logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

absent-mindedly
ಕ್ರಿಯಾವಿಶೇಷಣ
ಅಡ್ಡಜ್ಞಾನ; ಅನ್ಯಮನಸ್ಕತೆಯಿಂದ.

absent-mindedness
ನಾಮವಾಚಕ
ಅಡ್ಡಜ್ಞಾನ; ಅನ್ಯಮನಸ್ಕತೆ.

absentee
ನಾಮವಾಚಕ
  • ಇಲ್ಲದವ; ಗೈರುಹಾಜರಾದವ; ಅನುಪಸ್ಥಿತ.
  • = absent voter.
  • ಅನುಪಸ್ಥಿತ ಮಾಲಿಕ; ಸ್ವಂತ ಸ್ಥಳದಲ್ಲಿ, ಊರಿನಲ್ಲಿ ವಾಸವಿರದೆ ಬೇರೆಡೆ ಇರುವ ವ್ಯಕ್ತಿ ಮುಖ್ಯವಾಗಿ ಜಮೀನುದಾರ.

  • absenteeism
    ನಾಮವಾಚಕ
  • ಗೈರುಹಾಜರಿಕೆ; ಗೈರುಹಾಜರಿ–ಪ್ರವೃತ್ತಿ, ಅಭ್ಯಾಸ.
  • ಗೈರುಹಾಜರಿಕೆ; ಆಗಾಗ ವಿನಾಕಾರಣ ಕೆಲಸಗಾರರು, ವಿದ್ಯಾರ್ಥಿಗಳು, ಮೊದಲಾದವರು ಕೆಲಸಕ್ಕೆ ತಪ್ಪಿಸಿಕೊಳ್ಳುವುದು.

  • absently
    ಕ್ರಿಯಾವಿಶೇಷಣ
    ಅಡ್ಡಜ್ಞಾನದಲ್ಲಿ; ಅನ್ಯಮನಸ್ಕನಾಗಿ.

    absentness
    ನಾಮವಾಚಕ
    = absent-mindedness.

    absinth
    ನಾಮವಾಚಕ
  • (ಸಸ್ಯವಿಜ್ಞಾನ) ಮಂಚಿಪತ್ರೆ: ಔಷಧಕ್ಕೊದಗುವ ಒಂದು ಬಗೆಯ ಕಹಿಗಿಡ.
  • ಮಂಚಿಪತ್ರೆಯ ಸಾರ.
  • ಆಬ್‍ಸಿನ್ತ್‍; ಮಂಚಿಪತ್ರೆಯ ಸಾರ ಸೇರಿಸಿದ ದ್ರಾಕ್ಷಾ ಮದ್ಯ.

  • absinthe
    ನಾಮವಾಚಕ
    = absinth(3).

    absit omen
    ಭಾವಸೂಚಕ ಅವ್ಯಯ
    ಬಿಡತು: ಆಗದಿರಲಿ: ಶಾಂತಂ ಪಾಪಂ; ಬಾಯಿ ತಪ್ಪಿ ಹೇಳಿದ ಮಾತಿನಿಂದ ಕೇಡು ಒದಗದಿರಲಿ.

    absolute
    ಗುಣವಾಚಕ ಪದಗುಚ್ಛ
  • ಸಂಪೂರ್ಣ; ಸಮಗ್ರ; ಪರಿಪೂರ್ಣ; ದೋಷರಹಿತ: tell the absolute truth ಸಂಪೂರ್ಣ ಸತ್ಯವನ್ನು ಹೇಳು.
  • ತಾಜಾ; ಅಪ್ಪಟ; ಕೇವಲ; ಬರಿ; ಶುದ್ಧ; ಬೆರಕೆಯಿಲ್ಲದ; absolute alcohol ಅಪ್ಪಟ ಯಾ ಶುದ್ಧ ಆಲ್ಕಹಾಲ್‍; ನೀರು ಮೊದಲಾದವನ್ನು ಬೆರಸದ ಆಲ್ಕಹಾಲ್‍.
  • ಅಬಾಧಿತ; ನಿರ್ಭಂಧರಹಿತ: absolute ownership ಅಬಾಧಿತ ಸ್ವಾಮ್ಯ.
  • ಅಂಕೆಯಿಲ್ಲದ; ನಿರಂಕುಶ; ಸರ್ವತಂತ್ರ ಸ್ವತಂತ್ರ; ಸ್ವೇಚ್ಛಾನುಸಾರಿ: absolure monarchy ನಿರಂಕುಶ ಪ್ರಭುತ್ವ. God’s absolute power ದೇವರ ಸರ್ವತಂತ್ರ ಸ್ವತಂತ್ರಾಧಿಕಾರ.
  • (ವ್ಯಾಕರಣ) ಅನನ್ವಿತ; ಸ್ವತಂತ್ರ; ವಾಕ್ಯದ ಕ್ರಿಯೆಯಿಂದ ಬದ್ಧವಾಗಿಲ್ಲದ.
  • ನಿರಪೇಕ್ಷ; ಸಾಪೇಕ್ಷವಲ್ಲದ; ಸಜಾತೀಯವಾದ ಇತರ ವಸ್ತುಗಳೊಡನೆ ಹೋಲಿಸದೆ ಸ್ವತಃ ವಸ್ತುಭೂತವಾಗಿರುವ: absolute scale of temperature ನಿರಪೇಕ್ಷ ತಾಪಮಾನ.
  • ನಿರುಪಾಧಿಕ; ಉಪಾಧಿರಹಿತ: an absolute proposition ನಿರುಪಾಧಿಕ ಯಾ ಅನವಚ್ಛಿನ್ನ ಪ್ರತಿಜ್ಞೆ.
  • (ತತ್ತ್ವಶಾಸ್ತ್ರ) ಸ್ವತಂತ್ರಸತ್ತೆಯ; ಸ್ವಯಂಭು; ಸ್ವಯಂಪೂರ್ಣ; ಪರಮ; ತನ್ನದೇ ಅಸ್ತಿತ್ವವನ್ನು ಹೊಂದಿದ್ದು, ಅದನ್ನು ಅರಿಯಲು ಇತರ ವಸ್ತುಗಳೊಡನೆ ಹೋಲಿಕೆ ಯಾ ಸಂಬಂಧ ಬೇಕಿಲ್ಲದ: absolute value ಸ್ವತಂತ್ರಮೌಲ್ಯ. absolute knowledge ಪರಮಜ್ಞಾನ.
  • ನಿಜವಾದ; ವಾಸ್ತವಿಕವಾದ; ಸತ್ಯವಾದ; ನಿಸ್ಸಂದಿಗ್ಧವಾದ: an absolute fact ನಿಜವಾದ ಸಂಗತಿ. absolute proof ನಿಸ್ಸಂದಿಗ್ಧವಾದ ಪ್ರಮಾಣ.


  • logo