(ವೈದ್ಯಶಾಸ್ತ್ರ) ಅಶ್ಮರಿಪೀಡಿತ; ಉಪಲಪೀಡಿತ; ದೇಹದ ಯಾವುದೇ ಟೊಳ್ಳಿನಲ್ಲಿ ಯಾ ನಾಳದಲ್ಲಿ ಖನಿಜ ಲವಣದಿಂದಾದ ಕಲ್ಲಿನಿಂದ ನರಳುತ್ತಿರುವ.
calculus
ನಾಮವಾಚಕ
(ವೈದ್ಯಶಾಸ್ತ್ರ) ಅಶ್ಮರಿ; ಉಪಲ; ಕಲ್ಲು; ದೇಹದ ಯಾವುದೇ ಭಾಗದಲ್ಲಿ, ಮುಖ್ಯವಾಗಿ ಟೊಳ್ಳಾದ ನಾಳ ಯಾ ಕೋಶಗಳಲ್ಲಿ, ಖನಿಜ ಲವಣದಿಂದುಂಟಾಗುವ ಗಡಸು ಹರಳು: renal calculus ಮೂತ್ರಪಿಂಡದ ಅಶ್ಮರಿ.
(ಗಣಿತ) ಕಲನಶಾಸ್ತ್ರ; ಒಂದು ಚರಕ್ಕೆ ಸಂಬಂಧಿಸಿದಂತೆ ಇನ್ನೊಂದು ಚರ ಸತತವಾಗಿ ಬದಲಾಯಿಸುತ್ತಿರುವ ಕ್ರಮವನ್ನು ನಿರೂಪಿಸುವ ಗಣಿತ ಫಲನಗಳಿಂದ ಯಾವುದೇ ಕ್ಷಣದಲ್ಲಿ ಆಗುವ ಬದಲಾವಣೆಯ ದರವನ್ನು ಗಣನೆ ಮಾಡುವುದನ್ನೂ ಅದರ ವಿಪರ್ಯಯವನ್ನೂ ಒಳಗೊಂಡ ಗಣಿತಶಾಸ್ತ್ರದ ಭಾಗ.