(ಭೂವಿಜ್ಞಾನ) ಕ್ಯಾಲಿಡೋನಿಯನ್; ಯೂರೋಪಿನಲ್ಲಿ ಪ್ಯಾಲಿಯಸೊಯಿಕ್ ಕಲ್ಪದಲ್ಲಿಯ ಪರ್ವತ ಜನನದ ಘಟನೆ.
Caledonian
ಗುಣವಾಚಕ
(ಪ್ರಾಚೀನ) ಸ್ಕಾಟ್ಲಂಡಿನ.
(ಭೂವಿಜ್ಞಾನ) ಕ್ಯಾಲಿಡೋನಿಯನ್ ಯುಗದ.
calefacient
ಗುಣವಾಚಕ
(ವೈದ್ಯಶಾಸ್ತ್ರ) ಬಿಸಿ ಹುಟ್ಟಿಸುವ; ಶಾಖಜನಕ.
calefacient
ನಾಮವಾಚಕ
(ವೈದ್ಯಶಾಸ್ತ್ರ) ಶಾಖಜನಕ; ದೇಹಕ್ಕೆ ಸವರಿದಾಗ ಬಿಸಿಹುಟ್ಟಿಸುವ ವಸ್ತು.
calefaction
ನಾಮವಾಚಕ
ಶಾಖಜನನ; ಶಾಖೋತ್ಪಾದನೆ; ಬಿಸಿಯಾಗಿಸುವಿಕೆ.
ಶಾಖ; ಬಿಸಿಯಾದ ಸ್ಥಿತಿ.
calefactory
ಗುಣವಾಚಕ
=2calefacient.
calefactory
ನಾಮವಾಚಕ
(ಕ್ರೈಸ್ತಮಠದಲ್ಲಿ) ಬೆಚ್ಚನೆ ಕೋಣೆ.
calendar year
ನಾಮವಾಚಕ
ಕ್ಯಾಲೆಂಡರ್ ವರ್ಷ:
ಸಂವತ್ಸರ; ಜನವರಿ ಒಂದನೇ ದಿನಾಂಕದಿಂದ ಡಿಸೆಂಬರ್ 31ರ ವರೆಗಿನ ವರ್ಷ.
ಸಾಮಾನ್ಯ ಬಳಕೆಯಲ್ಲಿರುವ ವರ್ಷದ ಕಾಲಾವಧಿ: ಗ್ರೆಗೋರಿಯನ್ ಕ್ಯಾಲೆಂಡರ್‍ನಲ್ಲಿಯ 365 ದಿನಗಳು ಯಾ ಫೆಬ್ರವರಿ 29 ಇದ್ದಾಗ 366 ದಿನಗಳು.
calendarer
ನಾಮವಾಚಕ
ದಿನಸೂಚಿ ತಯಾರಕ; ಪಂಚಾಂಗಕರ್ತ; ಕ್ಯಾಲೆಂಡರುಕಾರ.
(ದಸ್ತಾವೇಜು ಮೊದಲಾದವುಗಳ) ಸೂಚಿ ತಯಾರಕ; ಕ್ರಮವಾಗಿ ಜೋಡಿಸಿ, ವಿಂಗಡಿಸಿ, ಸೂಚಿಪಟ್ಟಿ ಮಾಡುವವನು.
calender
ನಾಮವಾಚಕ
ಕ್ಯಾಲೆಂಡರು; ಪಂಚಾಂಗ:
ವರ್ಷದ ಪ್ರಾರಂಭ, ಅವಧಿ, ವಿಭಾಗ ಮೊದಲಾದವನ್ನು ನಿರ್ಧರಿಸುವ ಯಾವುದೇ ವಿಧಾನ, ಪದ್ಧತಿ.
ಒಂದು ನಿರ್ದಿಷ್ಟ ವರ್ಷದ ದಿನ, ವಾರ, ತಿಂಗಳು, ಹಬ್ಬಗಳು ಮೊದಲಾದವನ್ನು ಯಾ ಕೆಲವು ವರ್ಗಗಳಿಗೆ ಮುಖ್ಯವಾಗಿರುವ ತಾರೀಖುಗಳನ್ನು ಸೂಚಿಸುವ ಪಟ್ಟಿ(ಗಳು): gardener’s calender ತೋಟಗಾರನ ಕ್ಯಾಲೆಂಡರು.
ತಾರೀಖು ಮೊದಲಾದವನ್ನು ಅಳವಡಿಸಬಹುದಾದ ಸಾಧನ.
ರಿಜಿಸ್ಟರು; ದಾಖಲೆಪುಸ್ತಕ; ಮುಖ್ಯವಾಗಿ ವಿಧಿಪೂರ್ವಕವಾಗಿ ಆದ ಸಂತರ ಹೆಸರುಗಳು, ವಿಚಾರಣೆಗೆ ಇರುವ ಮೊಕದ್ದಮೆಗಳು, (ಅಮೆರಿಕನ್ ಪ್ರಯೋಗ) (ಚರ್ಚೆಗೆ ಸಿದ್ಧವಾಗಿರುವ) ವಿಷಯಗಳು ಮೊದಲಾದ ವಿವರಗಳನ್ನೊಳಗೊಂಡ, ಕಾಲಾನುಕ್ರಮದಲ್ಲಿ ತಯಾರಿಸಿದ ದಾಖಲೆಗಳು ಮೊದಲಾದವುಗಳ ಪಟ್ಟಿ.