logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Talmud
ನಾಮವಾಚಕ
ಯೆಹೂದ್ಯರ ಧರ್ಮಶಾಸ್ತ್ರ, ಧರ್ಮಗ್ರಂಥ; ಯೆಹೂದ್ಯರ ಸಾಮಾಜಿಕ ನ್ಯಾಯಶಾಸ್ತ್ರ ಮತ್ತು ಸಾಂಪ್ರದಾಯಿಕ ಆಚಾರವಿಧಿಗಳನ್ನೊಳಗೊಂಡ ಧರ್ಮಗ್ರಂಥ.

Talmudic
ಗುಣವಾಚಕ
ಯೆಹೂದಿ–ಧರ್ಮಶಾಸ್ತ್ರದ, ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ.

Talmudical
ಗುಣವಾಚಕ
= Talmudic.

Talmudist
ನಾಮವಾಚಕ
  • ಯೆಹೂದ್ಯ ಧರ್ಮಶಾಸ್ತ್ರ–ಪಂಡಿತ, ಸಂಕಲನಕಾರ.
  • ಯೆಹೂದ್ಯ ಧರ್ಮದ ಅನುಯಾಯಿ.

  • talon
    ನಾಮವಾಚಕ
  • (ಮುಖ್ಯವಾಗಿ ಹಿಂಸ್ರಪಕ್ಷಿಯ) ಮೊನೆಯುಗುರು; ನಖರ; ಪಂಜಾ. Figure: Talon
  • (ಇಸ್ಪೀಟು ಆಟ) ಉಳಿಕೆಯೆಲೆ; ಹಂಚಿ ಉಳಿದ ಎಲೆಗಳು.
  • (ಹೊಸ ಕೂಪನ್ನು ಪಡೆಯಲು ಹಿಂತಿರುಗಿಸಬೇಕಾದ) ಡಿವಿಡೆಂಡ್‍ ಕೂಪನ್ನಿನ ಅಂತಿಮ ಪುಟ, ಕೊನೆಯ ಹಾಳೆ.
  • ಅಗುಳಿಭುಜ; ಬೀಗದ ಅಗುಳಿಯನ್ನು ತಳ್ಳುವಾಗ, ಬೀಗದ ಕೈ ಒತ್ತುವ ಅಗುಳಿಯ ಭಾಗ.
  • (ವಾಸ್ತುಶಿಲ್ಪ) ‘S’ ಆಕಾರದ ಅಲಂಕಾರ ರಚನೆ.

  • taloned
    ಗುಣವಾಚಕ
    (ವಾಸ್ತುಶಿಲ್ಪ) ‘S’ ಗುರುತಿನ ಅಲಂಕಾರ ಮಾಡಿದ (ಸಂಯುಕ್ತಪದಗಳಲ್ಲಿ ಸಹ ಪ್ರಯೋಗ).

    talus
    ನಾಮವಾಚಕ
    (ಅಂಗರಚನಾಶಾಸ್ತ್ರ) (ಮೊಣಕಾಲು ಮೂಳೆಗೆ ಆಧಾರವಾಗಿರುವ) ಕಾಲಿನ ಹರಡೆಬಉ; ಗುಲ್ಫಾಸ್ಥಿ.

    talus
    ನಾಮವಾಚಕ
  • (ತುದಿ ಚೂಪಾಗುತ್ತ ಹೋಗುವ ಯಾ ದಡಕ್ಕೆ ಆನಿಕೊಂಡಿರುವ) ಗೋಡೆಯ–ಓರೆ, ಇಳಿಜಾರು.
  • (ಭೂವಿಜ್ಞಾನ) ಓರೆ ಕಲ್ಲುರಾಶಿ; ಪ್ರಪಾತದ ಬಉಡದಲ್ಲಿಯ ಕಲ್ಲುಚೂರುಗಳ ಇಳಿಜಾರು ರಾಶಿ.

  • TAM
    ಸಂಕ್ಷಿಪ್ತ
    television audience measurement.

    tam
    ನಾಮವಾಚಕ
    tam-o’-shanter ಪದದ ಸಂಕ್ಷಿಪ್ತ.


    logo