logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

baggage
ನಾಮವಾಚಕ ನುಡಿಗಟ್ಟು
bag and baggage.
  • (ಪ್ರಯಾಣ ಮಾಡುವಾಗ ಕೊಂಡೊಯ್ಯುವ) ಸಾಮಾನು ಸರಂಜಾಮು; ಗಂಟುಮೂಟೆ; ಪೆಟ್ಟಿಗೆ, ಹಾಸಿಗೆ, ಮೊದಲಾದವು.
  • (ಸೈನಿಕರ ಗುಡಾರ, ಹಾಸಿಗೆ ಮೊದಲಾದ) ಹಗುರ ಸರಕು.
  • (ಹಾಸ್ಯ ಪ್ರಯೋಗ) ಕೆಲಸಕ್ಕೆ ಬಾರದವಳು.
  • (ಹಾಸ್ಯ ಪ್ರಯೋಗ) ಚಿತ್ರಾಂಗಿ; ಚಿನಾಲಿ; ತುಂಟಿ; ಬಿನ್ನಾಣಗಿತ್ತಿ; ಚೆಲ್ಲು ಚೆಲ್ಲು ಹುಡುಗಿ; ಪೋರಿ.
  • (ರೂಪಕವಾಗಿ) ಮಾನಸಿಕ – ಸಿದ್ಧತೆ, ಸರಂಜಾಮು, ಮೊದಲಾದವು.
  • ಬೇಡದ, ಅನವಶ್ಯಕವಾದ, ಕೆಲಸಕ್ಕೆ ಬಾರದ, ಗತಕಾಲದ – ಭಾವನೆಗಳು, ಆಚರಣೆಗಳು, ಮೊದಲಾದವು.

  • baggage car
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಲಗ್ಗೇಜು ಗಾಡಿ; ಸಾಮಾನು ಡಬ್ಡಿ; ರೈಲಿನಲ್ಲಿ ಪ್ರಯಾಣಿಕರ ಸಾಮಾನು, ಪೆಟ್ಟಿಗೆಗಳು, ಮೊದಲಾದವನ್ನು ಇಡುವ ಡಬ್ಬಿ.

    baggage check
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಸಾಮಾನು ಟಿಕೆಟ್ಟು; ರೈಲು, ಮೊದಲಾದವುಗಳಲ್ಲಿ ಸಾಮಾನುಗಳನ್ನು ಸಾಗಿಸಲು ತೆಗೆದುಕೊಳ್ಳುವ ಟಿಕೆಟ್ಟು.

    baggage room
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) = cloakroom.

    baggage tag
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಲಗ್ಗೇಜು ಲೇಬಲ್ಲು; ಸಾಮಾನು ಚೀಟಿ; ಪ್ರಯಾಣದಲ್ಲಿ ಸಾಮಾನುಗಳಿಗೆ ಅಂಟಿಸುವ ಚೀಟಿ.

    bagginess
    ನಾಮವಾಚಕ
  • ಉಬ್ಬಿಕೆ; ಊದಿಕೆ.
  • ಜೋಲು ಬಿದ್ದಿರುವಿಕೆ.

  • bagging
    ನಾಮವಾಚಕ
    (ಚೀಲಗಳನ್ನು ಮಾಡುವ) ತಾಟು; ಗೋಣಿತಾಟು.

    baggy
    ಗುಣವಾಚಕ
  • ಉಬ್ಬಿದ; ಊದಿದ.
  • (ಚೀಲದಂತೆ) ನೇತಾಡುವ; ಜೋಲಾಡುವ.
  • (ರೂಪಕವಾಗಿ) (ಭಾಷೆಯ ಯಾ ಶೈಲಿಯ ವಿಷಯದಲ್ಲಿ) ಟೊಳ್ಳಾದ; ಪೊಳ್ಳಾದ; ಜಳ್ಳಾದ.

  • bagman
    ನಾಮವಾಚಕ
  • (ಬ್ರಿಟಿಷ್‍ ಪ್ರಯೋಗ) ತಿರುಗುವ್ಯಾಪಾರಿ.
  • (ಅಮೆರಿಕನ್‍ ಪ್ರಯೋಗ, ಅಶಿಷ್ಟ) ಏಜೆಂಟು; ಮಧ್ಯಸ್ಥಗಾರ; ಲಂಚಕೊಡಲು, ಜೂಜು, ಸಟ್ಟಾ ಮೊದಲಾದ ಅಕ್ರಮ ವ್ಯವಹಾರಗಳಿಗೆ ಹಣ ಸಂಗ್ರಹಿಸಲು ಯಾ ಅದನ್ನು ವಿತರಣೆ ಮಾಡಲು ನಿಯುಕ್ತನಾಗಿರುವ ವ್ಯಕ್ತಿ.
  • (ಆಸ್ಟ್ರೇಲಿಯ) ಅಲೆಮಾರಿ.

  • bagnio
    ನಾಮವಾಚಕ
  • (ಪೌರಸ್ತ್ಯ ದೇಶಗಳ) ಸೆರೆಮನೆ; ಬಂದೀಖಾನೆ.
  • ಸೂಳೆಮನೆ; ವೇಶ್ಯಾಗೃಹ.


  • logo