logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lamb
ನಾಮವಾಚಕ ಪದಗುಚ್ಛ ನುಡಿಗಟ್ಟು
The Lamb (of God) ಏಸುಕ್ರಿಸ್ತ.
  • ಕುರಿಮರಿ.
  • (ಆಹಾರವಾಗಿ ಉಪಯೋಗಿಸುವ) ಕುರಿಮರಿ ಮಾಂಸ.
  • ಕಿರಿಯ ಕ್ರಸ್ತ; ಎಳೆ ವಯಸ್ಸಿನ ಕ್ರೈಸ್ತ; ಕ್ರೈಸ್ತ ಸಮುದಾಯದ, ಶಿಷ್ಯ ವರ್ಗದ, ಕಿರಿಯ ಸದಸ್ಯ.
  • ಪರಮ ಸಾಧು; ಸೌಮ್ಯ ಯಾ ಶಾಂತ ವ್ಯಕ್ತಿ.
  • ಮುಗ್ಧ; ಕೃತ್ರಿಮವರಿಯದವನು; ಏನೂ ತಿಳಿಯದವನು.
  • ಕೈಲಾಗದವನು; ಅಶಕ್ತ; ದುರ್ಬಲ.
  • (ವ್ಯಾಪಾರ ಮೊದಲಾದವುಗಳಲ್ಲಿ ಸುಲಭವಾಗಿ) ಟೋಪಿ ಬೀಳುವವನು; ಮೋಸ ಹೋಗುವವನು; ಮೋಸಕ್ಕೆ ಪಕ್ಕಾಗುವವನು.
  • (ಒಬ್ಬನ) ಪ್ರೀತಿಪಾತ್ರ; ಮುದ್ದು: you are a lamb but it is not fair ನೀನು ನನ್ನ ಮುದ್ದು ಚಿನ್ನ ಹೌದು, ಆದರೆ ನೀನು ಮಾಡಿರುವುದು ಸರಿಯಲ್ಲ.

  • lamb
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಕುರಿಮರಿ ಹಾಕು.
  • (ಗಬ್ಬದ ಕುರಿಗಳನ್ನು) ಆರೈಸು; ಆರೈಕೆ ಮಾಡು: lamb ewes ಗಬ್ಬವಾದ ಕುರಿಗಳನ್ನು ನೋಡಿಕೊ, ಆರೈಸು, ಆರೈಕೆ ಮಾಡು.
  • (ಕರ್ಮಣಿಪ್ರಯೋಗದಲ್ಲಿ) (ಕುರಿಗಳ ವಿಷಯದಲ್ಲಿ) ಈಯಲ್ಪಡು.

  • lamb's fry
    ನಾಮವಾಚಕ
    ಕುರಿಭಕ್ಷ್ಯ; ಕುರಿಮರಿಯ ತರಡು ತರಿದು ಅದರಿಂದ ತಯಾರಿಸಿದ ಖಾದ್ಯ.

    lamb's lettuce
    ನಾಮವಾಚಕ
    ಕೋಸುಂಬರಿ ಮಾಡಲು ಬಳಸುವ, ‘ವಲೆರಿಯನೆಲ ಲೊಕಸ್ಟ’ ಕುಲದ ಒಂದು ಗಿಡ.

    lamb's-tail
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಸಸ್ಯವಿಜ್ಞಾನ) ಹೇಸಲ್‍ ಗಿಡದ ಹೂಗೊಂಚಲು.

    lamb's-wool
    ನಾಮವಾಚಕ
    (ಕಾಲುಚೀಲ ಮೊದಲಾದವುಗಳಿಗೆ ಬಳಸುವ) ಕುರಿಮರಿ ಉಣ್ಣೆ.

    lambast
    ಸಕರ್ಮಕ ಕ್ರಿಯಾಪದ
    = lambaste.

    lambaste
    ಸಕರ್ಮಕ ಕ್ರಿಯಾಪದ
    (ಆಡುಮಾತು)
  • ಹೊಡೆ; ಚೆಚ್ಚು; ಸದೆಬಡಿ.
  • ತೀವ್ರವಾಗಿ ಟೀಕಿಸು; ಕಟುವಾಗಿ ಖಂಡಿಸು.

  • lambda
    ನಾಮವಾಚಕ
  • ಲ್ಯಾಮ್ಡ: ಇಂಗ್ಲಿಷಿನ L ಅಕ್ಷರಕ್ಕೆ ಸಂವಾದಿಯಾದ ಗ್ರೀಕ್‍ ವರ್ಣಮಾಲೆಯ ಹನ್ನೊಂದನೆಯ ಅಕ್ಷರ. $(Latinಅದ ಲದ)$.
  • $(\lambda)$ ಅಲೆಯುದ್ದ (ತರಂಗದೂರ) ಎನ್ನುವುದಕ್ಕೆ ಬಳಸುವ ಸಂಕೇತ.

  • lambdacism
    ನಾಮವಾಚಕ
    ಲಕಾರೀಕರಣ; ಲಕಾರೋಚ್ಚಾರ; ರಕಾರವನ್ನು ಲಕಾರದಂತೆ ಉಚ್ಚರಿಸುವುದು.


    logo