logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

maidenly
ಗುಣವಾಚಕ
  • ಕನ್ಯೆಗೆ, ಅವಿವಾಹಿತೆಗೆ – ಸಂಬಂಧಿಸಿದ; ಕನ್ಯೆಯ; ಅವಿವಾಹಿತೆಯ.
  • (ಗುಣಗಳು ಮೊದಲಾದವುಗಳ ವಿಷಯದಲ್ಲಿ) = maidenlike.

  • maidish
    ಗುಣವಾಚಕ
    = maidenish.

    maidservant
    ನಾಮವಾಚಕ
    ಮನೆಗೆಲಸದವಳು.

    maieutic
    ಗುಣವಾಚಕ
    (ಸಾಕ್ರಟೀಸನ ತತ್ತ್ವ ಜಿಜ್ಞಾಸೆಯ, ಪ್ರಶ್ನೆ ವಿಧಾನದ ವಿಷಯದಲ್ಲಿ) ಭಾವ ಪ್ರಸೂತಿಕ; ಒಬ್ಬನ ಮನಸ್ಸಿನಲ್ಲಿ ಸುಪ್ತವಾಗಿರುವ ಭಾವನೆಗಳನ್ನು ಸುಸ್ಪಷ್ಟ ಅರಿವಿಗೆ ತರಲು ಸಹಾಯಕವಾದ.

    maigre
    ಗುಣವಾಚಕ
    (ರೋಮನ್‍ ಕ್ಯಾಥೊಲಿಕ್‍, ಚರ್ಚು) ಮೇಗರ್‍:
  • (ದಿನದ ವಿಷಯದಲ್ಲಿ) ಮಾಂಸನಿಷಿದ್ಧ; ಮಾಂಸಭಕ್ಷಣ ನಿಷಿದ್ಧವಾದ; ಮಾಂಸ ತಿನ್ನಬಾರದೆಂದು ಹೇಳಿರುವ.
  • (ಆಹಾರದ ವಿಷಯದಲ್ಲಿ) ಮಾಂಸನಿಷಿದ್ಧ ದಿನಗಳಲ್ಲಿ ತಿನ್ನಲು ಯೋಗ್ಯವಾದ.

  • mail
    ನಾಮವಾಚಕ ಪದಗುಚ್ಛ
  • ಚಿಲಖತ್ತು; ತನುತ್ರಾಣ; ಲೋಹಗವಚ; ಮೈಜೋಡು; (ಉಂಗುರಗಳಿಂದ ಯಾ ಸರಪಣಿಯ ಹೆಣಿಗೆಯಿಂದ ಮಾಡಿದ) ಉಕ್ಕಿನ ರಕ್ಷಾಕವಚ.
  • ಪ್ರಾಣಿಯ ರಕ್ಷಾಕವಚ; ಪ್ರಾಣಿಯ ಚಿಪ್ಪು, ಶಲ್ಕ, ಪೊರೆ, ಮೊದಲಾದವು.

  • mail
    ಸಕರ್ಮಕ ಕ್ರಿಯಾಪದ ಪದಗುಚ್ಛ
    (the) mailed fist
  • (ಉಕ್ಕಿನ) ರಕ್ಷಾಕವಚ ತೊಡಿಸು.
  • (ಉಕ್ಕಿನ) ರಕ್ಷಾಕವಚ ತೊಡಿಸಿದಂತೆ ತೊಡಿಸು.

  • mail
    ನಾಮವಾಚಕ ಪದಗುಚ್ಛ
  • (ಚರಿತ್ರೆ) ಅಂಚೆಸಂಚಿ; ಅಂಚೆಯ ಚೀಲ; ಟಪಾಲುಚೀಲ; ಅಂಚೆಯ ಮೂಲಕ ರವಾನಿಸಲು (ಸಮಾಚಾರ) ಕಾಗದಗಳನ್ನು ತುಂಬಿದ ಚೀಲ.
  • ಅಂಚೆ; ಟಪಾಲು; ಅಂಚೆಯ ಮೂಲಕ ರವಾನಿಸಿದ ಕಾಗದಗಳು, ಭಾಂಗಿಗಳು, ಮೊದಲಾದವು.
  • (ಒಮ್ಮೆ ರವಾನಿಸಿದ) ಒಟ್ಟು ಟಪಾಲು.
  • ಅಂಚೆಯ ಮೂಲಕ ರವಾನಿಸಿದ ಕಾಗದಗಳು, ಭಾಂಗಿಗಳು, ಮೊದಲಾದವು.
  • ಅಂಚೆ ವ್ಯವಸ್ಥೆ, ಪದ್ಧತಿ.
  • ಟಪಾಲು ರೈಲು; ಅಂಚೆ ರೈಲು; ಮೇಲ್‍ ಟ್ರೇನು; ಟಪಾಲನ್ನು ಸಾಗಿಸುವ ರೈಲು ಬಂಡಿ.
  • ಅಂಚೆವಾಹನ; ಅಂಚೆಗಾಡಿ; ಪತ್ರಗಳು, ಭಾಂಗಿಗಳು, ಮೊದಲಾದವನ್ನು ಸಾಗಿಸುವ ವಾಹನ.

  • mail
    ಸಕರ್ಮಕ ಕ್ರಿಯಾಪದ
    (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಟಪಾಲು ಮೂಲಕ, ಅಂಚೆ ಮೂಲಕ (ಕಾಗದಗಳು ಮೊದಲಾದವನ್ನು) ಕಳುಹಿಸು.

    mail carrier
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಅಂಚೆಪೇದೆ; ಟಪಾಲು ಪೇದೆ; ಅಂಚೆಯವನು(ಳು); ಮನೆಗೆ ಅಂಚೆಯನ್ನು ತಂದುಕೊಡುವವನು(ಳು).


    logo