ನಾನಾ ಉದ್ದೇಶದ, ಬಹೂದ್ದೇಶದ–ಮೇಜು; ಸಾಂದರ್ಭಿಕ ಮೇಜು; ಸಾಮಯಿಕ ಮೇಜು; ಸಂದರ್ಭಾನುಸಾರ, ಸಮಯಾನುಸಾರ ನಾನಾ ಕೆಲಸಗಳಿಗೆ ಬಳಸುವ ಮೇಜು.
occasionalism
ನಾಮವಾಚಕ
(ತತ್ತ್ವಶಾಸ್ತ್ರ) ಸಾಂದರ್ಭಿಕ ವಾದ; ಮನಸ್ಸು ಮತ್ತು ಭೌತ ದ್ರವ್ಯ ಪರಸ್ಪರ ಕ್ರಿಯೆಯಲ್ಲಿ ತೊಡಗುವುದಿಲ್ಲ, ಆದರೆ ಒಂದು ಕ್ಷೇತ್ರದಲ್ಲಿನ ಘಟನೆಗೆ ಸಂವಾದಿಯಾಗಿ ಇನ್ನೊಂದು ಕ್ಷೇತ್ರದಲ್ಲಿ ಘಟನೆ ನಡೆಯುತ್ತದೆ (ಉದಾಹರಣೆಗೆ ಮನಸ್ಸಿನಲ್ಲಿ ಶಬ್ದದ ಕಲ್ಪನೆ ಉದಯಿಸಿದಾಗ ಹೊರಗಡೆಯ ಭೌತ ಪ್ರಪಂಚದಲ್ಲಿ ಶಬ್ದ ಉಂಟಾಗಿರುತ್ತದೆ), ಇದು ಹೀಗಿರುವಂತೆ ಮಾಡುವವನು ದೇವರು ಎಂದು ಪ್ರತಿಪಾದಿಸುವ ಕಾರ್ಟೀಸಿಯನ್ ತಾತ್ತ್ವಿಕರ ಸಿದ್ಧಾಂತ; ಮನಸ್ಸಂಕಲ್ಪ ಮತ್ತು ಇಂದ್ರಿಯ ಸಂವೇದನೆಗಳಿಗೂ ಅವುಗಳಿಗೆ ಮುಂಚೆ ಮತ್ತು ಅವುಗಳ ತರುವಾಯ ಸಂಭವಿಸುವ ಭೌತ ವಿದ್ಯಮಾನಗಳಿಗೂ ಇರುವ ಸಂಬಂಧ ಕಾರ್ಯಕಾರಣ ಸಂಬಂಧವಲ್ಲ, ಆದರೆ ಬೇರೆ ಬೇರೆ ಘಟನೆಗಳಾಗಿ ಅವು ಒಂದೇ ಸಂದರ್ಭದಲ್ಲಿ ಭಗವಂತನಿಂದ ಸ್ಪಷ್ಟವಾಗುವುದರಿಂದ ಅವುಗಳ ಸಂಬಂಧವು ಸಾಮಯಿಕ ಸಂಯೋಗ ಸಂಬಂಧವೆಂದು ಪ್ರತಿಪಾದಿಸುವ ಕಾರ್ಟೀಷಿಯನ್ ತಾತ್ತ್ವಿಕರ ಸಿದ್ಧಾಂತ.
occasionalist
ನಾಮವಾಚಕ
ಸಾಮಯಿಕ ಸಂಬಂಧ ಸಿದ್ಧಾಂತಿ; ಸಾಂದರ್ಭಿಕವಾದಿ; ಸಾಮಯಿಕ ಸಂಬಂಧ ಸಿದ್ಧಾಂತದ ಪ್ರತಿಪಾದಕ.
occasionality
ನಾಮವಾಚಕ
ಸಾಂದರ್ಭಿಕತೆ:
ಸಂದರ್ಭದಿಂದ ಆಗಿರುವಿಕೆ ಯಾ ಸಂದರ್ಭಕ್ಕಾಗಿ ಮಾಡಿರುವಿಕೆ.
ಸಂದರ್ಭವನ್ನು ಅವಲಂಬಿಸಿದ ಘಟನೆ.
ಸಮಯಾನುಸರಣೆ; ಸಂದರ್ಭವನ್ನು ಅವಲಂಬಿಸಿ ನಡೆಯುವಿಕೆ.
ಪ್ರಾಸಂಗಿಕತೆ; (ಕ್ರಮವಾಗಿ ಆಗದೆ) ಎಲ್ಲೋ ಒಮ್ಮೊಮ್ಮೆ ನಡೆಯುವಿಕೆ.
occasionally
ಕ್ರಿಯಾವಿಶೇಷಣ
ಸಂದರ್ಭಾನುಸಾರ; ಸಮಯಾನುಸಾರ.
ಪ್ರಾಸಂಗಿಕವಾಗಿ; ಕ್ವಚಿತ್ತಾಗಿ; ಆಗೊಮ್ಮೆ ಈಗೊಮ್ಮೆ.
Occident
ನಾಮವಾಚಕ
(ಕಾವ್ಯಪ್ರಯೋಗ ಯಾ ಅಲಂಕಾರಶಾಸ್ತ್ರ)
ಪಶ್ಚಿಮ (ದಿಕ್ಕು); ಪ್ರತೀಚಿ; ಪಡುವಣ.
ಪಶ್ಚಿಮ ಯೂರೋಪ್ ಖಂಡ.
(ಪೌರಸ್ತ್ಯ ದೇಶಗಳಿಗೆ ಭಿನ್ನವಾದ) ಪಾಶ್ಚಾತ್ಯ ದೇಶ; ಪಡುವಣ ದೇಶಗಳು; ಯುರೋಪ್, ಅಮೆರಿಕ ಯಾ ಎರಡೂ ದೇಶಗಳು.
(ಪೌರಸ್ತ್ಯ ನಾಗರಿಕತೆಗೆ ವ್ಯತಿರಿಕ್ತವಾಗಿ) ಪಾಶ್ಚಾತ್ಯ ಯಾ ಯೂರೋಪಿನ ನಾಗರಿಕತೆ.
occidental
ಗುಣವಾಚಕ
ಪಶ್ಚಿಮದ; ಪಡುವಣ.
ಪಾಶ್ಚಾತ್ಯ; ಯೂರೋಪಿನ ಯಾ ಅಮೆರಿಕದ.
ಪಾಶ್ಚಾತ್ಯ ರಾಷ್ಟ್ರಗಳ.
ಪಾಶ್ಚಾತ್ಯತೆಯ; ಪಾಶ್ಚತ್ಯರ ಯಾ ಅವರ ನಾಗರಿಕತೆಯ.
Occidental
ನಾಮವಾಚಕ
ಪಾಶ್ವಾತ್ಯ; ಪಶ್ಚಿಮ ದೇಶಗಳ ವ್ಯಕ್ತಿ ಯಾ ನಿವಾಸಿ.
occidentalise
ಸಕರ್ಮಕ ಕ್ರಿಯಾಪದ
= occidentalize.
occidentalism
ನಾಮವಾಚಕ
ಪಾಶ್ಚಾತ್ಯತೆ; ಪಾಶ್ಯಾತ್ಯ ಜನರ ಯಾ ನಾಗರಿಕತೆಯ ವಿಶಿಷ್ಟ ಲಕ್ಷಣಗಳು.