ದೊಡ್ಡಗೆರೆ; ದೊಡ್ಡಗೀಟು; ಮಾರ್ಸ್ ಸಂಕೇತಲಿಪಿಯಲ್ಲಿ ಬಳಸುವ ಎರಡು ಗೆರೆಗಳಲ್ಲಿ ಉದ್ದನೆಯದು, ದೊಡ್ಡದು.
ಥಟ್ಟನೆ ಮುನ್ನುಗ್ಗುವುದು; ಕ್ಷಿಪ್ರಗತಿ.
(ಅಮೆರಿಕನ್ ಪ್ರಯೋಗ) ಓಟದ – ಪಂದ್ಯ, ಸ್ಪರ್ಧೆ: the 100 metres dash ನೂರು ಮೀಟರುಗಳ ಓಟ(ದ ಪಂದ್ಯ).
(ಸಾಹಸದಿಂದ ಕಾರ್ಯಮಾಡುವ) ಶಕ್ತಿ; ಸಾಮರ್ಥ್ಯ; ಸತ್ತ್ವ; ಛಾತಿ: ಕೆಚ್ಚು: an administrator noted for his skill and dash ಕೌಶಲ ಮತ್ತು ಸಾಮರ್ಥ್ಯಕ್ಕಾಗಿ ಹೆಸರುವಾಸಿಯಾದ ಆಡಳಿತಗಾರ.
ಮೆರೆತ; ಆಡಂಬರ; ಡೌಲು; ಡಬ್ಬು.
dash
ನಾಮವಾಚಕ
(ಅಶಿಷ್ಟ) ಲಂಚ.
(ಆಹ್ರಿಕ)
ಉಡುಗೊರೆ.
ದಳ್ಳಾಳಿ ರುಸುಮು.
dash
ಸಕರ್ಮಕ ಕ್ರಿಯಾಪದ
ಲಂಚ ಕೊಡು.
(ಆಹ್ರಿಕ)
ಉಡುಗೊರೆ ಕೊಡು.
ದಳ್ಳಾಳಿ ರುಸುಮು ಕೊಡು.
dashboard
ನಾಮವಾಚಕ
ತಡೆಹಲಗೆ; ತಡೆತೆರೆ; ಸಿಡಿಯುವ ದೂಳು, ಮಣ್ಣು, ನೀರು, ಮೊದಲಾದವನ್ನು ತಡೆಯಲು, ಕುದುರೆಗಾಡಿ ಮೊದಲಾದ ವಾಹನದ ಮುಂದೆ ಹಾಕಿರುವ ಹಲಗೆ ಯಾ ಚರ್ಮದ ತೆರೆ.
ಹತ್ಯಾರುಗೂಡು; ಡ್ಯಾಷ್‍ಬೋರ್ಡು; ವಿಮಾನ, ಮೋಟಾರು ವಾಹನ, ಮೊದಲಾದವುಗಳ ಚಾಲಕನ ಮುಂದೆ ಗಾಳಿತಡೆಯ ಕೆಳಗೆ ಹಾಕಿರುವ, ಉಪಕರಣಗಳನ್ನೂ ನಿಯಂತ್ರಣ ಸಾಧನಗಳನ್ನೂ ಹೊಂದಿರುವ ಗೂಡು, ಅರೆ.