logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tambour
ನಾಮವಾಚಕ
  • ಒಂದು ಬಗೆಯ ತಮಟೆ ಯಾ ಸಣ್ಣ ನಗಾರಿ ಯಾ ಮದ್ದಲೆ.
    1. ಕಸೂತಿ ಚೌಕಟ್ಟು; ಕಸೂತಿ ಅಲಂಕಾರ ಮಾಡುವಾಗ ರೇಷ್ಮೆಬಟ್ಟೆ ಮೊದಲಾದವನ್ನು ಎಳೆದು ಹರಡಿ ಹಿಡಿದು ಕೊಳ್ಳುವ ದುಂಡನೆಯ ಚೌಕಟ್ಟು.
    2. ಈ ರೀತಿ ಮಾಡಿದ ಕಸೂತಿ ಯಾ ಕಸೂತಿ ಬಟ್ಟೆ.
  • (ವಾಸ್ತುಶಿಲ್ಪ) ದಿಂಡುಕಲ್ಲು; ಕಂಬದ ದಿಂಡಿನಲ್ಲಿನ ಉರುಳೆಯಾಕಾರದ ಭಾಗ.
  • (ವಾಸ್ತುಶಿಲ್ಪ) (ಚರ್ಚ್‍ಗಳ ಮುಮಂಪ ಮೊದಲಾದವುಗಳಲ್ಲಿ ಗಾಳಿ ತಡೆಯಲು ಮಾಡಿರುವ) ಚಾವಣಿ ಮತ್ತು ಮಡಿಸುವ ಬಾಗಿಲುಗಳಿರುವ ಮೊಗಸಾಲೆ.
  • (ವಾಸ್ತುಶಿಲ್ಪ) ವರ್ತುಲದಿಂಡು; ವಿವಿಧ ಕಟ್ಟಡಗಳಲ್ಲಿನ ವೃತ್ತಾಕಾರದ ಭಾಗ.
  • ಮದ್ದಲೆ ಮೀನು; ಮದ್ದಲೆ ಆಕಾರದ ಯಾ ಮದ್ದಲೆ ಶಬ್ದ ಮಾಡುವ ಹಲವು ಬಗೆಯ ಮೀನು.
  • ‘ಹೈವ್ಸ್‍’ ಎಂಬ ಚೆಂಡಾಟದ ಕ್ರೀಡಾಂಗಣದ ಓರೆಗೋಡೆ ಯಾ ಚಾಚುಗೋಡೆ.

  • tambour
    ಸಕರ್ಮಕ ಕ್ರಿಯಾಪದ
    (ಕಸೂತಿ ಚೌಕಟ್ಟಿನ ಮೇಲೆ ಹರಡಿಕೊಂಡು) ಕಸೂತಿಹಾಕು; ಕಸೂತಿ ಅಲಂಕಾರ ಮಾಡು ( ಅಕರ್ಮಕ ಕ್ರಿಯಾಪದ ಸಹ).

    tamboura
    ನಾಮವಾಚಕ
    (ಸಂಗೀತ) (ಭಾರತೀಯ ಸಂಗೀತದಲ್ಲಿ ಶ್ರುತಿಗಾಗಿ ಬಳಸುವ) ತಂಬಊರಿ.

    tambourin
    ನಾಮವಾಚಕ
  • ಹ್ರಾನ್ಸಿನ ಪ್ರೊವೆನ್ಸ್‍ ಪ್ರಾಂತದ ಒಂದು ಬಗೆಯ ನೀಳಮದ್ದಲೆ ಯಾ ತಮಟೆ.
  • ಇದನ್ನು ಸಹವಾದ್ಯವಾಗಿ ಬಳಸುವ ನೃತ್ಯ ಯಾ ಸಂಗೀತ.

  • tambourine
    ನಾಮವಾಚಕ
  • (ಕ)ಂಜರಿ; ಖಣಿಖಣಿ ಶಬ್ದಮಾಡುವ ಸಣ್ಣ ಬಿಲ್ಲೆಗಳನ್ನು ಮರದ ಯಾ ಲೋಹದ ದುಂಡುಕಟ್ಟಿನ ಸುತ್ತಲೂ ಅಳವಡಿಸಿದ, ದುಂಡನೆಯ ತಾಳವಾದ್ಯ. Figure: tambourines
  • (ಆಹ್ರಿಕದ) ಖಂಜರಿಯಂಥ ಧ್ವನಿಯಿರುವ ಪಾರಿವಾಳ.

  • tambourinist
    ನಾಮವಾಚಕ
    ಖಂಜರಿವಾದಕ; ಖಂಜರಿ ಬಾರಿಸುವವ.

    tame
    ಸಕರ್ಮಕ ಕ್ರಿಯಾಪದ
  • (ಕಾಡುಪ್ರಾಣಿ, ಹಕ್ಕಿ, ಮೊದಲಾದವನ್ನು) ಪಳಗಿಸು; ಸಾಧುಮಾಡು.
  • (ವ್ಯಕ್ತಿಯನ್ನು ಯಾ ಅವನ ಕೆಚ್ಚು, ಉತ್ಸಾಹ, ಮೊದಲಾದವನ್ನು) ಇಳಿಸು; ಕುಗ್ಗಿಸು; ಮುರಿ; ದಮನಮಾಡು.
  • (ಕಾಡು, ನೀರು, ಮೊದಲಾದವನ್ನು) ನಿಯಂತ್ರಿಸು; ನಿಯಂತ್ರಣಕ್ಕೊಳಪಡಿಸು; ಉಪಯೋಗಕ್ಕೆ ಬರುವಂತೆ, ಪ್ರಯೋಜನಕ್ಕೆ ಆಗುವಂತೆ ಮಾಡು.
    1. (ಭೂಮಿಯನ್ನು) ವ್ಯವಸಾಯಮಾಡು; ಸಾಗುವಳಿ ಮಾಡು; ಸಾಗುವಳಿಗೆ–ತರು, ಒಳಪಡಿಸು.
    2. (ಗಿಡವನ್ನು) ಬೆಳೆಸು; ಸಾಕು.

  • tame
    ಗುಣವಾಚಕ
  • (ಸಾಕಿ) ಪಳಗಿಸಿದ; ಸಾಧುವಾದ: a tame bear ಪಳಗಿಸಿದ ಕರಡಿ.
  • (ವ್ಯಕ್ತಿಯ ವಿಷಯದಲ್ಲಿ ಹಾಸ್ಯ ಪ್ರಯೋಗ) ಸಾಧು; ಹೇಳಿದಂತೆ ಕೇಳುವ ಮತ್ತು ಸ್ವಂತ ಕೆಲಸಕ್ಕೆ ಒದಗತಕ್ಕವನೆಂದು ಹತ್ತಿರ ಇಟ್ಟುಕೊಂಡ.
  • ನಿಸ್ಸತ್ತ್ವದ; ನಿಸ್ಸಾರ; ಸಪ್ಪೆ: a very tame party ಬಹಳ ನಿಸ್ಸಾರವಾದ ಕೂಟ. a tame description ಸಪ್ಪೆ ವರ್ಣನೆ.
  • (ವ್ಯಕ್ತಿಯ ವಿಷಯದಲ್ಲಿ) ತಗ್ಗಿ ನಡೆಯುವ; ಮೆದುಗಲಿಯಾದ; ನಮ್ರ.
    1. (ಅಮೆರಿಕನ್‍ ಪ್ರಯೋಗ) (ಭೂಮಿಯ ವಿಷಯದಲ್ಲಿ) ಸಾಗುವಳಿ ಮಾಡಿದ; ಸಾಗುವಳಿಗೆ ತಂದ.
    2. (ಗಿಡದ ವಿಷಯದಲ್ಲಿ) ಬೆಳೆಸಿದ; ಸಾಕಿದ.

  • tameability
    ನಾಮವಾಚಕ
    ಪಳಗಿಸಬಲ್ಲಿಕೆ; ಪಳಗಿಸಲು ಸಾಧ್ಯವಾಗಿರುವಿಕೆ.

    tameable
    ಗುಣವಾಚಕ
    ಪಳಗಿಸಬಲ್ಲ; ಸಾಧುವಾಗಿಸಬಲ್ಲ; ನಿಯಂತ್ರಿಸಲು ಸಾಧ್ಯವಾಗುವ.


    logo