logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

badman
ನಾಮವಾಚಕ
(ಅಮೆರಿಕನ್‍ ಪ್ರಯೋಗ)
  • (ಅಮೆರಿಕ ಸಂಯುಕ್ತ ಸಂಸ್ಥಾನಗಳ ಪಶ್ಚಿಮ ಭಾಗದ, ಹಿಂದಿನ ಕಾಲದ) ದನಗಳ್ಳ.
  • ಹುಚ್ಚುಸಾಹಸಿ; ಯಾವುದಕ್ಕೂ ಹೇಸದವ ಯಾ ಕೊಲೆಗಡುಕ ಯಾ ದೇಶಭ್ರಷ್ಟ.

  • badmash
    ನಾಮವಾಚಕ
    (ಇಂಡಿಯ) ಬದ್ಮಾಷ್‍; ಗೂಂಡಾ; ಪಟಿಂಗ; ಪೋಕರಿ; ಪುಂಡ.

    badminton
    ನಾಮವಾಚಕ
  • ಬ್ಯಾಡ್ಮಿಂಟನ್‍ ಆಟ; ಅಡ್ಡ ಬಲೆ, ಬ್ಯಾಟುಗಳು ಮತ್ತು ಪುಕ್ಕದ ಚೆಂಡುಗಳಿಂದ ಆಡುವ ಒಂದು ಆಟ.
  • ಬ್ಯಾಡ್ಮಿಂಟನ್‍; ಬೇಸಗೆ ಪಾನೀಯ; ಕ್ಲಾರಟ್‍, ಸೋಡ ಮತ್ತು ಸಕ್ಕರೆ ಸೇರಿಸಿದ ಪಾನೀಯ.

  • badness
    ನಾಮವಾಚಕ
  • ಕೀಳು – ಮಟ್ಟ, ಸ್ಥಿತಿ, ಲಕ್ಷಣ; ಕಳಪೆತನ; ಕಳಪೆಯಾಗಿರುವಿಕೆ.
  • (ನ್ಯಾಯಾಲಯದಲ್ಲಿ, ಅಪೀಲು, ಮೊದಲಾದವುಗಳ ವಿಷಯದಲ್ಲಿ) ದೋಷಯುಕ್ತತೆ; ಅಸಮರ್ಥನೀಯತೆ; ಅಸಿಂಧುತ್ವ.
  • ದುಷ್ಟತನ; ದೌಷ್ಟ್ಯ; ನೀಚತನ.
  • ಹಾನಿಕರವಾಗಿರುವಿಕೆ; ಅಪಾಯಕರವಾಗಿರುವಿಕೆ.
  • ಪ್ರತಿಕೂಲತೆ; ಪ್ರಾತಿಕೂಲ್ಯ; ವಿರುದ್ಧವಾಗಿರುವಿಕೆ; ಅನನುಕೂಲವಾಗಿರುವಿಕೆ: forced to retreat by the badness of the weather ಹವಾಗುಣದ ಪ್ರತಿಕೂಲತೆಯಿಂದ ಹಿಮ್ಮೆಟ್ಟಬೇಕಾಯಿತು.
  • ಕೆಟ್ಟದಾಗಿರುವಿಕೆ.

  • Baedeker
    ನಾಮವಾಚಕ
  • ಜರ್ಮನಿಯ ಕಾರ್ಲ್‍ ಬೇಡಿಕರ್‍ ಸಂಸ್ಥೆಯಿಂದ ಪ್ರಕಟಿಸಲ್ಪಟ್ಟ ವಿದೇಶೀ ಪ್ರವಾಸ ಕೈಪಿಡಿ.
  • (ಸಡಿಲವಾಗಿ, ಯಾವುದೇ) ಪ್ರವಾಸ ಕೈಪಿಡಿ.

  • Baedeker raids
    ನಾಮವಾಚಕ
    ಜರ್ಮನರ ಪ್ರತೀಕಾರ ವಿಮಾನದಾಳಿ; 1942 ರಲ್ಲಿ ಇಂಗ್ಲಂಡಿನ ಸಾಂಸ್ಕೃತಿಕ ಹಾಗೂ ಐತಿಹಾಸಿಕ ನಗರಗಳ ಮೇಲೆ ಜರ್ಮನರು ವಿಮಾನಗಳಿಂದ ನಡೆಸಿದ ಪ್ರತೀಕಾರ ದಾಳಿ.

    bael
    ನಾಮವಾಚಕ
  • (ಇಂಡಿಯದ) ಬಿಲ್ವಪತ್ರೆ ಮರ.
  • ಬಿಲ್ವ – ಹಣ್ಣು, ಫಲ.

  • baffle
    ಸಕರ್ಮಕ ಕ್ರಿಯಾಪದ
  • (ಒಬ್ಬನ ಕುತೂಹಲ, ಸಾಮರ್ಥ್ಯ, ಪ್ರಯತ್ನಗಳನ್ನು) ಕೆಡಿಸು; ಭಗ್ನಗೊಳಿಸು; ಭಂಗಮಾಡು; ವ್ಯರ್ಥಗೊಳಿಸು; ನಿರರ್ಥಕಗೊಳಿಸು.
  • ತಬ್ಬಿಬ್ಬಾಗಿಸು; ಕಕ್ಕಾವಿಕ್ಕಿಗೊಳಿಸು; ದಿಗ್ಭ್ರಮೆ ಹಿಡಿಸು.
  • (ಮನುಷ್ಯ, ಹಡಗು, ಬೇರೊಬ್ಬನ ಪ್ರಯತ್ನಗಳ ವಿಷಯದಲ್ಲಿ, ಮುನ್ನಡೆಯನ್ನು) ತಡೆ; ಅಡ್ಡಿಪಡಿಸು; ಅಡಚಣೆ ಒಡ್ಡು; ಪ್ರತಿಬಂಧಕ ಉಂಟುಮಾಡು.

  • baffle
    ನಾಮವಾಚಕ
  • ತಡೆ; ತಡೆ ಹಲಗೆ; ಪ್ರತಿಬಂಧಕ; ನಿರೋಧಕ; ನೀರನ್ನೋ ಅನಿಲವನ್ನೋ ವಿಕಿರಣವನ್ನೋ ಒಳಕ್ಕೆ ಯಾ ಹೊರಕ್ಕೆ ಹರಿಯದಂತೆ ತಡೆಯುವ ಯಾ ನಿಯಂತ್ರಿಸುವ ಸಾಧನ.
  • ತಬ್ಬಿಬ್ಬು; ಕಕ್ಕಾಬಿಕ್ಕಿ; ದಿಗ್ಭ್ರಮೆ; ದಿಗ್ಭ್ರಮೆ ಹಿಡಿದ ಸ್ಥಿತಿ.

  • baffle-board
    ನಾಮವಾಚಕ
    ತಡೆಹಲಗೆ; ಶಬ್ದ ಪ್ರತಿಬಂಧಕ; (ಶಬ್ದ) ನಿರೋಧಕ ಫಲಕ; ಶಬ್ದ ಹರಡದಂತೆ ತಡೆಯುವ ಹಲಗೆ; ಮುಖ್ಯವಾಗಿ ಧ್ವನಿಯನ್ನು ಉತ್ತಮಪಡಿಸಲು ಧ್ವನಿವರ್ಧಕ ಶಂಕುವಿನ ಸುತ್ತ ಅಳವಡಿಸಿರುವ ಸಾಧನ.


    logo