logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

laissez-passer
ನಾಮವಾಚಕ
ಪರ್ಮಿಟ್ಟು; ಪಾಸು; ಪ್ರವೇಶ ಚೀಟಿ; ಪ್ರವೇಶಕ್ಕೆ ಅನುಮತಿ ಕೊಡುವ ದಾಖಲೆ.

laity
ನಾಮವಾಚಕ
  • (ಮತಧರ್ಮ ಯಾ ವೃತ್ತಿಯೊಂದರ ವಿಷಯದಲ್ಲಿ) ಶ್ರೀಸಾಮಾನ್ಯತೆ; ಲೌಕಿಕತೆ; ಜನಸಾಮಾನ್ಯನಾಗಿರುವುದು; ಲೌಕಿಕನಾಗಿರುವುದು.
  • ಶ್ರೀಸಾಮಾನ್ಯರು; ಲೌಕಿಕರು; ವೃತ್ತಿಗ ಯಾ ಪಾದ್ರಿ ಅಲ್ಲದವರು.

  • lake
    ನಾಮವಾಚಕ ಪದಗುಚ್ಛ
    ಸರಸ್ಸು; ಸರೋವರ; ದೊಡ್ಡಕೆರೆ.
  • the Lakes = Lake District.
  • the Great Lake ಅಟ್ಲಾಂಟಿಕ್‍ ಸಾಗರ.
  • the Great Lakes ಮಹಾಸರೋವರಗಳು; ಅಮೆರಿಕ ಸಂಸ್ಥಾನಗಳಿಗೂ, ಕೆನಡಾ ದೇಶಕ್ಕೂ ಗಡಿಯಾಗಿರುವ ಐದು ಮಹಾ ಸರೋವರಗಳು.

  • lake
    ನಾಮವಾಚಕ
  • ಲಾಕಿ ಬಣ್ಣ; ಮೊದಲು ಅರಗಿನಿಂದ ಮಾಡುತ್ತಿದ್ದ, ಈಗ ಹಲವು ಬೇರೆ ವಸ್ತುಗಳಿಂದ ತಯಾರಿಸುವ, ಕಡುಗೆಂಪಿನ ವರ್ಣದ್ರವ್ಯ ಯಾ ಕೆಂಪುರಂಗು.
  • ಲೇಕ್‍:
    1. ನೆಯ್ದ ಬಟ್ಟೆಗೆ ಬಣ್ಣ ಕಚ್ಚಿಸಲು ರಂಗು ಹಾಗೂ ವರ್ಣಬಂಧಕಗಳ ಕ್ರಿಯೆಯಿಂದಾದ ಸಂಯುಕ್ತ.
    2. ದ್ರಾವ್ಯ ರಂಗು ಹಾಗೂ ವರ್ಣ ಬಂಧಕಗಳಿಂದಾದ, ಅದ್ರಾವ್ಯ ಉತ್ಪನ್ನ.

  • Lake District
    ನಾಮವಾಚಕ
    ಲೇಕ್‍ ಡಿಸ್ಟ್ರಿಕ್ಟ್‍; ಇಂಗ್ಲಂಡಿನ ವೆಸ್ಟ್‍ ಮೂರ್‍ಲಂಡ್‍, ಕಂಬರ್‍ಲಂಡ್‍ ಮತ್ತು ಲ್ಯಾಂಕಷೈರ್‍ಗಳಲ್ಲಿನ ಸರೋವರ ಪ್ರದೇಶಗಳು.

    lake-country
    ನಾಮವಾಚಕ
    = Lakeland.

    lake-dweller
    ನಾಮವಾಚಕ
    ಸರೋವರ(ಗೃಹದ)ವಾಸಿ.

    lake-dwellings
    ನಾಮವಾಚಕ
    ಸರೋಗೃಹ; ಸರೋವಸತಿ; ಸರೋವರದ – ಮನೆ, ವಾಸಗೃಹ; ಸರೋವರದ ತಳದಲ್ಲಿ ದಸಿಗಳನ್ನು ನೆಟ್ಟು ಅವುಗಳ ಮೇಲೆ ಕಟ್ಟುತ್ತಿದ್ದ (ಇತಿಹಾಸ ಪೂರ್ವಕಾಲದ) ವಾಸದ ಮನೆ.

    Lakeland
    ನಾಮವಾಚಕ
    = Lake District.

    Lakeland terrier
    ನಾಮವಾಚಕ
    ಲೇಕ್‍ಲಂಡ್‍ ಟೆರಿಯರ್‍:
  • ‘ಲೇಕ್‍ ಡಿಸ್ಟ್ರಿಕ್ಟ್‍’ನ, ಗಿಡ್ಡನಾದ ಇಂಗ್ಲೆಂಡಿನ ನಾಯಿತಳಿ.
  • ಈ ತಳಿಯ ನಾಯಿ.


  • logo