logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

darning-stitch
ನಾಮವಾಚಕ
ತುಂಬುವ ಹೊಲಿಗೆ; ರಹುಹೊಲಿಗೆ; ಬಟ್ಟೆಯ ತೂತು ಮುಚ್ಚಲು ಮಾಡುವ ಹೊಲಿಗೆ.

darshan
ನಾಮವಾಚಕ
(ಭಾರತ) ದರ್ಶನ; ಶ್ರೇಷ್ಠ ದರ್ಜೆಯ ವ್ಯಕ್ತಿ, ಸಂನ್ಯಾಸಿ ಯಾ ಮಹಾತ್ಮನನ್ನು ನೋಡುವುದು.

dart
ನಾಮವಾಚಕ
  • ಈಟಿ; ಭರ್ಜಿ; ಸಬಳ; ಚೂಪಾದ ಎಸೆಯುವ ಆಯುಧ.
  • ಆಟದ ಈಟಿ. Figure: dart-2
  • (ಬಹುವಚನದಲ್ಲಿ) (ಸಾಮಾನ್ಯವಾಗಿ ಏಕವಚನವಾಗಿ ಬಳಕೆ) ಈಟಿಯಾಟಿ; ಹಗುರವಾದ, ಸಾಮಾನ್ಯವಾಗಿ ಗರಿಗಳನ್ನು ಸಿಕ್ಕಿಸಿರುವ ಆಟದ ಈಟಿಗಳು ಮತ್ತು ಗುರಿ ಹಲಗೆಗಳಿಂದ ಆಡುವ ಒಳಾಂಗಣದ ಆಟ.
  • (ಕೀಟ ಮೊದಲಾದವುಗಳ) ಚುಚ್ಚುಮುಳ್ಳು; ಕೊಂಡಿ.
  • ಕ್ಷಿಪ್ರ, ಹಠಾತ್‍ – ಚಲನೆ; ಥಟ್ಟನೆ – ನುಗ್ಗುವುದು, ಓಡುವುದು, ನೆಗೆಯುವುದು.
  • ಈಟಿಯೆಸತ; ಈಟಿಯನ್ನು ಎಸೆಯುವಿಕೆ.
  • ಚೂಪು ಮಡಿಕೆ; ಚೂಪು ಟಕ್ಕು; ಉಡುಪಿಗೆ ಹೊಲಿದಿರುವ, ತುದಿಯಲ್ಲಿ ಚೂಪಾಗಿರುವ ಟಕ್ಕು, ನಿರಿಗೆ ಯಾ ಮಡಿಕೆ.

  • dart
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಈಟಿ ಮೊದಲಾದವನ್ನು) ಥಟ್ಟನೆ ಎಸೆ.
  • (ನೋಟ, ಬೆಳಕು, ಕೋಪಗಳನ್ನು) ಥಟ್ಟನೆ – ಬೀರು, ಚೆಲ್ಲು, ಸೂಸು.
  • ಥಟ್ಟನೆ ಚಲಿಸು: the snake darted its head this way and that way ಹಾವು ತಲೆಯನ್ನು ಥಟ್ಟನೆ ಅತ್ತಿತ್ತ ಆಡಿಸಿತು.

  • dartboard
    ನಾಮವಾಚಕ
    ಈಟಿ ಹಲಗೆ; ಈಟಿಯಾಟದಲ್ಲಿ ಬಳಸುವ ಗುರಿಹಲಗೆ.

    darter
    ನಾಮವಾಚಕ
  • (ಈಟಿ ಮೊದಲಾದವನ್ನು) ಎಸೆಯುವವ; ಕ್ಷೇಪಕ.
  • ಥಟ್ಟನೆ ಧಾವಿಸುವ ವ್ಯಕ್ತಿ ಯಾ ಪ್ರಾಣಿ.
  • ಮೀಂಚುಳ್ಳಿ; ನೀರುಕಾಗೆ; ಕಿಂಗ್‍ಹಿಷರ್‍ ಮತ್ತು ಜೀನುದಿನಿಗಳನ್ನು ಒಳಗೊಂಡ ಆನ್‍ಹಿಂಗ ಕುಲದ, ತನ್ನ ಬೇಟೆಯ ಕಡೆ ಥಟ್ಟನೆ ಜಿಗಿಯುವ, ಜಾಲಪಾದವುಳ್ಳ ಪಕ್ಷಿ.
  • ಸಬಳ ಮೀನು; ಪರ್ಚ್‍ ಮೀನಿನಂಥ, ಥಟ್ಟನೆ ಜಿಗಿಯುವ, ಅಮೆರಿಕದ ಚಿಕ್ಕಮೀನು.

  • dartle
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಥಟ್ಟನೆ ಹಿಂದಕ್ಕೂ ಮುಂದಕ್ಕೂ) ಎಗರಾಡು; ಜಿಗಿದಾಡು; ಚಾಚು: snake’s dartling tongue ಹಾವಿನ ಚಾಚು ನಾಲಿಗೆ.
  • (ಈಟಿಯನ್ನು) ಎಸೆದಾಡು.
  • ಪುನಃ ಪುನಃ ತಾಕು, ಹೊಡೆ: the flames dartled the horizon ಜ್ವಾಲೆಗಳು ದಿಗಂತಕ್ಕೆ ಪುನಃ ಪುನಃ ತಾಕುತ್ತಿದ್ದವು.

  • Dartmoor
    ನಾಮವಾಚಕ
    ಡಾರ್ಟ್‍ಮೂರ್‍ (ಜೈಲು); ಇಂಗ್ಲಂಡಿನ ಡೆವನ್‍ಷೈರಿನಲ್ಲಿರುವ ಪ್ರಿನ್ಸ್‍ಟೌನ್‍ ಬಳಿಯ, ಪ್ರಸಿದ್ಧ ಸೆರೆಮನೆ.

    Dartmoor pony
    ನಾಮವಾಚಕ
    ಡಾರ್ಟ್‍ಮೂರ್‍ ಕುದುರೆ; ಇಂಗ್ಲಂಡಿನ ಡೆವನ್‍ಷೈರಿನಲ್ಲಿ ಹುಟ್ಟಿ ಬೆಳೆದ, ಒರಟು ಕೂದಲಿನ, ಚಿಕ್ಕಗಾತ್ರದ ಕುದುರೆ.

    Dartmoor sheep
    ನಾಮವಾಚಕ
    ಡಾರ್ಟ್‍ಮೂರ್‍ ಕುರಿ; ಕೊಂಬಿಲ್ಲದ, ಉದ್ದವಾದ ನಸುಬಿಳಿ ಬಣ್ಣದ ಮುಖವುಳ್ಳ, ಉದ್ದ ಎಳೆಯ ಉಣ್ಣೆಯುಳ್ಳ, ಡಾರ್ಟ್‍ಮೂರ್‍ನ ಕುರಿ.


    logo