ಅವಿವಾಹಿತೆಯಾದ; ಕನ್ನಿಕೆಯಾದ; ಮದುವೆಯಾಗಿರದ: maiden aunt ಮದುವೆಯಿಲ್ಲದ ಚಿಕ್ಕಮ್ಮ.
(ಹೆಣ್ಣು ಪ್ರಾಣಿಗಳ ವಿಷಯದಲ್ಲಿ) ಗಂಡಿನೊಡನೆ ಬೆರೆಯದೆ ಇರುವ; ಗಂಡಿನ ಸಂಪರ್ಕವಾಗಿಲ್ಲದ.
(ಕುದುರೆಯ ವಿಷಯದಲ್ಲಿ) ಅವಿಜಯಿ; ಎಂದೂ ರೇಸಿನಲ್ಲಿ ಗೆದ್ದಿರದ.
(ಕುದುರೆ ಪಂದ್ಯದ ವಿಷಯದಲ್ಲಿ) ಅವಿಜಯಿ ಕುದುರೆಗಳು, ಎಂದೂ ಗೆದ್ದಿರದ ಕುದುರೆಗಳು ಸ್ಪರ್ಧಿಸಬಹುದಾದ.
(ಸಸ್ಯದ ವಿಷಯದಲ್ಲಿ) ಬೀಜಜನಿತ; ಬೀಜ ಬಿತ್ತಿ ಬೆಳೆಸಿದ.
(ಸೈನಿಕ, ಕತ್ತಿ, ಮೊದಲಾದವುಗಳ ವಿಷಯದಲ್ಲಿ) ಅಪರೀಕ್ಷಿತ; ಯೋಗ್ಯತಾ ಪರೀಕ್ಷೆ ಮಾಡಿಲ್ಲದ ಯಾ ಆಗಿಲ್ಲದ.
(ಯಾವುದೇ ಕಾರ್ಯ, ಸಾಧನೆ, ಪ್ರಯತ್ನ, ಬಳಕೆ, ಮೊದಲಾದವುಗಳ ವಿಷಯದಲ್ಲಿ) ಮೊಟ್ಟಮೊದಲನೆಯ; ಪ್ರಪ್ರಥಮ; ಆದ್ಯ: the ship’s maide voyage ಹಡಗಿನ ಪ್ರಥಮ ಯಾನ. maiden effort ಪ್ರಥಮ ಪ್ರಯತ್ನ. maiden speech ಮೊದಲನೆ ಭಾಷಣ.
maiden assize
ನಾಮವಾಚಕ
(ಬ್ರಿಟಿಷ್ ಪ್ರಯೋಗ) ಮೊಕದ್ದಮೆರಹಿತ ಅಧಿವೇಶನ; ವಿಚಾರಣೆಗೆ ಮೊಕದ್ದಮೆಗಳೇ ಇಲ್ಲದ ನ್ಯಾಯಸ್ಥಾನದ ಅಧಿವೇಶನ.
maiden name
ನಾಮವಾಚಕ
(ಹೆಂಗಸಿನ) ಕನ್ಯಾನಾಮ; ಹೆಂಗಸಿನ ಮದುವೆಗೆ ಮುಂಚಿನ ಹೆಸರು.
maiden over
ನಾಮವಾಚಕ
ರನ್ನುರಹಿತ ಓವರು; ಮೇಡನ್ ಓವರು; ಒಂದು ರನ್ನನ್ನೂ ಗಳಿಸದಂತೆ ಬೋಲ್ ಮಾಡಿದ ಓವರು.
maiden speech
ನಾಮವಾಚಕ
(ಹೌಸ್ ಆಹ್ ಕಾಮನ್ಸ್‍ನಲ್ಲಿ ಒಬ್ಬ ಶಾಸಕ ಮಾಡುವ) ಪ್ರಥಮ ಭಾಷಣ; ಮೊಟ್ಟ ಮೊದಲ ಭಾಷಣ.
maidenhair
ನಾಮವಾಚಕ
ಪದಗುಚ್ಛ
(ಕೂದಲಿನಂಥ ಕಾಂಡಗಳೂ, ಬಹುಸೂಕ್ಷ್ಮವಾದ ಎಲೆಗರಿಗಳೂ ಉಳ್ಳ) ಒಂದು ಬಗೆಯ ಜರೀಗಿಡ.