logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

occlude
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
(ಮೇಲಿನ ಮತ್ತು ಕೆಳಗಿನ ಹಲ್ಲುಗಳ ವಿಷಯದಲ್ಲಿ) ಮುಚ್ಚಿಕೊ; ಸಂದು ಬಿಡದಂತೆ–ಕಚ್ಚಿಕೊ, ಸೇರಿಕೊ.
  • (ಕಂಡಿ, ತೂತು, ದಾರಿಯನ್ನು) ಮುಚ್ಚು; ಬಂದುಮಾಡು.
  • (ರಸಾಯನವಿಜ್ಞಾನ) (ಮುಖ್ಯವಾಗಿ ಪೆಲೇಡಿಯಮ್‍ ಮೊದಲಾದ ಲೋಹಗಳ ವಿಷಯದಲ್ಲಿ, ಹೈಡ್ರೊಜನ್ನನ್ನು) ಹೀರಿಕೊ; ಹೀರಿಬಿಡು; ಹೀರಿ ಇಟ್ಟುಕೊ.
  • (ಸೂಕ್ಷ್ಮ ರಂಧ್ರಗಳು ಯಾ ತೂತನ್ನು) ಬಂದುಮಾಡು; ಮುಚ್ಚಿಬಿಡು; ಅಡಚಣೆ ಉಂಟುಮಾಡು.

  • occluded front
    ನಾಮವಾಚಕ
    (ಪವನಶಾಸ್ತ್ರ) (ಚಕ್ರವಾತ ಯಾ ಸೈಕ್ಲೋನ್‍ನ ವಿಷಯದಲ್ಲಿ) ಅಕ್ಲೂಡಿತ ಮುಖ; (ಅವಪಾತದ ವಿಷಯದಲ್ಲಿ) ಅಕ್ಲೂಡಣೆ (occlusion)ಯಿಂದ ಉಂಟಾಗುವ ಮುಖ.

    occlusion
    ನಾಮವಾಚಕ
  • (ಕಂಡಿ, ದಾರಿ, ಮೊದಲಾದವನ್ನು) ಮುಚ್ಚುವಿಕೆ; ಬಂದು ಮಾಡುವಿಕೆ.
  • (ಪವನಶಾಸ್ತ್ರ) ಅಕ್ಲೂಡಣೆ; ಅವಪಾತ ಉಂಟಾದಾಗ ಶೀತಲ ಮುಖವು ಬೆಚ್ಚನೆ ಮುಖವನ್ನು ಹಿಂದೆ ಹಾಕಿ ಬೆಚ್ಚನೆಯ ಗಾಳಿ ಮೇಲಕ್ಕೇರುವುದು.
  • (ದಂತವೈದ್ಯ) (ಮೇಲಿನ ಮತ್ತು ಕೆಳಗಿನ ಹಲ್ಲುಸಾಲುಗಳ ವಿಷಯದಲ್ಲಿ) ಮುಚ್ಚಿಕೊಳ್ಳುವಿಕೆ.
  • (ಟೊಳ್ಳು ಅಂಗ ಮೊದಲಾದವುಗಳ) ಮುಚ್ಚಿಕೊಳ್ಳುವಿಕೆ: coronary occlusion ಪರಿಧಮನಿಯ ಮುಚ್ಚಿಕೊಳ್ಳುವಿಕೆ, ಬಂದಾಗುವಿಕೆ.
  • (ಧ್ವನಿವಿಜ್ಞಾನ) ಧ್ವನಿನಾಳದ ಯಾ ಮಾರ್ಗದ ತಾತ್ಕಾಲಿಕ–ಅಡ್ಡಿ, ನಿರೋಧ, ತಡೆ.
  • ಅಡ್ಡಿಪಡಿಸುವಿಕೆ; ಮಾರ್ಗ ಬಂಧ.
  • ಹೀರಿಕೊಳ್ಳುವಿಕೆ; ಹೀರಿಟ್ಟುಕೊಳ್ಳುವಿಕೆ.

  • occlusive
    ಗುಣವಾಚಕ
  • ಮುಚ್ಚುವ; ಮುಚ್ಚುವಂಥ.
  • ಅಡ್ಡಿಪಡಿಸುವ ಲಕ್ಷಣದ.

  • occult
    ಗುಣವಾಚಕ ಪದಗುಚ್ಛ
    the occult ಅತೀಂದ್ರಿಯ ಐಂದ್ರಜಾಲಿಕ–ವಿದ್ಯೆ, ವಿಷಯಗಳು.
  • ಅತೀಂದ್ರಿಯ; ನಿಸರ್ಗಾತೀತ; ಐಂದ್ರಜಾಲಿಕ; ಮಾಂತ್ರಿಕ.
  • ಗೋಪ್ಯ; ನಿಗೂಢ; ರಹಸ್ಯವಾಗಿಟ್ಟಿರುವ.
  • ಗಹನ; ಗೂಢ; ಸಾಮನ್ಯ ತಿಳಿವಿಗೆ ಮೀರಿದ; ದೀಕ್ಷೆ ಪಡೆದವರಿಗೆ ಮಾತ್ರ ಎಟುಕುವ.
  • (ವೈದ್ಯಶಾಸ್ತ್ರ) ಅಸ್ಪಷ್ಟ; ಪರೀಕ್ಷೆ ಮಾಡಿದಾಗ–ಸ್ಪಷ್ಟವಾಗದ; ಸ್ಫುಟವಾಗಿ ಕಾಣದಿರುವ, ಗೊತ್ತಾಗದಿರುವ.

  • occult
    ಸಕರ್ಮಕ ಕ್ರಿಯಾಪದ
  • (ಖಗೋಳ ವಿಜ್ಞಾನ) (ಮರೆ ಮಾಡಲ್ಪಡುವ ಕಾಯಕ್ಕಿಂತಲೂ ಬಹು ದೊಡ್ಡ ಗಾತ್ರದ ಮರೆಮಾಡುವ ಆಕಾಶಕಾಯದ ವಿಷಯದಲ್ಲಿ) ಮರೆ ಮಾಡು; ಆಚ್ಛಾದಿಸು; ಗ್ರಹಣಗೊಳಿಸು.
  • (ಮುಂದೆ ಅಡ್ಡ ಬಂದು) ಕಾಣದಂತಾಗಿಸು; ಕಾಣದಂತೆ ಮಾಡು.

  • occultation
    ನಾಮವಾಚಕ
  • (ಖಗೋಳ ವಿಜ್ಞಾನ) (ಒಂದು ಆಕಾಶಕಾಯವನ್ನು ಇನ್ನೊಂದು) ಮರೆ ಮಾಡುವಿಕೆ; ಆಚ್ಛಾದನ; ಗ್ರಹಣಗೊಳಿಸುವಿಕೆ.
  • (ರೂಪಕವಾಗಿ) ಸಾರ್ವಜನಿಕ ದೃಷ್ಟಿಗೆ ಬೀಳದಂತೆ ಮರೆಮಾಡುವಿಕೆ, ಆಚ್ಛಾದನ.

  • occulting light
    ನಾಮವಾಚಕ
    ಆವರ್ತಕ ಪ್ರಕಾಶ; (ಸಮುದ್ರದಲ್ಲಿರುವ ದೀಪಗೃಹಗಳಲ್ಲಿ) ನಿಯತ ಅವಧಿಗೊಮ್ಮೆಮ್ಮೆ ಕಾಣದೆ ಮರೆಯಾಗುವ ಬೆಳಕು.

    occultism
    ನಾಮವಾಚಕ
  • ಇಂದ್ರಜಾಲ; ಯಕ್ಷಿಣಿವಿದ್ಯೆ.
  • ಅತೀಂದ್ರಿಯ (ವಿಷಯಗಳನ್ನು ಅರಿಯುವ) ವಿದ್ಯೆ.

  • occultist
    ನಾಮವಾಚಕ
  • ಐಂದ್ರಜಾಲಿಕ; ಯಕ್ಷಿಣಿಗಾರ; ಮಾಂತ್ರಿಕ.
  • ಅತೀಂದ್ರಿಯ ಜ್ಞಾನಿ; ಅತೀಂದ್ರಿಯ ವಿಷಯಗಳನ್ನು ಬಲ್ಲವ ಅಭ್ಯಾಸ ಮಾಡುವವ.


  • logo