logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

absorption
ನಾಮವಾಚಕ
  • (ಭೌತವಿಜ್ಞಾನ) (ದ್ರವ, ಬೆಳಕು, ಮೊದಲಾದವುಗಳ) ಹೀರಿಕೆ; ಚೂಷಣ; ಅವಶೋಷಣ.
  • (ಇನ್ನೊಂದರಲ್ಲಿ) ಸೇರಿಹೋಗುವಿಕೆ; ಲೀನವಾಗುವಿಕೆ.
  • ಮಗ್ನತೆ; ತಲ್ಲೀನತೆ; ತನ್ಮಯತೆ.

  • absorptive
    ಗುಣವಾಚಕ
    (ಭೌತವಿಜ್ಞಾನ) ಹೀರುಗುಣವುಳ್ಳ; ಹೀರುಗುಣದ; ಚೂಷಕ; ಅವಶೋಷಕ: absorptive index ಹೀರಿಕೆ ಸೂಚಿ; ಚೂಷಕಾಂಕ.

    absorptiveness
    ನಾಮವಾಚಕ
    (ಭೌತವಿಜ್ಞಾನ) ಹೀರುವ ಗುಣ; ಚೂಷಕತೆ; ಅವಶೋಷಕತೆ.

    absorptivity
    ನಾಮವಾಚಕ
  • = absorptiveness.
  • ಚೂಷಕತೆಯ ಪ್ರಮಾಣ.

  • absquatulate
    ಅಕರ್ಮಕ ಕ್ರಿಯಾಪದ
    (ಹಾಸ್ಯ ಪ್ರಯೋಗ) ಪರಾರಿಯಾಗು; ಓಡಿಹೋಗು; ಕಂಬಿಕೀಳು; ತಪ್ಪಿಸಿಕೊಂಡು ಹೋಗು; ಕಾಲಿಗೆ ಬುದ್ಧಿ ಹೇಳು.

    abstain
    ಅಕರ್ಮಕ ಕ್ರಿಯಾಪದ
  • ಬಿಟ್ಟುಬಿಡು; ವರ್ಜಿಸು; ತ್ಯಜಿಸು; ಬಳಸದಿರು ಯಾ ದೂರವಿರು: to abstain from meat ಮಾಂಸವನ್ನು ವರ್ಜಿಸು.
  • (ಮದ್ಯ) ಕುಡಿಯದಿರು; ಸೇವಿಸದಿರು; ವರ್ಜಿಸು.
  • ಓಟು ಮಾಡದಿರು; ಮತ ಚಲಾಯಿಸಲು ನಿರಾಕರಿಸು.

  • abstainer
    ನಾಮವಾಚಕ ಪದಗುಚ್ಛ
    ವರ್ಜಕ; ಕೆಲವು ಪದಾರ್ಥಗಳನ್ನು ತಿನ್ನದವ ಯಾ ಕುಡಿಯದವ, ಮುಖ್ಯವಾಗಿ ಪಾನವರ್ಜಕ.total abstainer ಮದ್ಯವರ್ಜಕ; ಎಂದೂ ಮದ್ಯ ಕುಡಿಯದವ.

    abstaining
    ಗುಣವಾಚಕ
  • (ಭೋಗಗಳಲ್ಲಿ, ಅನ್ನಪಾನಾದಿಗಳಲ್ಲಿ) ಸಂಯಮವನ್ನು ಆಚರಿಸುವ.
  • (ಭೋಗ ಮೊದಲಾದವನ್ನು) ವರ್ಜಿಸುವ.

  • abstemious
    ಗುಣವಾಚಕ
    (ವ್ಯಕ್ತಿಗಳ, ನಡೆನುಡಿಗಳ ವಿಷಯದಲ್ಲಿ ಮುಖ್ಯವಾಗಿ ಅನ್ನಪಾನಾದಿಗಳಲ್ಲಿ) ಮಿತವಾಗಿರುವ; ಹಿಡಿತವುಳ್ಳ; ಮಿತಾಹಾರಿಯಾದ; ಸಂಯಮದಿಂದ ಕೂಡಿದ.

    abstemiously
    ಕ್ರಿಯಾವಿಶೇಷಣ
    ಹಿಡಿತದಿಂದ; ಮಿತವಾಗಿ; ಸಂಯಮದಿಂದ.


    logo