logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

calender
ಸಕರ್ಮಕ ಕ್ರಿಯಾಪದ
  • ದಾಖಲಿಸು; ದಾಖಲೆ ಮಾಡು; ದಾಖಲೆಪಟ್ಟಿಯಲ್ಲಿ ಸೇರಿಸು.
  • (ದಸ್ತಾವೇಜು ಮೊದಲಾದವನ್ನು) ಕ್ರಮವಾಗಿ ಜೋಡಿಸಿ, ವಿಂಗಡಿಸಿ, ಸೂಚಿಪಟ್ಟಿ-ಮಾಡು, ತಯಾರಿಸು.

  • calender
    ಸಕರ್ಮಕ ಕ್ರಿಯಾಪದ
    (ಬಟ್ಟೆ, ಕಾಗದ ಮೊದಲಾದವಕ್ಕೆ ಹೊಳಪು ಯಾ ನುಣುಪು ಕೊಡಲು) ಉರುಳು ಯಂತ್ರದಲ್ಲಿ–ಒತ್ತು, ಇಸ್ತ್ರಿ ಮಾಡು.

    calender
    ನಾಮವಾಚಕ
    ಉರುಳುಯಂತ್ರ; ಬಟ್ಟೆ, ಕಾಗದ ಮೊದಲಾದವನ್ನು ಎರಡು ಉರುಳೆಗಳ ಯಾ ತಟ್ಟೆಗಳ ಮಧ್ಯೆ ಇಟ್ಟು, ಹೊಳಪು ಯಾ ನುಣುಪು ಕೊಡುವ ಇಸ್ತ್ರಿಯಂತ್ರ.

    calender
    ನಾಮವಾಚಕ
    (ತುರ್ಕಿ, ಪರ್ಷಿಯಗಳ) ಗೋಸಾಯಿ; ಭಿಕ್ಷು; ಫಕೀರ; ದರವೇಶಿ.

    calender month
    ನಾಮವಾಚಕ
    ಕ್ಯಾಲೆಂಡರ್‍-ತಿಂಗಳು, ಮಾಸ:
  • ಜನವರಿ, ಫೆಬ್ರವರಿ ಮೊದಲಾದ ಯಾವುದೇ ತಿಂಗಳು.
  • ಒಂದು ತಿಂಗಳ ಒಂದು ನಿರ್ದಿಷ್ಟ ದಿನದಿಂದ ಮುಂದಿನ ತಿಂಗಳ ಅದೇ ದಿನದವರೆಗಿನ ಕಾಲಾವಧಿ (ಉದಾಹರಣೆಗೆ ಜನವರಿ 3 ರಿಂದ ಫೆಬ್ರವರಿ 3ರವರೆಗೆ ಯಾ ಜನವರಿ 31 ರಿಂದ ಫೆಬ್ರವರಿ 29ರವರೆಗೆ).

  • calendric
    ಗುಣವಾಚಕ
    ಪಂಚಾಂಗದ; ಪಂಚಾಗೀಯ; ಕ್ಯಾಲೆಂಡರಿನ; ಕ್ಯಾಲೆಂಡರಿನಲ್ಲಿರುವ ಯಾ ಅದಕ್ಕೆ ಸಂಬಂಧಿಸಿದ ಯಾ ಅದರಲ್ಲಿ ಸೂಚಿಸಿರುವ.

    calendrical
    ಗುಣವಾಚಕ
    = calendric.

    calendry
    ನಾಮವಾಚಕ
    ಇಸ್ತ್ರಿಶಾಲೆ; ಇಸ್ತ್ರಿಮಾಡುವ ಸ್ಥಳ.

    calends
    ನಾಮವಾಚಕ ನುಡಿಗಟ್ಟು
    (ಬಹುವಚನ) (ಪ್ರಾಚೀನ ರೋಮನ್‍ ಪಂಚಾಂಗದಲ್ಲಿ) ಮೊದಲ–ತೇದಿ, ದಿನ.
  • on the Greek Calends
    1. ಎಂದೂ ಬಾರದ–ದಿನದಲ್ಲಿ, ಕಾಲದಲ್ಲಿ; ನಿತ್ಯನಾಳೆಯಲ್ಲಿ (ಗ್ರೀಕರಿಗೆ ಪಂಚಾಂಗ ಇರಲಿಲ್ಲ).
    2. ಎಂದೆಂದಿಗೂ; ಸದಾಕಾಲಕ್ಕೂ.
  • till the Greek Calends = ನುಡಿಗಟ್ಟು \((1)\).

  • calendula
    ನಾಮವಾಚಕ
  • (ಸಸ್ಯವಿಜ್ಞಾನ) ಚೆಂಡು ಹೂ(ಗಿಡ); ಚೆಂಡುಮಲ್ಲಿಗೆ (ಗಿಡ); ಹಳದಿ ಯಾ ಕಿತ್ತಳೆ ಬಣ್ಣದ ದೊಡ್ಡ ದೊಡ್ಡ ಹೂಗಳನ್ನು ಬಿಡುವ ಕುಲ ಯಾ ಆ ಕುಲದ ಗಿಡ.
  • (ಗಾಯಗಳನ್ನು ಮಾಗಿಸುವ) ಚೆಂಡುಹೂವಿನ ಮುಲಾಮು.


  • logo