logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

occultly
ಕ್ರಿಯಾವಿಶೇಷಣ
  • ಅತೀಂದ್ರಿಯವಾಗಿ; ನಿಸರ್ಗಾತೀತವಾಗಿ.
  • ಮಾಂತ್ರಿಕವಾಗಿ; ಐಂದ್ರಜಾಲಿಕವಾಗಿ.

  • occultness
    ನಾಮವಾಚಕ
  • ಅತೀಂದ್ರಿಯತೆ.
  • ಐಂದ್ರಜಾಲಿಕತೆ; ಮಾಂತ್ರಿಕತೆ.

  • occupancy
    ನಾಮವಾಚಕ
  • (ಒಂದು ಸ್ಥಳದಲ್ಲಿ)
    1. ಇರುವಿಕೆ; ನೆಲೆಸಿರುವಿಕೆ.
    2. ವಾಸ; ಒಕ್ಕಲಿರುವಿಕೆ; ವಾಸಿಸುತ್ತಿರುವಿಕೆ.
  • ಆಸ್ತಿಯ (ಮುಖ್ಯವಾಗಿ ಜಮೀನಿನ) ಹಿಡುವಳಿ, ಅನುಭವ.
  • ಸ್ವಾಮ್ಯ; ಸ್ವಾಧೀನ; ಆಕ್ರಮಣ; ಯಾರ ಒಡೆತನಕ್ಕೂ ಸೇರಿಲ್ಲದ ವಸ್ತುವನ್ನು ವಶಪಡಿಸಿಕೊಂಡು ಅದರ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಿಕೊಳ್ಳುವಿಕೆ.
  • ವಾಸಸ್ಥಾನ; ನಿವಾಸ; ವಾಸ ಮಾಡುತ್ತಿರುವ ಸ್ಥಳ.

  • occupant
    ಗುಣವಾಚಕ
  • (ಒಂದು ಸ್ಥಳದಲ್ಲಿ)
    1. ಇರುವವನು; ನೆಲಸಿಗ.
    2. (ನಿ)ವಾಸಿ; ಒಕ್ಕಲಿರುವವನು; ವಾಸಿಗ; ವಾಸಿಸುತ್ತಿರುವವನು: both occupants of the car were unhurt ಕಾರಿನಲ್ಲಿದ್ದ ಇಬ್ಬರಿಗೂ ಗಾಯವಾಗಲಿಲ್ಲ.
  • ಆಸ್ತಿಯ (ಮುಖ್ಯವಾಗಿ ಜಮೀನಿನ)– ಒಕ್ಕಲು ಹಿಡುವಳಿದಾರ, ಅನುಭವದಾರ.
  • ಸ್ವಾಮ್ಯಸಾಧಕ; ಯಾರ ಒಡೆತನಕ್ಕೂ ಸೇರಿಲ್ಲದ ವಸ್ತುವನ್ನು ವಶಪಡಿಸಿಕೊಂಡು ಅದರ ಮೇಲೆ ತನ್ನ ಹಕ್ಕನ್ನು ಸಾಧಿಸಿಕೊಳ್ಳುವವನು.

  • occupation
    ನಾಮವಾಚಕ ಪದಗುಚ್ಛ
  • (ಒಬ್ಬನ ಶಕ್ತಿ ಗಮನಗಳನ್ನೆಲ್ಲ ಸೆಳೆದುಕೊಳ್ಳುವ, ಒಬ್ಬನ ಕಾಲವನ್ನೆಲ್ಲ ಸೆಳೆದುಕೊಳ್ಳುವ, ಒಬ್ಬನ ಕಾಲವನ್ನೆಲ್ಲ ಹಿಡಿಯುವ) ಕೆಲಸ; ಹವ್ಯಾಸ.
  • ಉದ್ಯೋಗ; ವೃತ್ತಿ; ಕಸಬು; ಕೆಲಸ; ಒಬ್ಬನು ಜೀವನೋಪಾಯಕ್ಕಾಗಿ ಅನುಸರಿಸುವ ತಾತ್ಕಾಲಿಕ ಯಾ ಕಾಯಂ ಆದ, ಉದ್ಯೋಗ.
  • ಆಕ್ರಮಣ; ಸ್ವಾಧೀನ: (ಮುಖ್ಯವಾಗಿ ಸೈನಿಕ ಬಲದಿಂದ ಒಂದು ದೇಶ ಯಾ ಪ್ರದೇಶವನ್ನು) ವಶಪಡಿಸಿಕೊಳ್ಳುವುದು ಯಾ ವಶದಲ್ಲಿ ಹೊಂದಿರುವುದು.
    1. ಆಕ್ರಮಣ; ಆಕ್ರಮಿಸಿರುವಿಕೆ.
    2. ಆಕ್ರಾಂತವಾಗಿರುವಿಕೆ.
    3. ಆಕ್ರಮಣದ ಸ್ಥಿತಿ ಯಾ ಕಾಲ.
  • ಆಸ್ತಿಯ (ಮುಖ್ಯವಾಗಿ ಜಮೀನಿನ)–ಸ್ವಾಮ್ಯ, ಹಿಡುವಳಿ, ಅನುಭವ ಯಾ ಸುಪರ್ದು.

  • occupational
    ಗುಣವಾಚಕ
  • ಉದ್ಯೋಗದ:
    1. ಉದ್ಯೋಗಕ್ಕೆ ಯಾ ವೃತ್ತಿಗೆ ಸಂಬಂಧಿಸಿದ.
    2. ಉದ್ಯೋಗದ ಸ್ವರೂಪದ; ವೃತ್ತೀಯ ಔದ್ಯೋಗಿಕ.
  • (ರೋಗ, ಅಪಾಯ, ಮೊದಲಾದವುಗಳ ವಿಷಯದಲ್ಲಿ) (ಮುಖ್ಯವಾಗಿ ಒಬ್ಬನ) ಉದ್ಯೋಗಕ್ಕೆ, ವೃತ್ತಿಗೆ ಅನುಗತವಾದ; ಒಬ್ಬನ ಉದ್ಯೋಗದಿಂದ ಸಾಮಾನ್ಯವಾಗಿ ಹುಟ್ಟುವ, ಬರುವ, ಆಗುವ: occupational hazard ಔದ್ಯೋಗಿಕ ಅಪಾಯ; (ಒಬ್ಬನ) ವೃತ್ತಿಗೆ ಅನುಗತವಾಗಿ ಒದಗುವ ಅಪಾಯ.

  • occupational therapy
    ನಾಮವಾಚಕ
    ಔದ್ಯೋಗಿಕ ಚಿಕಿತ್ಸೆ; ರೋಗ, ಗಾಯ, ಮೊದಲಾದವುಗಳಿಂದ ಚೇತರಿಸಿಕೊಳ್ಳಲು ರೋಗಿಗೆ ವೈದ್ಯನ ಉಸ್ತುವಾರಿಯಲ್ಲಿ, ಲಘುವಾದ, ಸೃಷ್ಟಿಶೀಲವಾದ, ಯಾವುದಾದರೂ ಮಾನಸಿಕ ಯಾ ದೈಹಿಕ ಕೆಲಸ ವಿಧಿಸಿ ತನ್ಮೂಲಕ ಮಾಡುವ ಚಿಕಿತ್ಸೆ.

    occupier
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಅನುಭವದಾರ; ಒಕ್ಕಲು; (ಮುಖ್ಯವಾಗಿ ಜಮೀನನ್ನು ಯಾ ಮನೆಯನ್ನು) ಮಾಲೀಕನಾಗಿ ಯಾ ಭೋಗ್ಯದಾರನಾಗಿ ಅನುಭವಿಸುತ್ತಿರುವವನು.

    occupy
    ಸಕರ್ಮಕ ಕ್ರಿಯಾಪದ ಪದಗುಚ್ಛ
  • (ಒಂದು ಸ್ಥಳದಲ್ಲಿ)
    1. ಇರು; ನೆಲಸು,
    2. ವಾಸಿಸು ಯಾ ಬಾಡಿಗೆಗೆ ಇರು.
  • (ಸ್ಥಳ, ಕಾಲಗಳನ್ನು) ಹಿಡಿ; ವ್ಯಾಪಿಸು; ಆಕ್ರಮಿಸು.
  • (ಸ್ಥಾನ ಯಾ ಅಧಿಕಾರ) ವಹಿಸು; ವಹಿಸಿರು.
  • (ದೇಶ, ಪ್ರದೇಶ, ಪಟ್ಟಣ, ಯುದ್ಧಕ್ಕೆ ಅನುಕೂಲವಾದ ನೆಲೆ ಮೊದಲಾದವನ್ನು ಸೈನ್ಯ ಬಲದಿಂದ ಯಾ ಅಲ್ಲಿ ನೆಲಸುವುದರಿಂದ) ವಶಪಡಿಸಿಕೊ; ಸ್ವಾಧೀನ ಪಡಿಸಿಕೊ; ಆಕ್ರಮಿಸು.
  • (ಮುಖ್ಯವಾಗಿ ರಾಜಕೀಯ ಪ್ರತಿಭಟನೆಯಾಗಿ, ಕಟ್ಟಡ ಮೊದಲಾದವನ್ನು) ಆಕ್ರಮಿಸು; (ಕಟ್ಟಡ ಮೊದಲಾದವುಗಳಲ್ಲಿ) ನೆಲಸು; ಜಾಂಡಾ–ಹೂಡು, ಹಾಕು.
  • (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ ಯಾ ಆತ್ಮಾರ್ಥಕ) ನಿರತನಾಗಿಸಿಕೊ; (ಒಂದು ಕೆಲಸದಲ್ಲಿ) ನಿರತನಾಗಿರು.

  • occur
    ಅಕರ್ಮಕ ಕ್ರಿಯಾಪದ
  • (ಒಂದು ಸ್ಥಳದಲ್ಲಿ ಯಾ ಯಾವುದೋ ಪರಿಸ್ಥಿತಿಯಲ್ಲಿ) ಇರು; ಸಿಗು; ಸಿಕ್ಕು; ದೊರೆ; ದೊರಕು.
  • (ಯಾವಾಗಲಾದರೂ) ನಡೆ; ಆಗು; ಸಂಭವಿಸು; ಘಟಿಸು.
  • (ಮುಖ್ಯವಾಗಿ ಅನಿರೀಕ್ಷಿತವಾಗಿ ಯಾ ಸಾಂದರ್ಭಿಕವಾಗಿ) ಮನಸ್ಸಿಗೆ–ಬರು, ತೋರು, ಹೊಳೆ: it occurred to me that you were right ನೀನು (ನಿನ್ನ ವಾದ, ಅಭಿಪ್ರಾಯ, ಮೊದಲಾದವು) ಸರಿ ಎಂದು ನನಗೆ ಹೊಳೆಯಿತು.


  • logo