logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Dartmouth
ನಾಮವಾಚಕ
(ಇಂಗ್ಲಂಡಿನಲ್ಲಿಯ ಡಾರ್ಟ್‍ಮತ್‍ ಪಟ್ಟಣದಲ್ಲಿರುವ) ಪ್ರೌಢನೌಕಾ ಕಾಲೇಜು.

dartre
ನಾಮವಾಚಕ
ದದ್ದುರೋಗ; ಹಲವಾರು ಬಗೆಯ ಚರ್ಮರೋಗಗಳ ಸಾಮಾನ್ಯ ಹೆಸರು, ಮುಖ್ಯವಾಗಿ ಸರ್ಪಸುತ್ತು (ಹರ್ಪಿಸ್‍).

dartrous
ಗುಣವಾಚಕ
ದದ್ದುರೋಗದ; ದದ್ದುರೋಗವುಳ್ಳ.

Darwinian
ಗುಣವಾಚಕ
ಡಾರ್ವಿನ್ನನ; ಬ್ರಿಟಿಷ್‍ ಪ್ರಕೃತಿ ವಿಜ್ಞಾನಿ ಚಾರ್ಲ್‍ ಡಾರ್ವಿನ್‍ ಮತ್ತು ಆತನ ಜೀವವಿಕಾಸತತ್ತ್ವಗಳಿಗೆ ಯಾ ಆತನ ಅನುಯಾಯಿಗಳಿಗೆ ಸಂಬಂಧಿಸಿದ.

Darwinian
ನಾಮವಾಚಕ
ಡಾರ್ವಿನ್‍ವಾದಿ; ಡಾರ್ವಿನ್‍ ಅನುಯಾಯಿ; ಜೀವಜಾತಿಗಳ ವಿಕಾಸದ ಬಗ್ಗೆ ಚಾರ್ಲ್‍ ಡಾರ್ವಿನ್ನನ ತತ್ತ್ವಗಳನ್ನು ಅನುಸರಿಸುವವನು.

Darwinism
ನಾಮವಾಚಕ
ಡಾರ್ವಿನ್‍ – ವಾದ, ಸಿದ್ಧಾಂತ; ಆನುವಂಶಿಕ ಲಕ್ಷಣಗಳು ತಂದೆ ತಾಯಿಯರಿಂದ ಮುಂದಿನ ಪೀಳಿಗೆಗೆ ಸಾಗುವಾಗ ವಿಕೃತಿಗಳು ಉದ್ಭವಿಸುವುವೆಂದೂ, ಉಳಿವಿಗಾಗಿ ಜೀವಿಗಳು ನಡೆಸುವ ಹೋರಾಟದಲ್ಲಿ ಅನುಕೂಲವಾದ ವಿಕೃತಿಗಳು ನೈಸರ್ಗಿಕ ಆಯ್ಕೆಯ ಫಲವಾಗಿ ಉಳಿದು ಅನನುಕೂಲ ವಿಕೃತಿಗಳು ನಶಿಸಿಹೋಗುವುವೆಂದೂ, ಈ ಪ್ರಕ್ರಿಯೆಯ ಫಲವಾಗಿ ಹೊಸ ಜೀವಪ್ರಭೇದಗಳು ಅಸ್ತಿತ್ವಕ್ಕೆ ಬರುವುವೆಂದೂ ಸಾರುವ ಡಾರ್ವಿನ್ನನ ಸಿದ್ಧಾಂತ.

Darwinist
ಗುಣವಾಚಕ
= 1Darwinian.

Darwinist
ನಾಮವಾಚಕ
= 2Darwinian.

Darwinize
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
ಡಾರ್ವಿನೀಕರಿಸು; ಡಾರ್ವಿನ್‍ ಸಿದ್ಧಾಂತಕ್ಕೆ ಪರಿವರ್ತಿಸು; ಡಾರ್ವಿನನ ತತ್ತ್ವ ಯಾ ದೃಷ್ಟಿಗೆ ಹೊಂದಿಕೊಳ್ಳುವಂತೆ ಮಾಡು: Ibsen was Darwinized to the extent of exploiting heredity on the stage ರಂಗದ ಮೇಲೆ ಆನುವಂಶಿಕ ತತ್ತ್ವವನ್ನು ಬಳಸಿಕೊಳ್ಳುವ ಮಟ್ಟಿಗೆ ಇಬ್ಸನ್ನನು ಡಾರ್ವಿನ್ನನ ತತ್ತ್ವಕ್ಕೆ ಪರಿವರ್ತಿತನಾಗಿದ್ದನು. ಡಾರ್ವಿನ್ನನ ಮಾರ್ಗದಲ್ಲಿ ಯೋಚಿಸು; ಡಾರ್ವಿನನಂತೆ ವಿಚಾರಮಾಡು.

dash
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ರಭಸದಿಂದ ಅಪ್ಪಳಿಸು; ಸಂಘಟ್ಟಿಸು; ಡಿಕ್ಕಿಹೊಡೆ; ಜೋರಾಗಿ ತಾಗು; ಚೂರುಚೂರಾಗುವಂತೆ ಬಡಿ: flowers dashed by rain ಮಳೆಯ ಹೊಡೆತಕ್ಕೆ ಎಸಳು ಮುರಿದ ಹೂಗಳು.
  • (ರಭಸದಿಂದ ಯಾ ಇದ್ದಕ್ಕಿದ್ದಂತೆ)
    1. ದೂಡು; ದಬ್ಬು; ನೂಕು.
    2. ಎಸೆ; ಬಗೆ.
    3. ತಾಗು; ಬಡಿ; ಡಿಕ್ಕಿ ಹೊಡೆ.
  • (ವ್ಯಕ್ತಿ ಯಾ ವಸ್ತುವನ್ನು)
    1. ಎತ್ತೆಸೆ; ಅಪ್ಪಳಿಸು.
    2. ಡಿಕ್ಕಿ ಹೊಡೆಸು; ಬಡಿಸು.
  • (ನೀರು, ಕೆಸರು, ಮೊದಲಾದವನ್ನು) ಎರಚು; ಹಾರಿಸು; ಸಿಡಿಸು.
  • ಬೆರಸು; ಸೇರಿಸು; ಮಿಶ್ರಣಮಾಡು; ಬೆರಕೆ ಮಾಡು; ಸಾರ ತಗ್ಗಿಸು; ದುರ್ಬಲಗೊಳಿಸು; ಸಾರ ಕಡಿಮೆ ಮಾಡು: vinegar dashed with water ನೀರು ಬೆರೆಸಿದ ಸಿರ್ಕ. dash the truth with fiction ಸತ್ಯಕ್ಕೆ ಸುಳ್ಳು ಬೆರಸು.
  • (ಆಶೆ, ನಿರೀಕ್ಷೆ, ಯೋಜನೆ, ಮೊದಲಾದವನ್ನು) ಹಾಳುಮಾಡು; ನಾಶಮಾಡು; ಭಗ್ನಗೊಳಿಸು; ಮುರಿ; ಭಂಗತರು: dash one’s hopes ಆಶೆಯನ್ನು ನುಚ್ಚುನೂರು ಮಾಡು.
  • ಎದೆಗುಂದಿಸು; ಅಧೈರ್ಯಗೊಳಿಸು; ಅಂಜಿಸು.
  • ಕುಗ್ಗಿಸು; ತಗ್ಗಿಸು; ಉತ್ಸಾಹಭಂಗಮಾಡು; ನಿರುತ್ಸಾಹಗೊಳಿಸು.
  • ಗಾಬರಿ ಹಿಡಿಸು; ದಿಕ್ಕುತೋಚದಂತೆ ಮಾಡು.
  • (ಪತ್ರ, ಚಿತ್ರ, ಬರಹ, ಮೊದಲಾದವನ್ನು) (ಆಲೋಚಿಸದೆ) ಥಟ್ಟನೆ ಬರೆದು ಹಾಕು; ಬೇಗ ಗೀಚಿ ಹಾಕು.
  • ಅಡಿಗೀಟು ಎಳೆ.
  • (ಅಶಿಷ್ಟ) = 1damn ಸಕರ್ಮಕ ಕ್ರಿಯಾಪದ \((2)\).


  • logo