logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

absolute construction
ನಾಮವಾಚಕ
(ಇಂಗ್ಲಿಷ್‍ ಭಾಷೆಯಲ್ಲಿ) ಸ್ವತಂತ್ರ ವಾಕ್ಯಭಾಗ; ಕ್ರಿಯಾವಿಶೇಷಣವಾಗಿ ಉಪಯೋಗಿಸಲ್ಪಡುವ ನಾಮವಾಚಕ ಮತ್ತು ಕೃದಂತ ಯಾ ಇಂಗ್ಲಿಷ್‍ ಧಾತ್ವರ್ಥವಾಚಿಗಳಿಂದ ಕೂಡಿದ ವಾಕ್ಯಭಾಗ: dinner being over, we left the table. let us toss for it, loser to pay.

absolute magnitude
ನಾಮವಾಚಕ
(ಖಗೋಳ ವಿಜ್ಞಾನ) ನಿರಪೇಕ್ಷ–ಕಾಂತಿಮಾನ, ದೀಪ್ತಿ, ಪ್ರಕಾಶ; 10 ಪಾರ್ಸೆಕ್‍ಗಳ ಯಾ 32.6 ಬೆಳಗಿನ ವರ್ಷಗಳಷ್ಟು ದೂರವಿರುವ ಕಾಲ್ಪನಿಕ ವೀಕ್ಷಕನಿಗೆ ಕಾಣುವ ಆಕಾಶಕಾಯದ ಪ್ರಕಾಶ.

absolute majority
ನಾಮವಾಚಕ
ಅಬಾಧಿತ, ನಿರುಪಾಧಿಕ–ಬಹುಮತ; ಅರ್ಧಕ್ಕಿಂತಲೂ ಹೆಚ್ಚು ಯಾ ಪ್ರತಿಪಕ್ಷಗಳೆಲ್ಲವುಗಳ ಒಟ್ಟು ಮೊತ್ತಕ್ಕಿಂತ ಹೆಚ್ಚು ಮತಗಳನ್ನು ಪಡೆದಿರುವುದು.

absolute music
ನಾಮವಾಚಕ
ಶುದ್ಧ ಸಂಗೀತ; ಸ್ವರವಾದನ; ಸಾಹಿತ್ಯವಿಲ್ಲದೆ ಯಾ ಯಾವುದೇ ಸಾಹಿತ್ಯವನ್ನು ಸೂಚಿಸದೆ, ಕೇವಲ ಸ್ವರಗಳ ವಾದನದಿಂದ ಕೂಡಿದ ವಾದ್ಯ ಸಂಗೀತ.

absolute pitch
ನಾಮವಾಚಕ
  • (ಸಂಗೀತ) ಸ್ವರಜ್ಞಾನ; ಸ್ವರಸ್ಥಾಯಿಯನ್ನು ಗುರುತಿಸುವ ಯಾ ಉಂಟು ಮಾಡುವ ಸಾಮರ್ಥ್ಯ.
  • (ಸಂಗೀತ) ನಿಶ್ಚಿತ ಸ್ವರಸ್ಥಾಯಿ; ಸ್ಪಂದನದ ವೇಗದ ಆಧಾರದ ಮೇಲೆ ನಿರ್ಧರಿಸಿದ ಸ್ವರಸ್ಥಾಯಿ.

  • absolute temperature
    ನಾಮವಾಚಕ
    ನಿರಪೇಕ್ಷತಾಪ; ನಿರಪೇಕ್ಷ ಸೊನ್ನೆ ಡಿಗ್ರಿಯಿಂದ ಅಳೆದ ತಾಪ.

    absolute zero
    ನಾಮವಾಚಕ
    (ಭೌತವಿಜ್ಞಾನ) ನಿರಪೇಕ್ಷಶೂನ್ಯ; ನಿರಪೇಕ್ಷ ತಾಪಮಾನ ಪದ್ಧತಿಯಲ್ಲಿ ಸೊನ್ನೆ ಡಿಗ್ರಿ; ತಾಪಕ್ಕೆ ಕಾರಣವಾದ ಅಣುಚಲನೆ ಸಂಪೂರ್ಣವಾಗಿ ಇಲ್ಲದಿರುವ ಕಾಲ್ಪನಿಕ ತಾಪ, $-273.16^\circ{\rm C}$.

    absolutely
    ಕ್ರಿಯಾವಿಶೇಷಣ
  • ತನಗೆ ತಾನೆ; ಸ್ವತಃ; ಸ್ವತಂತ್ರವಾಗಿ; ಪ್ರತ್ಯೇಕವಾಗಿ.
  • ನಿರಂಕುಶವಾಗಿ; ಬಾಹ್ಯನಿಯಂತ್ರಣವಿಲ್ಲದೆ.
  • (ವ್ಯಾಕರಣ) ಅನನ್ವಿತವಾಗಿ; ಕರ್ಮಪದವನ್ನು ಬಳಸದೆ: transitive verb used absolutely ಅನನ್ವಿತವಾಗಿ ಯಾ ಕರ್ಮಪದ ಹೇಳದೆ ಬಳಸಿದ ಸಕರ್ಮಕ ಕ್ರಿಯಾಪದ.
  • ನಿರುಪಾಧಿಕವಾಗಿ. ಉ೫ ನಿರಪೇಕ್ಷವಾಗಿ.
  • ನಿಜವಾಗಿ; ಖಂಡಿತವಾಗಿ; ವಾಸ್ತವವಾಗಿ; ನಿಶ್ಚಯವಾಗಿ: it absolutely exploded ಅದು ನಿಜವಾಗಿ ಸಿಡಿಯಿತು.
  • ಪೂರ್ತಿ; ಶುದ್ಧಾಂಗವಾಗಿ; ಪೂರ್ಣವಾಗಿ; ಸಂಪೂರ್ಣವಾಗಿ: absolutely wrong ಪೂರ್ತಿ ತಪ್ಪು.
  • (ನಿಷೇಧಾರ್ಥಕಗಳೊಡನೆ) ಸ್ವಲ್ಪವೂ; ಇನಿತೂ; ಏನೂ; ಕಿಂಚಿತ್ತೂ: had absolutely no claim to it ಅದಕ್ಕೆ ಸ್ವಲ್ಪವೂ ಹಕ್ಕಿಲ್ಲ. could do absolutely nothing ಏನೂ ಮಾಡಲಾಗಲಿಲ್ಲ.

  • absolutely
    ಭಾವಸೂಚಕ ಅವ್ಯಯ
  • ಹೌದು; ನಿಜ; ಖಂಡಿತವಾಗಿ.
  • ಅಂತೆಯೇ; ಹಾಗೆಯೇ.

  • absoluteness
    ನಾಮವಾಚಕ
  • ನಿರಂಕುಶತ್ವ.
  • ನಿರುಪಾಧಿಕತೆ.
  • ಸ್ವತಂತ್ರ–ಸತ್ತೆ, ಅಸ್ತಿತ್ವ, ಸ್ಥಿತಿ.
  • ಖಚಿತತೆ; ನಿಷ್ಕೃಷ್ಟತೆ.
  • ಪರಮಸ್ಥಿತಿ: ಮೂಲತತ್ತ್ವ.


  • logo