logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lam
ನಾಮವಾಚಕ ಪದಗುಚ್ಛ
(ಅಮೆರಿಕನ್‍ ಪ್ರಯೋಗ, ಅಶಿಷ್ಟ) ಪರಾರಿ; ಬೇಗನೆ ತಪ್ಪಿಸಿಕೊಂಡು ಓಡಿಹೋಗುವುದು.
  • on the lam (ಅಮೆರಿಕನ್‍ ಪ್ರಯೋಗ, ಅಶಿಷ್ಟ) (ಮುಖ್ಯವಾಗಿ ಪೊಲೀಸರಿಂದ) ತಪ್ಪಿಸಿಕೊಂಡು ಓಡಿಹೋಗುತ್ತಾ, ಅವಿತುಕೊಳ್ಳುತ್ತಾ.
  • take it on the lam ಅವಸರವಾಗಿ ಓಡಿಹೋಗು, ಪರಾರಿಯಾಗು.

  • lama
    ನಾಮವಾಚಕ ಪದಗುಚ್ಛ
    ಲಾಮ; ಟಿಬೆಟ್ಟಿನ ಯಾ ಮಂಗೋಲಿಯದ ಬೌದ್ಧ ಗುರು, ಸಂನ್ಯಾಸಿ.
  • Dalai Lama (ಉಚ್ಚಾರಣೆ ಡೆಲಿ ಲಾಮ) ದಲೈ ಲಾಮ; ಟಿಬೆಟ್ಟಿನ ಪ್ರಧಾನ ಬೌದ್ಧ ಗುರು.
  • Panchen or Tashi Lama ಪಂಚೆನ್‍ ಯಾ ತಷಿ ಲಾಮ; ಟಿಬೆಟ್ಟಿನ ಉಪಪ್ರಧಾನ ಲಾಮ; ದಲೈ ಲಾಮನ ತರುವಾಯದ ಸ್ಥಾನದ ಲಾಮ.

  • Lamaism
    ನಾಮವಾಚಕ
    ಲಾಮ ಧರ್ಮ; ಲಾಮಗಳು ಬೋಧಿಸುವ ಮತತತ್ತ್ವಗಳು, ಸಂಪ್ರದಾಯಗಳು, ಆಚಾರಗಳು (ಮುಖ್ಯವಾಗಿ ವಿಶೇಷ ಮತ ಪ್ರಕ್ರಿಯೆಗಳಿಂದ, ಆಚರಣೆಗಳಿಂದ, ಪರಂಪರೆಗಳಿಂದ ಕೂಡಿದ ಟಿಬೆಟ್ಟಿನ ಮಹಾಯಾನ ಬೌದ್ಧಧರ್ಮ).

    Lamaist
    ನಾಮವಾಚಕ
    ಲಾಮ ಧರ್ಮೀಯ; ಲಾಮ ಧರ್ಮದ ಅನುಯಾಯಿ.

    Lamaist
    ಗುಣವಾಚಕ
    ಲಾಮ ಧರ್ಮದ; ಲಾಮ ಧರ್ಮಕ್ಕೆ ಸೇರಿದ.

    Lamaistic
    ಗುಣವಾಚಕ
  • = 2Lamaist.
  • ಲಾಮ ಧರ್ಮದಂಥ.

  • Lamarckian
    ನಾಮವಾಚಕ
    ಲಮಾರ್ಕ್‍ ವಾದಿ; ಲಮಾರ್ಕ್‍ ಸಿದ್ಧಾಂತದ ಅನುಯಾಯಿ.

    Lamarckian
    ಗುಣವಾಚಕ
    ಲಮಾರ್ಕೀಯ; ಲಮಾರ್ಕನ ಯಾ ಅವನ ಸಿದ್ಧಾಂತಕ್ಕೆ ಸಂಬಂಧಿಸಿದ.

    Lamarckism
    ನಾಮವಾಚಕ
    ಲಮಾರ್ಕ್‍ – ವಾದ, ಸಿದ್ಧಾಂತ; ಜೀವಿಯು ತನ್ನ ಜೀವಮಾನದಲ್ಲಿ ಗಳಿಸಿಕೊಂಡ ಲಕ್ಷಣಗಳು ಮುಂದೆಯೂ ಅನುವಂಶಿಕವಾಗಿ ಸಾಗುವುವು ಎಂಬ, ಹತ್ತೊಂಬತ್ತನೆಯ ಶತಮಾನದ ಹ್ರಾನ್ಸಿನ ಸಸ್ಯ ವಿಜ್ಞಾನಿ ಹಾಗೂ ಪ್ರಾಣಿವಿಜ್ಞಾನಿ ಲಮಾರ್ಕ್‍ ಪ್ರತಿಪಾದಿಸಿದ ವಿಕಾಸವಾದ.

    lamasery
    ನಾಮವಾಚಕ
    (ಬಹುವಚನ lamaseries). ಲಾಮಮಠ; ಲಾಮ ವಿಹಾರ; ಟಿಬೆಟ್ಟಿನ ಲಾಮಗಳ ಮಠ.


    logo