logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ill-considered
ಗುಣವಾಚಕ
  • ಚೆನ್ನಾಗಿ ಪರಿಶೀಲಿಸದ; ಸರಿಯಾಗಿ ಪರಿಶೀಲನೆ ಮಾಡದ.
  • ಒಪ್ಪದ; ಸಮರ್ಪಕವಾಗಿರದ; ಸರಿಹೊಂದದ.
  • ವಿವೇಚನೆಯಿಲ್ಲದ; ತಿಳಿವಳಿಕೆಯಿಲ್ಲದ; ಅವಿವೇಕದ.

  • ill-defined
    ಗುಣವಾಚಕ
    ಅಸ್ಪಷ್ಟ; ಅಸ್ಫುಟ; ಸ್ಪಷ್ಟವಾಗಿ ವಿಶದಪಡಿಸದ; ಸರಿಯಾಗಿ-ತಿಳಿಸದ, ವಿವರಿಸದ, ಉಕ್ತವಾಗಿಲ್ಲದ.

    ill-disposed
    ಗುಣವಾಚಕ
  • ಕೇಡಿಗ; ಕೆಡುಕಿನ; ಕೇಡೆಣಿಸುವ; ದುಷ್ಟ ಸ್ವಭಾವದ: ill-disposed fellow ಕೇಡಿಗ; ಕೇಡೆಣಿಸುವ ವ್ಯಕ್ತಿ.
  • ಅನುಕೂಲವಾಗಿರದ; ವಿರುದ್ಧಾಭಿಪ್ರಾಯದ; ಪ್ರತಿಕೂಲ ಮನೋಭಾವದ: ill-disposed towards the plan ಯೋಜನೆಗೆ ಪ್ರತಿಕೂಲವಾಗಿರುವ.

  • ill-fated
    ಗುಣವಾಚಕ
    ದುರ್ವಿಧಿಯ; ದೌರ್ಭಾಗ್ಯದ; ದುರ್ಗತಿಯ; ದುರದೃಷ್ಟ ತರುವ; ದುರ್ಗತಿಗೆ ಒಳಗಾಗುವ: ill-fated voyage ದುರದೃಷ್ಟದ ಸಮುದ್ರಯಾನ.

    ill-favoured
    ಗುಣವಾಚಕ
  • ಅಂದವಿಲ್ಲದ; ಕುರೂಪಿಯಾದ; ಅಂದಗೇಡಿಯಾದ; ಅವಲಕ್ಷಣದ: an ill-favoured girl ಕುರೂಪಿಯಾದ ಹುಡುಗಿ.
  • ಅಹಿತವಾದ; ಹಿತವಲ್ಲದ; ಹಿಡಿಸದ; ಮನಸ್ಸಿಗೆ ಒಪ್ಪದ; ಬೇಸರಪಡಿಸುವ; ಬೇಜಾರು ತರುವ: ill-favoured behaviour ಹಿತವಲ್ಲದ ವರ್ತನೆ.
  • ಆಕ್ಷೇಪಣೀಯ; ಆಕ್ಷೇಪಾರ್ಹ; ಅಸಮ್ಮತ: ill-favoured remarks ಆಕ್ಷೇಪಾರ್ಹ ಟೀಕೆಗಳು.

  • ill-founded
    ಗುಣವಾಚಕ
    ನಿರಾಧಾರ; ಆಧಾರ ಸಾಲದ; ಸಾಕಷ್ಟು – ಆಧಾರವಿಲ್ಲದ, ರುಜುವಾತಿಲ್ಲದ, ಪ್ರಮಾಣವಿಲ್ಲದ: an ill-founded plea for mercy ದಯೆ ತೋರಿಸಲು ಸಾಕಷ್ಟು ಆಧಾರವಿಲ್ಲದ ವಾದ.

    ill-gotten
    ಗುಣವಾಚಕ
    ಅನ್ಯಾಯಾರ್ಜಿತ; ಅನ್ಯಾಯದಿಂದ ಪಡೆದ; ಮೋಸದಿಂದ, ಕೃತ್ರಿಮದಿಂದ, ಅಕ್ರಮವಾಗಿ – ಗಳಿಸಿದ; ಅಡ್ಡದಾರಿಯಿಂದ ಸಂಪಾದಿಸಿದ: ill-gotten wealth ಅನ್ಯಾಯದಿಂದ ಪಡೆದ ಐಶ್ವರ್ಯ.

    ill-humoured
    ಗುಣವಾಚಕ
    ಸಿಡುಕಿನ; ರೇಗುವ (ಸ್ವಭಾವದ); ಅಪ್ರಸನ್ನ: love will make ill-humoured people good ಪ್ರೇಮವು ಸಿಡುಕರನ್ನು ಸರಿಪಡಿಸುತ್ತದೆ.

    ill-judged
    ಗುಣವಾಚಕ
    ವಿವೇಚನೆಯಿಲ್ಲದ; ಅವಿವೇಕದ; ವಿಚಾರಹೀನ: an ill-judged compliment ವಿವೇಚನೆಯಿಲ್ಲದ ಪ್ರಶಂಸೆ.

    ill-mannered
    ಗುಣವಾಚಕ
    = illbred.


    logo