(ನಿದ್ರೆಯ ಕೊರತೆ, ಅತಿ ನಿದ್ರೆ ಯಾ ಅಳು, ಮೊದಲಾದವುಗಳಿಂದ ಆದ) ಕಣ್ಣಿನ ಚೀಲ; ಕಣ್ಣಿನ ಕೆಳಗಣ ಉಬ್ಬಿಕೆ.
(ಬ್ರಿಟಿಷ್ ಪ್ರಯೋಗ, ಬಹುವಚನದಲ್ಲಿ) ಷರಾಯಿ.
(ಬಹುವಚನದಲ್ಲಿ ಅಶಿಷ್ಟ) ಸಿರಿ; ಸಮೃದ್ಧಿ; ಯಥೇಚ್ಛತೆ; ಬಹಳವಾಗಿರುವುದು: bags of room ಯಥೇಚ್ಛ ಅವಕಾಶ; ಅವಕಾಶ ಯಥೇಚ್ಛವಾಗಿರುವುದು. bags of money ಥೈಲಿಗಟ್ಟಲೆ ಹಣ; ಹಣ ಬಹಳವಾಗಿರುವುದು.
ಸೂಟ್‍ಕೇಸು; ಪ್ರಯಾಣದ ಚೀಲ.
(ಚರ್ಮ, ಬಟ್ಟೆ, ಮೊದಲಾದವುಗಳಲ್ಲಿನ) ಜೋಲು; ನೇಲು.
ಕೈಚೀಲ.
ಅಂಚೆ, ಪ್ರಯಾಣ, ಮೊದಲಾದವುಗಳ ಚೀಲ.
= mixed bag.
(ಅಶಿಷ್ಟ, ಹೀನಾರ್ಥಕ ಪ್ರಯೋಗ) ಹೆಂಗಸು; ಹೆಣ್ಣು: old bag ಮುದಿ ಹೆಂಗಸು.
(ಅಶಿಷ್ಟ) (ಒಬ್ಬನ ಸದ್ಯದ, ಈಗಿನ) ಆಸಕ್ತಿ; ಖಯಾಲಿ.
(ಅಶಿಷ್ಟ) (ಮುಖ್ಯವಾಗಿ ಜಾ) ವಾದನದ ಒಂದು ನಿರ್ದಿಷ್ಟ ಶೈಲಿ, ರೀತಿ ಯಾ ವಾದನ ಮಾಡುವಾಗಿನ ಒಂದು ನಿರ್ದಿಷ್ಟ ವರ್ತನೆ, ಹಾವಭಾವ.
bag
ಕ್ರಿಯಾಪದ
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ bagged, ವರ್ತಮಾನ ಕೃದಂತ bagging)
ಉಬ್ಬಿಸು; ಊದಿಸು.
ಬೇಟೆಯನ್ನು ಚೀಲಕ್ಕೆ ಸೇರಿಸು.
(ಬೇಟೆಯನ್ನು) ಹೊಡೆ; ಹಿಡಿ ಯಾ ಕೊಲ್ಲು (ರೂಪಕವಾಗಿ ಸಹ).
ಪಡೆ; ವಶಪಡಿಸಿಕೊ; ಹಿಡಿ; ಆಕ್ರಮಿಸು: bagged the most comfortable chair ಬಹಳ ಆರಾಮವಾದ ಕುರ್ಚಿಯನ್ನು ಹಿಡಿದ.
(ಸೌಮ್ಯೋಕ್ತಿ) ಜೇಬಿಗೆ ಬಿಡು; ಎಗರಿಸು; ಕದಿ.
(ಬ್ರಿಟಿಷ್ ಪ್ರಯೋಗ, ಶಾಲಾಮಕ್ಕಳ ಅಶಿಷ್ಟ) ಹಕ್ಕನ್ನು ಮಂಡಿಸುವುದರಲ್ಲಿ ಮೊದಲಿಗನಾದ ಕಾರಣ ಹಕ್ಕು ತನ್ನದೆಂದು ಸಾಧಿಸು: ಸಾಮಾನ್ಯವಾಗಿ bags I ಯಾ I bags, first innings! ಮೊದಲಿಗ ನಾನು, ಹಕ್ಕು ನನ್ನದು.