logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ill-natured
ಗುಣವಾಚಕ
  • ಸಿಡುಕಿನ; ರೇಗುವ ಸ್ವಭಾವದ.
  • ದುಷ್ಟ (ಸ್ವಭಾವದ).
  • ಸೇಡಿನ ಸ್ವಭಾವದ.
  • ಮತ್ಸರ ಪ್ರಕೃತಿಯ.

  • ill-naturedly
    ಕ್ರಿಯಾವಿಶೇಷಣ
  • ಸಿಡುಕಿನಿಂದ.
  • ದುಷ್ಟತನದಿಂದ.
  • ಮತ್ಸರದಿಂದ.
  • ಸೇಡಿನಿಂದ.

  • ill-omened
    ಗುಣವಾಚಕ
    ಅಪಶಕುನದ; ದುಶ್ಯಕುನಗಳಿಂದ ಕೂಡಿದ: the ill-omened rumour reached his ear ಅಪಶಕುನದ ವದಂತಿ ಅವನ ಕಿವಿ ಮುಟ್ಟಿತು.

    ill-sorted
    ಗುಣವಾಚಕ
  • ಒಪ್ಪವಾಗಿ ಜೋಡಿಸದ; ಸರಿಯಾಗಿ ವರ್ಗೀಕರಿಸದ, ವಿಂಗಡಿಸದ.
  • ಈಡುಜೋಡಿಲ್ಲದ; ಸರಿಸಾಟಿಯಿಲ್ಲದ; ಸರಿಸಮನಾಗಿರದ; ಹೊಂದಾವಣೆಯಿಲ್ಲದ.

  • ill-spent
    ಗುಣವಾಚಕ
    ದಂಡ ಮಾಡಿದ; ಹಾಳುಮಾಡಿದ; ವ್ಯರ್ಥವಾಗಿ ಕಳೆದ; ದುರ್ವ್ಯಯ ಮಾಡಿದ.

    ill-starred
    ಗುಣವಾಚಕ
  • ಕೆಟ್ಟ ನಕ್ಷತ್ರದಲ್ಲಿ ಹುಟ್ಟಿದ.
  • ದುರದೃಷ್ಟದ; ನತದೃಷ್ಟ; ಅದೃಷ್ಟಹೀನ: an ill-starred romance ಅದೃಷ್ಟಹೀನ ಪ್ರಣಯ.

  • ill-tempered
    ಗುಣವಾಚಕ
    ದುಮ್ಮಾನದ; ಸಿಡುಕಿನ; ಕೋಷಿಷ್ಠ ಪ್ರಕೃತಿಯ.

    ill-timed
    ಗುಣವಾಚಕ
    ಅವೇಳೆಯ; ಅಕಾಲಿಕ; ಕಾಲೋಚಿತವಲ್ಲದ; ಸಮಯೋಚಿತವಲ್ಲದ: such severity would be now very ill-timed ಅಂಥ ನಿಷ್ಠುರತೆ ಈಗ ತುಂಬ ಅಕಾಲಿಕ.

    ill-treat
    ಸಕರ್ಮಕ ಕ್ರಿಯಾಪದ
    ಸರಿಯಾಗಿ ಕಾಣದಿರು; ನ್ಯಾಯವಾಗಿ ನಡೆಸಿಕೊಳ್ಳದಿರು; ಪೀಡಿಸು; ಹಿಂಸಿಸು: a man ill-treating a dumb animal ಮೂಕ ಪ್ರಾಣಿಯನ್ನು ಹಿಂಸಿಸುತ್ತಿರುವ ವ್ಯಕ್ತಿ.

    ill-treatment
    ನಾಮವಾಚಕ
    ಸರಿಯಾಗಿ ನಡೆಸಿಕೊಳ್ಳದಿರುವುದು; ಕೆಟ್ಟದಾಗಿ ನೋಡಿಕೊಳ್ಳುವುದು; ಹಿಂಸಿಸುವುದು; ಕಷ್ಟಕೊಡುವುದು.


    logo