logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

calenture
ನಾಮವಾಚಕ
ಸನ್ನಿಜ್ವರ; ಜ್ವರೋದ್ರೇಕ; ಸಮುದ್ರವನ್ನು ಹಸಿರು ಭೂಮಿಯೆಂದು ಭ್ರಮಿಸುವ, ಉಷ್ಣವಲಯದ ನಾವಿಕರಿಗೆ ಬರುವ ಒಂದು ಬಗೆಯ ಉನ್ಮಾದದ ಜ್ವರ.
  • (ತಾಪದಿಂದ ಬರುವ) ಜ್ವರ.

  • calf
    ನಾಮವಾಚಕ ಪದಗುಚ್ಛ
  • (ಮುಖ್ಯವಾಗಿ ಹಸುವಿನ, ವರ್ಷದೊಳಗಿನ) ಕರು.
  • (ಆನೆ, ತಿಮಿಂಗಿಲ, ಸೀಲ್‍, ಮೊದಲಾದ ಸಸ್ತನಿಗಳ) ಮರಿ; ಪೋತ.
  • ಮೊದ್ದು; ಪೆದ್ದ; ದಡ್ಡ; ಹೆಡ್ಡ.
  • =calfskin.
  • (ನೌಕಾಯಾನ) (ನೀರ್ಗಲ್ಲು ಮೊದಲಾದವುಗಳಿಂದ ಒಡೆದುಕೊಂಡು ಬೇರೆಯಾಗಿ ತೇಲುತ್ತಿರುವ) ನೀರ್ಗಲ್ಲಿನ ತುಂಡು.
  • (ದೊಡ್ಡ ದ್ವೀಪದ ಬಳಿಯ) ಪುಟ್ಟ ದ್ವೀಪ.

  • calf
    ನಾಮವಾಚಕ
  • ಮೀನಖಂಡ; ಮೀನುತತ್ತಿ; ಕಣಕಾಲಿನ ಹಿಂಭಾಗ.
  • (ಉದ್ದನೆಯ ಕಾಲುಚೀಲದ) ಮೇಲುಭಾಗ.

  • calf knee
    ನಾಮವಾಚಕ
    ಕೂಡುಮಂಡಿ; ತಾಗುಮಂಡಿ; ತೊಡರುಮಂಡಿ.

    calf's teeth
    ನಾಮವಾಚಕ
    ಹಾಲುಹಲ್ಲು; ಸಸ್ತನಿಗಳಲ್ಲಿ ಮೊದಲು ಬರುವ, ತಾತ್ಕಾಲಿಕ ಉಳಿಯುವ, ಹಲ್ಲು.

    calf-bound
    ಗುಣವಾಚಕ
    (ಪುಸ್ತಕ ಮೊದಲಾದವುಗಳ ವಿಷಯದಲ್ಲಿ) ಕರುವಿನ ಮೃದು ತೊಗಲಿನ ರಟ್ಟು ಕಟ್ಟಿರುವ.

    calf-leather
    ನಾಮವಾಚಕ
    =calfskin.

    calf-love
    ನಾಮವಾಚಕ
    (ಸ್ಥಿರವಲ್ಲದ) ಹುಡುಗಪ್ರಣಯ; ಹೀಚುಪ್ರಣಯ; ಎಳಸುಪ್ರೇಮ; ಎಳೆಯ ಹುಡುಗ ಹುಡುಗಿಯರ ನಡುವೆ ಹುಟ್ಟುವ ಕ್ಷಣಿಕ ಪ್ರೀತಿ ಯಾ ಆಕರ್ಷಣೆ.

    calfhood
    ನಾಮವಾಚಕ
  • ಕರುತನ; ಕರುವಾಗಿರುವ ಸ್ಥಿತಿ.
  • ಎಳಮೆ.

  • calfish
    ಗುಣವಾಚಕ
  • ಕರುವಿನಂಥ.
  • ಎಳಸು; ಅಪಕ್ವ; ಅಶಿಕ್ಷಿತ; ಅನುಭವವಿಲ್ಲದ.


  • logo