logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Edda
ನಾಮವಾಚಕ ಪದಗುಚ್ಛ
ಎಡ:
  • ಐಸ್ಲಂಡಿನ ಪುರಾತನ ಕವನಗಳ ಸಂಗ್ರಹ.
  • ಐಸ್ಲಂಡಿನ ಕಾವ್ಯಗಳಿಗೆ ಗದ್ಯದ ಕೈಪಿಡಿ (ಕ್ರಿಸ್ತಶಕ. ಸುಮಾರು1230).

  • eddy
    ನಾಮವಾಚಕ
  • ಸಣ್ಣ ನೀರುಸುಳಿ; ತಿರುಗಣಿ ಮಡು; ಜಲಾವರ್ತ.
  • ಆವರ್ತವಾಯು ; ಸುಳಿ ಸುತ್ತುವ ಗಾಳಿ.
  • ಸುಳಿಗಾವಳ; ಸುಳಿಮಂಜು; ಸುಳಿಹಿಮ; ಸುಳಿಸುತ್ತುವ ಕಾವಳ.
  • ಸುಳಿ ಹೊಗೆ; ಆವರ್ತಧೂಮ; ಸುಳಿಸುಳಿಯಾಗಿ ಹರಡುವ ಯಾ ಏರುವ ಹೊಗೆ.

  • eddy
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಸುಳಿ ಎಬ್ಬಿಸು; ಸುಳಿಸುತ್ತಿಸು; ಸುಳಿ ತಿರುಗಿಸು. ಸುಳಿ ಏಳು; ಸುಳಿಸುತ್ತು; ಸುಳಿತಿರುಗು: whirl round in eddies ಸುಳಿಗಳಾಗಿ ಸುತ್ತು ಯಾ ಸುತ್ತಿಸು.

    eddy current
    ನಾಮವಾಚಕ
    (ವಿದ್ಯುದ್ವಿಜ್ಞಾನ) ಆವರ್ತಪ್ರವಾಹ; ಸುಳಿಹರಿವು; ಸುಳಿಪ್ರವಾಹ; ಕಾಂತಕ್ಷೇತ್ರ ವ್ಯತ್ಯಾಸವಾಗುವುದರ ಪರಿಣಾಮವಾಗಿ ಸಮೀಪದಲ್ಲಿನ ವಾಹಕದಲ್ಲಿ ಉತ್ಪತ್ತಿಯಾಗುವ ಚಕ್ರೀಯ ಪ್ರವಾಹ.

    edelweiss
    ನಾಮವಾಚಕ
    ಆಲ್ಪ್ಸ್‍ ಪರ್ವತದ ಕಲ್ಲು ಮೊರಡಿಗಳಲ್ಲಿ ಬೆಳೆಯುವ, ಉಣ್ಣೆಯಂಥ ಎಲೆಗಳನ್ನೂ ಬಿಳಿಹೂಗಳನ್ನೂ ಬಿಡುವ ಗಿಡ.

    edema
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) = oedema.

    Eden
    ನಾಮವಾಚಕ
  • ಈಡನ್‍; ಆಡ್ಯಮ್‍ ಮತ್ತು ಈವ್‍ ಷ್ಟಿಯಾದಾಗ ಅವರ ವಾಸಸ್ಥಾನ.
  • ಸುಖನಿವಾಸ; ಆನಂದಧಾಮ.
  • ಕಡುಹಿಗ್ಗಿನ ಸ್ಥಿತಿ; ಪರಮಸುಖ ಸ್ಥಿತಿ; ಪರಮಾನಂದ.

  • Edenic
    ಗುಣವಾಚಕ
  • ಈಡನ್ನಿನ ಯಾ ಈಡನ್ನಿಗೆ ಸಂಬಂಧಿಸಿದ.
  • ಪರಮಾನಂದದ; ಅತ್ಯಂತ ಸುಖದ.

  • edentate
    ಗುಣವಾಚಕ
    (ಜೀವವಿಜ್ಞಾನ)
  • (ಪ್ರಾಣಿಗಳ ವಿಷಯದಲ್ಲಿ) ಬಾಚಿಹಲ್ಲು ಮತ್ತು ಕೋರೆ ಹಲ್ಲುಗಳಿಲ್ಲದಿರುವ.
  • (ಪ್ರಾಣಿಗಳ ವಿಷಯದಲ್ಲಿ) ಸ್ವಲ್ಪ ದಂತಿ; ಕೆಲವೇ ಹಲ್ಲುಗಳಿರುವ.
  • (ಪ್ರಾಣಿಗಳ ವಿಷಯದಲ್ಲಿ) ಹಲ್ಲಿಲ್ಲದಿರುವ; ನಿರ್ದಂತಿ; ಅದಂತಿ.

  • edentate
    ನಾಮವಾಚಕ
    (ಜೀವವಿಜ್ಞಾನ)
  • ಬಾಚಿಹಲ್ಲು ಮತ್ತು ಕೋರೆಹಲ್ಲುಗಳಿಲ್ಲದಿರುವ ಪ್ರಾಣಿ.
  • ಸ್ವಲ್ಪದಂತಿ; ಕೆಲವೇ ಹಲ್ಲುಗಳಿರುವ ಪ್ರಾಣಿ.
  • ನಿರ್ದಂತಿ; ಅದಂತಿ; ಹಲ್ಲಿಲ್ಲದ (ಮುಖ್ಯವಾಗಿ ಸಸ್ತನಿ) ಪ್ರಾಣಿ.


  • logo