logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ರೊಟ್ಟಿ ಕೈಪಳ
(ನಾ)
ಹಂಚಿನಲ್ಲಿ ಸುಟ್ಟ ರೊಟ್ಟಿಯನ್ನು ತೆಗೆದು ಹಾಕಿಡುವ ಅಗಲಬಾಯಿಯ ಕಿವಿಯುಳ್ಳ ಪಾತ್ರೆ.

ರೊಟ್ಟಿ ಹಂಚು
(ನಾ)
ಮಣ್ಣಿನ ತವೆ, ದಪ್ಪ ತಳವುಳ್ಳ ಮಣ್ಣಿನ ತವೆ. ಕೈ ರೊಟ್ಟಿಗಳನ್ನು ಮಾಡಲು ಹಳ್ಳಿಗಳಲ್ಲಿ ಇಂದಿಗೂ ಈ ಹಂಚನ್ನು ಬಳಸುವರು. 'ನನ್ನ ಕವಿತೆ ಸುಡುವ ಹಂಚಿನರೊಟ್ಟಿ' (ಆನಂದ ಝಂಜರವಾಡ) ಹಂಚಿಗೆ ರೊಟ್ಟಿ ಚೆಂದ, ಹಚ್ಚಿ ಹಣೇಗ ಚೆಂದ (ಒಡಪು)

ಲದ್ದಿಗಡಿಗೆ
(ನಾ)
ಕುದುರೆ ಲದ್ದಿ ಬೆರಸು ತಯಾರಿಸಿದ ಮಣ್ಣಿನ ಗಡಿಗೆ ಅಡುಗೆ ಪಾತ್ರೆಗಳನ್ನು ತಯಾರಿಸುವ ಗಡಿಗೆಗಳಿಗೆ ಲದ್ದಿ ಬೆರೆಸುವದಿಲ್ಲ. ಉತ್ತರ ಕರ್ನಾಟಕ, ಹೈದರಬಾದ ಕರ್ನಾಟಕದ ಕುಂಬಾರರು ಮಣ್ಣಿಗೆ ಲದ್ದಿ ಬಳಸು ರೂಢಿ ಇದೆ.

ಲಳಿಗೆ
(ನಾ)
ಕೊಳವೆ, ಕುಂಬಾರರು ತಿಗುರಿಯ ಮೇಲೆ ಮಣ್ಣು ಹಾಕಿ ಬೇಕಾದ ಆಕೃತಿಯ ಟೊಳ್ಳಾದ ಲಳಿಗೆ ಗೇಯುವರು.

ಲೋಟೆ
(ನಾ)
ಪಿಂಗಾಣಿ ಲೋಟೆಯ ಹಾಗೆ ಇರುವ ಮಣ್ಣಿನ ಕಪ್ಪು, ನೀರಿನ ಲೋಟ, ಚಹ ಲೋಟ, ಹಿಡಿದುಕೊಳ್ಳಲು ಅನುಕೂಲವಾಗುವಂತೆ ಹಿಡಿಯು ಇರುತ್ತದೆ. ಬೇರೆ ಬೇರೆ ಆಕೃತಿಯ ಲೋಟಗಳನ್ನು ಕುಂಬಾರರು ಮಾಡುವರು.

ವಡಕಗಡಿಗೆ
(ನಾ)
ತೂತು ಬಿದ್ದ ಸೀಳಿದ ಗಡಿಗೆ, ನೋಡಿ ಒಡಕ.

ಪಡಗ
(ನಾ)
ಪಡಗ, ಹರವಿ, ನೀರು ತುಂಬಿಸಲು ಬಳಸುವ ದೊಡ್ಡ ಗಡಿಗೆ.

ವಾಡೆ
(ನಾ)
ದೊಡ್ಡ ಪ್ರಮಾಣದ ಗುಡಾಣ. ಕೋಳಿ ಮೊಟ್ಟೆ ಆಕಾರದ ಪಾತ್ರೆ. ರೈತರು ಇದನ್ನು ಜೋಳ, ರಾಗಿ ಭತ್ತ ಮೊದಲಾದ ಧಾನ್ಯಗಳನ್ನು ಶೇಖರಿಸಿಡಲು ಇದನ್ನು ಬಳಸುವರು. ಇದನ್ನು ಕೆಲವೆಡೆ ಗೋಡೆಯಲ್ಲಿ ಹುದುಗಿಸಿಡುವರು. ಇವುಗಳಲ್ಲಿ ಸಣ್ಣ ಮತ್ತು ದೊಡ್ಡ ಗಾತ್ರದ ವಾಡೆಗಳು ಇರುತ್ತವೆ. ವಾಡೆಯಲ್ಲಿ ಧಾನ್ಯ ತುಂಬಿ ಅದರ ಬಾಯಿಯನ್ನು ಹುಲ್ಲು ಮತ್ತು ಬೇವಿನ ತಪ್ಪಲನ್ನು ಹಾಕಿ ಮುಚ್ಚಿ ಅದಕ್ಕೆ ಮಣ್ಣು ಮೆತ್ತಿ ಸಗಣಿಯಿಂದ ಸಾರಿಸುವರು. ನುಸಿ ಮತ್ತು ಹುಳುಗಳು ಧಾನ್ಯಗಳನ್ನು ನಾಶ ಮಾಡದಂತೆ ಸಂರಕ್ಷಿಸಿ ಇಡುವ ಕ್ರಮವಿದು. ವಾಡೆಗೆ ಕೆಲವು ಕಡೆ ಅಳಗ ಎನ್ನುವರು. ವಾಡೆಯಲ್ಲಿಯ ಧಾನ್ಯಗಳನ್ನು ತೆಗೆದುಕೊಳ್ಳಲು ವಾಡೆ ಕೆಳಭಾಗದಲ್ಲಿ ಒಂದು ರಂಧ್ರ ಮಾಡಲಾಗಿರುತ್ತದೆ. ಕೈಹಗ್ಗ ಸೇರಿಸಿದ ಟೆಂಗಿನ ಕರಟವನ್ನು ಧಾನ್ಯ ತುಂಬುವ ಮೊದಲು ವಾಡೆಗೆ ಸೇರಿಸಿ ಅಳವಡಿಸಲಾಗಿರುವುದು. ಧಾನ್ಯ ಹೊರಕ್ಕೆ ತೆಗೆಯಬೇಕಾದಾಗ ಕರಟವನ್ನು ಹಿಂದಕ್ಕೆ ಸ್ವಲ್ಪ ತಳ್ಳಿದರೆ ಧಾನ್ಯ ಹೊರಕ್ಕೆ ಬರುವುದು. ಬೇಕಾದಷ್ಟನ್ನು ತೆಗೆದುಕೊಂಡ ಮೇಲೆ ಹಗ್ಗದಿಂದ ಮುಂದಕ್ಕೆ ಎಳೆದರೆ ರಂಧ್ರ ಮುಚ್ಚಿಕೊಳ್ಳುತ್ತದೆ ಹರಪನಹಳ್ಳಿ ತಾಲೂಕು ಕೂಲಹಳ್ಳಿಯಲ್ಲಿ ಹಿಂದಿನ ಕಾಲದ 22 ಮಣ್ಣಿನ ವಾಡೆಗಳು ದೊರೆತಿವೆ. ರೈತನ ಮನಿಯಾಗ ವಾಡೆ ಚೆಂದ, ನೇಕಾರ ಮನಿಯಾಗ ಮಗ್ಗ ಚೆಂದ (ಗಾದೆ)

ಶವದ ಮಡಕೆ
(ನಾ)
ಶವದ ಗಡಿಗೆ, ಶವಸಂಸ್ಕಾರದ ಸಮಯದಲ್ಲಿ ಬಳಸುವ ಗಡಿಗೆ

ಶರಾವ
(ನಾ)
ಶ್ರಾವೆ, ಸರಾವ, ತಟ್ಟೆ ಮುಚ್ಚಳ a cover


logo