logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

calfless
ಗುಣವಾಚಕ
  • ಮೀನಖಂಡವಿಲ್ಲದ.
  • ಕರುವಿಲ್ಲದ.

  • calfskin
    ನಾಮವಾಚಕ
    ಕರುದೊಗಲು; (ಮುಖ್ಯವಾಗಿ ಪುಸ್ತಕಗಳಿಗೆ ರಟ್ಟುಕಟ್ಟಲು ಮತ್ತು ಚಪ್ಪಲಿಮಾಡಲು ಬಳಸುವ) ಕರುವಿನ ಚರ್ಮ ಯಾ ತೊಗಲು.

    Caliban
    ನಾಮವಾಚಕ
    ಪಶುವಿನಂಥವ; ಪಶುಸಮಾನ; ಪಶುಮಾನವ; ನರಪಶು; ನೋಡಲು ವಿಕಾರವಾಗಿ, ಮೃಗಸ್ವಭಾವವನ್ನು ಹೊಂದಿರುವ ವ್ಯಕ್ತಿ.

    caliber
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) =calibre.

    calibrate
    ಸಕರ್ಮಕ ಕ್ರಿಯಾಪದ
  • (ಉರುಳೆ, ನಾಳ ಮೊದಲಾದವುಗಳ) ಒಳವ್ಯಾಸ ಕಂಡುಹಿಡಿ; ಅಂತರ್ವ್ಯಾಸ ಅಳೆ.
  • ಮಾಪನಾಂಕಗಳನ್ನು ಯಾ ಅಳತೆಗೆರೆಗಳನ್ನು ಹಾಕುವ ಮೊದಲು (ನಾಳ, ಅಳತೆಪಾತ್ರೆ ಮೊದಲಾದವುಗಳ) ವ್ಯತ್ಯಾಸಗಳನ್ನು ಯಾ ಹೆಚ್ಚುಕಡಿಮೆಗಳನ್ನು ನಿರ್ಣಯಿಸು.
  • (ವ್ಯತ್ಯಾಸಗಳಿಗೆ ಅವಕಾಶ ಕಲ್ಪಿಸಿ, ನಾಳ ಮೊದಲಾದವುಗಳಿಗೆ) ಅಂಕಿಸು; ಮಾಪನಾಂಕ ಗುರುತಿಸು; ಅಳತೆಗೆರೆಗಳನ್ನು ಹಾಕು; ಅಳತೆ ಅಂಕಿ ಗುರುತಿಸು; ಅಳತೆ ಗುರುತು ಹಾಕು.
  • ಮಾಪನಾಂಕ ನಿರ್ಣಯಿಸು; (ಮಾನಕದೊಂದಿಗೆ ಹೋಲಿಸಿ) ಮಾಪಕದ ಅಳತೆ ಸಂಖ್ಯೆಗಳ ಹೆಚ್ಚು ಕಡಿಮೆಗಳನ್ನು–ನಿಷ್ಕರ್ಷಿಸು, ತಾಳೆ ನೋಡು ಯಾ ಸರಿಪಡಿಸು.

  • calibration
    ನಾಮವಾಚಕ
  • (ಉರುಳೆ, ನಾಳ ಮೊದಲಾದವುಗಳ) ಒಳವ್ಯಾಸ ಕಂಡುಹಿಡಿಯುವಿಕೆ; ಅಂತರ್ವ್ಯಾಸಮಾಪನ.
  • ಮಾಪನಾಂಕ ನಿರ್ಣಯ.
  • (ಮಾಪಕದ ಮೇಲೆ) ಅಳತೆ ಗುರುತು ಹಾಕುವಿಕೆ; ಮಾಪನರೇಖೆಯ ಅಂಕನ.
  • ಅಳತೆಗೆರೆ; ಮಾಪನರೇಖೆ; ಅಳತೆಗುರುತು; ಮಾಪನಾಂಕ; ಅಳತೆ ಅಂಕಿ.

  • calibrator
    ನಾಮವಾಚಕ
    ಕ್ಯಾಲಿಬ್ರೇಟರು:
  • (ನಾಳ ಮೊದಲಾದವುಗಳ) ಒಳವ್ಯಾಸ ಕಂಡುಹಿಡಿಯುವ ಸಾಧನ.
  • ಮಾಪನಾಂಕಲೇಖಿ; ಮಾಪನರೇಖಾಲೇಖಿ; ಅಳತೆಗೆರೆಗಳನ್ನು ಯಾ ಅಳತೆ ಅಂಕಿಗಳನ್ನು ಗುರುತು ಮಾಡುವ ಸಾಧನ.

  • calibre
    ನಾಮವಾಚಕ
  • (ಬ್ರಿಟಿಷ್‍ ಪ್ರಯೋಗ) (ಮುಖ್ಯವಾಗಿ ಕೊಳವೆಯ, ಬಂದೂಕದ) ಒಳವ್ಯಾಸ; ನಾಳಾಂತರ್ವ್ಯಾಸ.
  • ಗುಂಡು, ತೋಟಾ ಯಾ ಷೆಲ್ಲಿನ–ವ್ಯಾಸ.
  • ಅಳವು; ಶಕ್ತಿ; ಸಾಮರ್ಥ್ಯ; ಸತ್ತ್ವ; ಅರ್ಹತೆ; ಯೋಗ್ಯತೆ; ಪ್ರಾಮುಖ್ಯ; ಪ್ರಾಧಾನ್ಯ; ಗುಣಮಟ್ಟ; ದಕ್ಷತೆ; ಚಾರಿತ್ರ್ಯದ–ಉತ್ಕೃಷ್ಟತೆ, ಗಾಂಭೀರ್ಯ, ಸ್ಥಾನಮಾನ: a mathematician of calibre ದಕ್ಷ ಗಣಿತಜ್ಞ. the moral calibre of the era ಯುಗದ ನೈತಿಕ ಗುಣ ಯಾ ಸತ್ತ್ವ.

  • calices
    ನಾಮವಾಚಕ
    calixನ ಬಹುವಚನ.

    caliche
    ನಾಮವಾಚಕ
    (ಖನಿಜಶಾಸ್ತ್ರ) ಕಲೀಚಿ; ಪೆರು, ಚಿಲಿ, ಮೊದಲಾದ ದೇಶಗಳಲ್ಲಿ ದೊರೆಯುವ ಸೋಡಿಯಂ ನೈಟ್ರೇಟ್‍ ಖನಿಜ, ಮುಖ್ಯವಾಗಿ ಚಿಲಿಸಾಲ್ಟ್‍ ಪೀಟರ್‍.


    logo