logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ectoparasite
ನಾಮವಾಚಕ
(ಜೀವವಿಜ್ಞಾನ) ಬಾಹ್ಯಪರೋಪಜೀವಿ; ಆತಿಥೇಯ ದೇಹದ ಹೊರಭಾಗದಲ್ಲಿ ಜೀವಿಸುವ ಪರೋಪಜೀವಿ.

ectophyte
ನಾಮವಾಚಕ
(ಜೀವವಿಜ್ಞಾನ) ಬಾಹ್ಯ ಸಸ್ಯ; ಬಾಹ್ಯ ಪರೋಪಜೀವಿ ಸಸ್ಯ; ಆತಿಥೇಯ ದೇಹದ ಹೊರಭಾಗದಲ್ಲಿ ಜೀವಿಸುವ ಪರೋಪಜೀವಿ ಸಸ್ಯ.

ectopic
ಗುಣವಾಚಕ
(ರೋಗಶಾಸ್ತ್ರ) ಅಪಸ್ಥಾನೀಯ; (ದೇಹಭಾಗಗಳ ವಿಷಯದಲ್ಲಿ) ಸಾಮಾನ್ಯವಾಗಿ ಇರಬೇಕಾದ ಸ್ಥಾನದಲ್ಲಿರದೆ ಬೇರೆಡೆ ಇರುವ; ಅಪಸಾಮಾನ್ಯ ಸ್ಥಾನದಲ್ಲಿರುವ.

ectoplasm
ನಾಮವಾಚಕ
ಬಾಹ್ಯದ್ರವ:
  • (ಜೀವವಿಜ್ಞಾನ) ಕೋಶದ್ರವದ ಹೊರಪದರ.
  • ಸತ್ತುಹೋದವರೊಡನೆ ಸಂಪರ್ಕ ಬೆಳೆಸುವಾಗ ಮಾಧ್ಯಮವಾಗಿ ವರ್ತಿಸುವ ವ್ಯಕ್ತಿ ಆವೇಶಪೂರಿತನಾಗಿರುವಾಗ ಅವನ ದೇಹದಿಂದ ಹೊರಸೂಸುವುದೆಂದು ನಂಬಲಾಗಿರುವ ಸ್ನಿಗ್ಧ ದ್ರವ.

  • ectotherm
    ನಾಮವಾಚಕ
    (ಜೀವವಿಜ್ಞಾನ) ಶೀತರಕ್ತದ ಪ್ರಾಣಿ.

    ectozoon
    ನಾಮವಾಚಕ
    = ectoparasite.

    ECU
    ಸಂಕ್ಷಿಪ್ತ
    European Currency Unit.

    ecumenical
    ಗುಣವಾಚಕ
  • ವಿಶ್ವಕ್ರೈಸ್ತ; ಸಮಸ್ತ ಕ್ರೈಸ್ತ ಪ್ರಪಂಚದ.
  • ಸಮಸ್ತ ಕ್ರೈಸ್ತ ಪ್ರಪಂಚದ ಪ್ರತಿನಿಧಿಯಾದ.
  • ಜಗತ್ತಿನಾದ್ಯಂತ ಕ್ರೈಸ್ತಧರ್ಮದ ಐಕ್ಯಕ್ಕಾಗಿ ಯತ್ನಿಸುವ.
  • ವಿಶ್ವವ್ಯಾಪಿ(ಯಾದ); ಪ್ರಪಂಚದಲ್ಲೆಲ್ಲ ಹರಡಿದ.

  • ecumenicalism
    ನಾಮವಾಚಕ
    ವಿಶ್ವಕ್ರೈಸ್ತ ತತ್ತ್ವ; ಜಗತ್ತಿನಾದ್ಯಂತ ಕ್ರೈಸ್ತ ಧರ್ಮದ ಐಕ್ಯಕ್ಕಾಗಿ ಯತ್ನಿಸಬೇಕೆಂಬ ತತ್ತ್ವ.

    ecumenicity
    ನಾಮವಾಚಕ
    ವಿಶ್ವಕ್ಕೆಕ್ರೈಸ್ತ ಐಕ್ಯತೆ; ಜಗತ್ತಿನಾದ್ಯಂತ ಕ್ರೈಸ್ತ ಧರ್ಮವು ಐಕ್ಯವಾದ ಸ್ಥಿತಿ.


    logo