buy goods by the tally (ಡಸನ್, ನೂರು, ಹೀಗೆ) ತಂಡಗಟ್ಟಲೆ ಪದಾರ್ಥಗಳನ್ನು ಕೊಳ್ಳು.
(ಚರಿತ್ರೆ) ತಾಳೆ ಲೆಕ್ಕದ–ಕಡ್ಡಿ, ಕೋಲು.
ಲೆಕ್ಕದ ಬಾಬಉಗಳಿಗೆ ತಕ್ಕ ಕಚ್ಚುಗಳನ್ನು ಗುರುತಿಸಿ, ಬಳಿಕ ಉದ್ದಕ್ಕೆ ಎರಡಾಗಿ ಸೀಳಿ ಸಾಲಿಗ-ಸಾಲಗಾರರಿಬ್ಬರೂ ಒಂದೊಂದನ್ನು ಇಟ್ಟುಕೊಳ್ಳುತ್ತಿದ್ದ ಲೆಕ್ಕದ ಕೋಲು, ಕಡ್ಡಿ.
(ಹೀಗೆ ತೆಗೆದುಕೊಂಡ) ತಾಳೆಕೋಲಿನ ಲೆಕ್ಕ.
ತಂಡ ಗುರುತು; ಕೊಟ್ಟ ಯಾ ತೆಗೆದುಕೊಂಡ ನಿರ್ದಿಷ್ಟ ಸಂಖ್ಯೆಯ (ಉದಾಹರಣೆಗೆ 12; 100) ವಸ್ತುಗಳನ್ನು ಸೂಚಿಸಲು ಮಾಡಿದ ಗುರುತು.
ತಂಡಸಂಖ್ಯೆ; ಏಕಮಾನವಾಗಿ ಉಪಯೋಗಿಸುವ (ಡಜನ್ನು, ನೂರು, ಮೊದಲಾದ) ಸಂಖ್ಯೆ.
ಹೆಸರು ಬಿಲ್ಲೆ; ಗುರುತು ಚೀಟಿ; ಪದಾರ್ಥ ಗುರುತಿಸಲು ಕಟ್ಟಿದ, ಅದರ ಹೆಸರು ಮೊದಲಾದವುಗಳಿರುವ ರಟ್ಟು, ಲೋಹ, ಮೊದಲಾದವುಗಳ ತಗಡು, ಬಿಲ್ಲೆ.
(ಸಂವಾದಿಯಾದ)ಜೋಡಿ; ಜೊತೆ; ದುಪ್ರತಿ; ಜವಾಬಾದುದು.
ಸಾಲ ಯಾ ಗೆಲ್ಲಂಕವನ್ನು ಎಣಿಕೆ ಮಾಡುವಿಕೆ.
ಒಟ್ಟು ಗೆಲ್ಲಂಕ ಯಾ ಗೆಲ್ಲಂಕಗಳ ಮೊತ್ತ.
tally
ಕ್ರಿಯಾಪದ
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ತಾಳೆಲೆಕ್ಕ ಇಡು; ತಾಳೆಲೆಕ್ಕದಲ್ಲಿ ದಾಖಲು ಮಾಡು, ಎಣಿಸು. ತಾಳೆಯಾಗು; ತಾಳೆ–ಬೀಳು, ಬರು; ಸರಿಹೊಂದು: goods do not tally with the invoice ಸರಕಿಗೂ ಸರಕುಪಟ್ಟಿಗೂ ತಾಳೆಯಾಗುವುದಿಲ್ಲ.
tally clerk
ನಾಮವಾಚಕ
(ಹಡಗು ದಕ್ಕೆಯ) ಲೆಕ್ಕದ ಗುಮಾಸ್ತೆ; ಹಡಗು ದಕ್ಕೆಯಲ್ಲಿ, ಸರಕುಗಳ (ಮುಖ್ಯವಾಗಿ ಹಡಗಿಗೆ ತುಂಬಿದ ಯಾ ಹಡಗಿನಿಂದ ಇಳಿಸಿದ ಸರಕುಗಳ) ತಾಳೆಲೆಕ್ಕವಿಡುವ ಗುಮಾಸ್ತೆ.
tally sheet
ನಾಮವಾಚಕ
ತಾಳೆಲೆಕ್ಕದ ಹಾಳೆ, ಕಾಗದ.
tally system
ನಾಮವಾಚಕ
ತಾಳೆಲೆಕ್ಕವನ್ನಿಡುವ, ಕಂತು ಸಾಲದ ವ್ಯಾಪಾರ; ತಾಳೆಲೆಕ್ಕದ, ಕಂತುಸಾಲದ–ವ್ಯವಸ್ಥೆ, ಪದ್ಧತಿ.