕೆ ಸೇರಿಸು: dated fashions ಗತಕಾಲದ ಮಾದರಿಗಳು; ಹಿಂದಿನ ಶೈಲಿಗಳು.
  • (ಅಮೆರಿಕನ್‍ ಪ್ರಯೋಗ, ಆಡುಮಾತು) (ಗಂಡ ಹೆಣ್ಣುಗಳ ವಿಷಯದಲ್ಲಿ) ಪರಸ್ಪರ ವಿಹಾರಕಾಲ ನಿಶ್ಚಯಿಸು, ಗೊತ್ತುಮಾಡು.

  • date-line
    ನಾಮವಾಚಕ
  • (ಭೂಗೋಳಶಾಸ್ತ್ರ) ದಿನಾಂಕ ರೇಖೆ; ಸುಮಾರು $180^\circ$ ರೇಖಾಂಶದಲ್ಲಿ ಬಹುಮಟ್ಟಿಗೆ ಸಾಗರಗಳ ಮೇಲೆಯೇ ಹಾದುಹೋಗುವ, ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸೇರಿಸುವ ಕಾಲ್ಪನಿಕ ರೇಖೆ (ಈ ಗೆರೆಯನ್ನು ಪಶ್ಚಿಮದಿಂದ ಪೂರ್ವಕ್ಕೆ ದಾಟಿದಾಗ ತಾರೀಖಿನಲ್ಲಿ ಒಂದು ದಿನ ಹಿಂದಕ್ಕೆ ಹಾಕುತ್ತಾರೆ).
  • ಶಿರೋನಾಮೆ; ಶೀರ್ಷಿಕೆ; ತಲೆಬರಹ; ವೃತ್ತಾಂತ, ವಿಶೇಷ ಲೇಖನ, ಮೊದಲಾದವುಗಳ ಮೇಲೆ ಬರೆಯುವ, ಸ್ಥಳ ದಿನಾಂಕಗಳನ್ನೊಳಗೊಂಡ ಬರೆಹ.

  • date-palm
    ನಾಮವಾಚಕ
    = 1date(1).

    date-stamp
    ನಾಮವಾಚಕ
  • ದಿನಾಂಕ ಮುದ್ರೆ; ದಿನಾಂಕ ಮೊಹರು; ತಾರೀಖು ಮುದ್ರೆ; ಬಟವಾಡೆ ಮಾಡಿದ ಇಲ್ಲವೆ ಪಡೆದ ದಿನ ಮೊದಲಾದವನ್ನು ದಾಖಲೆ ಮಾಡಲು ಬಳಸುವ, ತಾರೀಖನ್ನು ಹೊಂದಿಸಬಹುದಾದ ರಬ್ಬರ್‍ ಮೊಹರು.
  • ದಿನಾಂಕ ಮುದ್ರೆ; ದಿನಾಂಕ ಮೊಹರಿನಿಂದ ಒತ್ತಿದ – ಮುದ್ರೆ, ಠಸ್ಸೆ.

  • dated
    ಗುಣವಾಚಕ
  • ದಿನಾಂಕದ; ತೇದಿಯ; ದಿನಾಂಕ ಹಾಕಿದ.
  • ರೂಢಿ ತಪ್ಪಿದ; ಬಳಕೆಯಲ್ಲಿಲ್ಲದ; ಚಾಲ್ತಿಯಲ್ಲಿಲ್ಲದ; ಹಿಂದಿನ ಕಾಲದ; ಗತಕಾಲದ; ಹಳೆಯ ಕಾಲದ.
  • (ಪದ ಮತ್ತು ಪದ ಗುಚ್ಛಗಳ ವಿಷಯದಲ್ಲಿ) ಗತಪ್ರಯೋಗದ; ಹಿಂದೆ ಬಳಕೆಯಲ್ಲಿದ್ದು ಈಗ ಇರದ.

  • dateless
    ಗುಣವಾಚಕ
  • ತೇದಿ ಹಾಕದ; ತಾರೀಖಿಲ್ಲದ; ದಿನಾಂಕವಿಲ್ಲದ.
  • ಕೊನೆಯಿಲ್ಲದ; ಕೊನೆಗಾಣದ; ಅನಂತ: dateless night ಕೊನೆಯಿಲ್ಲದ ರಾತ್ರಿ.
  • ಅನಾದಿಕಾಲದ; ಅನಾದಿ; ಮೊದಲಿಲ್ಲದ: dateless rock ಅನಾದಿಕಾಲದ ಬಂಡೆ.
  • ಪ್ರಾಚೀನ; ಪುರಾತನ; ಅನಾದಿ; ಅನಾದಿಯೋ ಎಂಬಷ್ಟು ಹಳೆಯ; ಅನಾದಿ ಪ್ರಾಚೀನ: a dateless work of art ಅನಾದಿಯಾದ ಕಲಾಕೃತಿ.
  • ಗತಿಸದ; ರೂಢಿ ತಪ್ಪದ; ಶಾಶ್ವತ.

  • datelessness
    ನಾಮವಾಚಕ
    ನಿರ್ದಿಷ್ಟ ಕಾಲವನ್ನು ಗೊತ್ತುಪಡಿಸದಿರುವಿಕೆ.

    dater
    ನಾಮವಾಚಕ
    ದಿನಾಂಕ ಮುದ್ರಕ; ತಾರೀಖು ಮುದ್ರೆ ಒತ್ತುವವನು ಯಾ ಒತ್ತುವ ಸಾಧನ.


    logo