ಏಣು; ಏಣಿನಾಕಾರದ ವಸ್ತು, ಪ್ರದೇಶ (ಮುಖ್ಯವಾಗಿ ಪರ್ವತ, ಬೆಟ್ಟಗುಡ್ಡ ಯಾ ದಿಬ್ಬದ ನೆತ್ತಿ)
(ಒಂದು ಘನಾಕೃತಿಯ ಎರಡು ಮುಖಗಳು ಸೇರುವ) ಏಣು; ಅಂಚು.
(ಒಂದು ತೆಳು ವಸ್ತುವಿನ ಹೊರ ಮೈಯ) ಅಂಚು; ತುದಿ.
(ಪ್ರಪಾತದ) ಅರುಗು; ತುದಿ; ಏಣು; ಅಂಚು.
(ಒಂದು ಪ್ರದೇಶದ ಯಾ ಮೇಲ್ಮೈಯ) ಎಲ್ಲೆ ಗೆರೆ; ಸೀಮಾರೇಖೆ; ಗಡಿರೇಖೆ.
edge
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಪದಗುಚ್ಛ
(ಮುಖ್ಯವಾಗಿ ನಿಧಾನವಾಗಿ, ಮೆಲ್ಲಗೆ, ಗೊತ್ತಾಗದಂತೆ ಮತ್ತು ಓರೆಯಾಗಿ) ಸರಿ; ಸಾಗು; ಹೋಗು; ನುಸುಳು; ತೂರು; ಮುಂದೆ ಸರಿ; ನೂಕಿಕೊಂಡು ಯಾ ತಳ್ಳಿಕೊಂಡು ಹೋಗು: he edged through a crowd ಅವನು ಗುಂಪಿನ ಮೂಲಕ ಮೆಲ್ಲಗೆ ನುಸುಳಿಕೊಂಡ, ಸರಿದುಕೊಂಡು ಹೋದ. edge on = 2egg on.
(ತನ್ನನ್ನು ಯಾ ಇನ್ನೊಬ್ಬನನ್ನು ನಿಧಾನವಾಗಿ, ಕೊಂಚ ಕೊಂಚವಾಗಿ) ನುಸುಳಿಸು; ನಿಧಾನವಾಗಿ ಸರಿಸು; ತೂರಿಸು; ಮೆಲ್ಲನೆ — ಸಾಗಿಸು, ನೂಕು; ನಿಧಾನವಾಗಿ ತಳ್ಳಿಕೊಂಡು ಯಾ ನೂಕಿಕೊಂಡು ಹೋಗು: he edged his master out of hearing ಅವನು ಮೆಲ್ಲಗೆ ತನ್ನ ಯಜಮಾನನನ್ನು (ಅವನಿಗೆ ಮಾತು ಕೇಳದಷ್ಟು) ದೂರ ಸಾಗಿಸಿದ. he edged himself into office ಅವನು ಮೆಲ್ಲಮೆಲ್ಲನೆ ಅಧಿಕಾರಕ್ಕೆ ನುಸುಳಿಬಂದ.
get a word in edgeways (ವಾಚಾಳಿ ಮಾತು ನಿಲ್ಲಿಸಿದಾಗ ತನ್ನ) ಮಾತನ್ನು ತೂರಿಸು; ಮಾತಿಗೆ ಅವಕಾಶ ಮಾಡಿಕೊ: he had to raise his voice to get a word in edgeways ತನ್ನದೊಂದು ಮಾತನ್ನು ತೂರಿಸಲು ಅವನು ಧ್ವನಿ ಎತ್ತರಿಸಿ ಮಾತನಾಡಬೇಕಾಯಿತು.
ಅಂಚು ಮೇಲಾಗಿ; ಅರುಗು ಮೇಲಾಗಿ; ಏಣು ಮುಂದಾಗಿ.
(ಎರಡು ವಸ್ತುಗಳ ವಿಷಯದಲ್ಲಿ) ಏಣಿಗೆ ಏಣು ಸೇರಿ; ಅಂಚುಗೂಡಿ; ಮೊನೆಮೊನೆಗೂಡಿ; ತುದಿತುದಿಗೂಡಿ.
edgewise
ಕ್ರಿಯಾವಿಶೇಷಣ
= edgeways.
edgily
ಕ್ರಿಯಾವಿಶೇಷಣ
ಚೂಪಾಗಿ; ಮೊನೆಯಾಗಿ.
ಕಿರಿಕಿರಿಯಿಂದ; ಅಸಮಾಧಾನದಿಂದ.
edging
ನಾಮವಾಚಕ
(ಯಾವುದಕ್ಕೇ) ಅಂಚು ಕಟ್ಟುವುದು; ಕರೆಕಟ್ಟುವುದು.
(ಮುಖ್ಯವಾಗಿ ಮೆಲ್ಲಗೆ ಮತ್ತು ಓರೆಯಾಗಿ, ಗೊತ್ತಾಗದಂತೆ) ನುಸುಳುವುದು; ಸಾಗುವುದು; ಸರಿಯುವುದು; ತೂರಿಕೆ.
(ಉಡುಪು ಮೊದಲಾದವುಗಳ) ಅಂಚು; ಕರೆ; ಅರುಗು.
(ಹುಲ್ಲು ಮೊದಲಾದವುಗಳ) ಅಂಚು ಕತ್ತರಿಸುವುದು; ಅಂಚಿನಲ್ಲಿರುವುದನ್ನು ಕತ್ತರಿಸಿ ಸಮನಾಗಿರುವಂತೆ ಮಾಡುವುದು.