(ಒಂದು ಬಗೆಯ ಪಗಡೆಯ ಜೂಜಿನಲ್ಲಿ) ದಾಳ ಎಸೆಯುವ ಮೊದಲು ಎಸೆವಾತನು ಕೇಳುವ (5ರಿಂದ 9ರ ವರೆಗಿನ ಯವುದೇ) ಸಂಖ್ಯೆ.
ಹುಂಜಗಳ ಕಾಳಗ.
main
ನಾಮವಾಚಕ
ಪದಗುಚ್ಛ
(ಕಾವ್ಯಪ್ರಯೋಗ ಯಾ ಪ್ರಾಚೀನ ಪ್ರಯೋಗ)
ಸಾಗರ; ಮಹಾ ಸಮುದ್ರ: the Spanish Main ಸ್ಪೇನಿನ ಸಾಗರ.
ಪ್ರಧಾನ ಭೂಭಾಗ; ಮುಖ್ಯ ಭೂಭಾಗ.
(ನೀರು, ಊರಿನ ಕಶ್ಮಲ, ಮೊದಲಾದವು ಹರಿದು ಹೋಗಲು ಮಾಡಿರುವ) ಪ್ರಧಾನ ಕಾಲುವೆ ಯಾ ಮುಖ್ಯ ಚರಂಡಿ.
(ಸಾಮಾನ್ಯವಾಗಿ ಬಹುವಚನದಲ್ಲಿ) (the mains)
(ವಿದ್ಯುದ್ಛಕ್ತಿ, ಅನಿಲ, ನೀರು, ಮೊದಲಾದವುಗಳ ವಿತರಣೆಗಾಗಿ ಇರುವ) ಕೇಂದ್ರೀಯ ವಿತರಣಾ ವ್ಯವಸ್ಥೆ, ನಾಳ ಜಾಲ.
ಗೃಹ ಬಳಕೆಯ ವಿದ್ಯುಚ್ಛಕ್ತಿಯ ಸರಬರಾಜು (ಬ್ಯಾಟರಿಗಳಿಂದ ಸರಬರಾಜು ಮಾಡಿದ್ದಲ್ಲ).
main
ಗುಣವಾಚಕ
ಪದಗುಚ್ಛ
the main chance ಸ್ವಾರ್ಥ; ಸ್ವಹಿತ: have an eye to the main chance ಸ್ವಲಾಭದ ಮೇಲೆ, ಸ್ವಾರ್ಥದ ಮೇಲೆ, ಸ್ವಪ್ರಯೋಜನದ ಮೇಲೆ – ಕಣ್ಣಿಟ್ಟಿರು ಯಾ ದೃಷ್ಟಿಯಿಟ್ಟಿರು.
ಪೂರ್ಣವಾಗಿ, ಪೂರ್ತಿಯಾಗಿ ಪ್ರಯೋಗಿಸಿದ: by main force ಪೂರ್ಣ ಬಲದಿಂದ.
(ಗಾತ್ರ, ಪ್ರಾಮುಖ್ಯ, ವಿಸ್ತಾರ ಯಾ ವ್ಯಾಪ್ತಿಯಲ್ಲಿ) ಪ್ರಧಾನ; ಪ್ರಮುಖ: the main body (of army etc.) (ಸೈನ್ಯ ಮೊದಲಾದವುಗಳ) ಪ್ರಧಾನ ಭಾಗ. the main point (in the argument) ವಾದದಲ್ಲಿ ಪ್ರಮುಖ ಅಂಶ.
main brace
ನಾಮವಾಚಕ
ಪದಗುಚ್ಛ
(ನೌಕಾಯಾನ) ಮುಖ್ಯ ಕೂವೆಯ ಹಾಯಿಪಟದ ಅಡ್ಡದಿಮ್ಮಿಗೆ, ಪ್ರಧಾನ ಅಡ್ಡ ದಿಮ್ಮಿಗೆ ಕಟ್ಟಿರುವ ಹಗ್ಗ. splice the main brace (ಚರಿತ್ರೆ) ನಿಗದಿ ಮಾಡಿರುವ ಪಡಿತರಕ್ಕಿಂತ ಹೆಚ್ಚಿನ ರಮ್ ಮದ್ಯ ಹಂಚು, ಮಾಡು.
main clause
ನಾಮವಾಚಕ
(ವ್ಯಾಕರಣ) ಪ್ರಧಾನ – ವಾಕ್ಯ ಭಾಗ, ವಾಕ್ಯಖಂಡ; ಕರ್ತೃ, ಕ್ರಿಯಾ ಮತ್ತು ಕೆಲವು ವೇಳೆ ಕರ್ಮಪದಗಳನ್ನೊಳಗೊಂಡು, ಸ್ವತಂತ್ರ ವಾಕ್ಯವಾಗಿ ನಿಲ್ಲಬಹುದಾದ ವಾಕ್ಯ ಭಾಗ: I told you what you should do ಎಂಬಲ್ಲಿ I told you ಎಂಬ ಭಾಗ.