logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dastardliness
ನಾಮವಾಚಕ
ನೀಚ ಹೇಡಿತನ; ಚೋರಘಾತುಕತನ; ನೀಚತನವೂ ಹೇಡಿತನವೂ ಸೇರಿರುವಿಕೆ.

dastardly
ಕ್ರಿಯಾವಿಶೇಷಣ
ನೀಚಹೇಡಿತನದಿಂದ; ಚೋರಘಾತುಕತನದಿಂದ.

dasyure
ನಾಮವಾಚಕ
(ಆಸ್ಟ್ರೇಲಿಯ) ಡಾ ಸ್ಯೂರ್‍; ಶಿಶುಕೋಶಿ; ಮರಗಳ ಮೇಲೆ ವಾಸಿಸುವ, ಮರಿಯನ್ನು ಸಾಕಲು ಹೊಟ್ಟೆಯ ಮೇಲೆ ಚೀಲವುಳ್ಳ, ಡ್ಯಾಸೀಯುರಸ್‍ ಕುಲದ, ಬೆಕ್ಕಿನಂಥ, ಚಿಕ್ಕ ಮಾಂಸಾಹಾರಿ ಕ್ರೂರಪ್ರಾಣಿ.

data
ನಾಮವಾಚಕ
datum ಎಂಬುದರ ಬವ.

data bank
ನಾಮವಾಚಕ
ದತ್ತಾಂಶ ನಿಧಿ; ದತ್ತಾಂಶಕೋಶ; ದತ್ತಾಂಶಗಳನ್ನು ದೊಡ್ಡ ಪ್ರಮಾಣದಲ್ಲಿ ಶೇಖರಿಸಿರುವ ಸ್ಥಳ.

data base
ನಾಮವಾಚಕ
ದತ್ತಾಂಶ ಸಂಗ್ರಹ; ಉಪಯೋಗಕ್ಕೆ ದೊರಕುವ ದತ್ತಾಂಶಗಳ ಪರಿಮಾಣ.

data processing
ನಾಮವಾಚಕ
ದತ್ತಾಂಶ ಸಂಸ್ಕರಣ; ದತ್ತಾಂಶಗಳ ಆಧಾರದ ಮೇಲೆ ನಡೆಯುವ ಸ್ವಯಂಚಲಿ ಪ್ರಕ್ರಿಯೆ.

data processor
ನಾಮವಾಚಕ
ದತ್ತಾಂಶ ಸಂಸ್ಕಾರಕ; ದತ್ತಾಂಶಗಳ ಆಧಾರದ ಮೇಲೆ ಸ್ವಯಂಚಾಲಿತವಾಗಿ ಪ್ರಕ್ರಿಯೆ ನಡೆಸುವ ಸ್ವಯಂಚಲಿ ಪ್ರಕ್ರಿಯೆ.

data sheet
ನಾಮವಾಚಕ
ದತ್ತಾಂಶ ಪತ್ರ; ಯಾವುದೇ ವಿಷಯವನ್ನು ಕುರಿತ ಮಾಹಿತಿಯ ಸಾರಸಂಗ್ರಹವಿರುವ ಕರಪತ್ರ.

datable
ಗುಣವಾಚಕ
  • (ಯಾವುದರದೇ) ಕಾಲ – ಗೊತ್ತು ಮಾಡಬಹುದಾದ, ನಿರ್ಣಯಿಸಬಹುದಾದ.
  • (ಅಮೆರಿಕನ್‍ ಪ್ರಯೋಗ) (ಆಡುಮಾತು) (ಗಂಡು ಹೆಣ್ಣುಗಳ ವಿಷಯದಲ್ಲಿ, ಪರಸ್ಪರ) ವಿಹಾರಕಾಲ – ನಿಗದಿಮಾಡಬಹುದಾದ, ಏರ್ಪಡಿಸಬಹುದಾದ.


  • logo