logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

obviousness
ನಾಮವಾಚಕ
  • (ಕಣ್ಣಿಗೆ ಯಾ ಮನಸ್ಸಿಗೆ) ಕಾಣುವಂತಿರುವುದು; ಪ್ರಕಟವಾಗಿರುವುದು; ಸುವ್ಯಕ್ತತೆ; (ವಿ)ಸ್ಪಷತೆ; ಸ್ಪಷ್ಟಸ್ಥಿತಿ ಯಾ ಲಕ್ಷಣ.
  • (ಇಂದ್ರಿಯ)ಗೋಚರತೆ; ಪ್ರತ್ಯಕ್ಷತೆ.
  • ನಿಸ್ಸಂಶಯವಾಗಿರುವಿಕೆ; ನಿಸ್ಸಂದಿಗ್ಧತೆ.

  • OC
    ಸಂಕ್ಷಿಪ್ತ
    Officer Commanding.

    oc-
    ಪೂರ್ವಪ್ರತ್ಯಯ
    ob- ನೋಡಿ

    ocarina
    ನಾಮವಾಚಕ
    (ಸಂಗೀತ) ಆಕರೀನ; ಒಂದು ಸುಷಿರವಾದ್ಯ; ಪಿಂಗಾಣಿಯಲ್ಲಿ (ಸಾಮಾನ್ಯವಾಗಿ ಕೆಮ್ಮಣ್ಣಿನಲ್ಲಿ ಯಾ ಲೋಹದಲ್ಲಿ) ಮಾಡಿದ, ಅಂಡಾಕಾರದ ಒಂದು ಸಣ್ಣ ಊದುವ ವಾದ್ಯ.

    Occam's razor
    ನಾಮವಾಚಕ
    ಲಾಘವ ತರ್ಕ; ವಿಷಯವೊಂದನ್ನು ವಿವರಿಸುವಾಗ ಸಾಧ್ಯವಾದಷ್ಟು ಕಡಮೆ ಊಹೆಗಳನ್ನು ಪರಿಗ್ರಹಿಸಬೇಕು ಎನ್ನುವ, ಇಂಗ್ಲಿಷ್‍ ತತ್ತ್ವಶಾಸ್ತ್ರಜ್ಞ ವಿಲಿಯಂ ಆಹ್‍ ಆಕಮ್‍ ಎಂಬಾತನು ಕಲ್ಪಿಸಿದ್ದೆಂದು ಹೇಳಲಾದ ಸೂತ್ರ.

    occasion
    ನಾಮವಾಚಕ ಪದಗುಚ್ಛ
    1. ವಿಶೇಷ–ಘಟನೆ, ಸಂದರ್ಭ; ವಿಶೇಷವಾದ ಯಾ ಗಮನಾರ್ಹವಾದ–ಪರಿಸ್ಥಿತಿ, ಸಂದರ್ಭ: dressed for the occasion ಸಂದರ್ಭಕ್ಕೆ ತಕ್ಕಂತೆ ವೇಷ ತೊಟ್ಟ; ಸಂದರ್ಭೋಚಿತವಾದ ಪೋಷಾಕು ಧರಿಸಿದ. on this festive occasion ಈ ಉತ್ಸವ ಸಂದರ್ಭದಲ್ಲಿ.
    2. ವಿಶೇಷ ಸಮಯ, ಸಂದರ್ಭ; ವಿಶೇಷ ಸಂಗತಿ ಯಾ ಘಟನೆ ನಡೆಯುವ ನಿರ್ದಿಷ್ಟ ಸಮಯ: on the occasion of their marriage ಮದುವೆಯ ಸಮಯದಲ್ಲಿ, ಸಂದರ್ಭದಲ್ಲಿ.
  • ಕಾರಣ; ಸಮರ್ಥನೆ; ಆಧಾರ: there is no occasion to be angry ಕೋಪಿಸಿಕೊಳ್ಳಲು ಕಾರಣವೇನೂ ಇಲ್ಲ.
  • ಸುಸಮಯ; ಸುಸಂದರ್ಭ; ಸದವಕಾಶ; ಯಾವುದೇ ಕೆಲಸ ಮಾಡಲು ತಕ್ಕ–ಸಮಯ, ಸಂದರ್ಭ, ಅವಕಾಶ: take occasion (ಮಾಡಲು) ಅವಕಾಶವನ್ನು ಪಡೆದುಕೊ, ಉಪಯೋಗಿಸಿಕೊ.
  • ಗೌಣ, ಪ್ರಾಸಂಗಿಕ–ಕಾರಣ; ಸದ್ಯಃ ಕಾರಣ; ತತ್‍ಕ್ಷಣದ, ಆದರೆ ಗೌಣವಾದ ಯಾ ಪ್ರಾಸಂಗಿಕವಾದ ಕಾರಣ: the cause of revolution may be obscure while its occasion is obvious ಕ್ರಾಂತಿಯ ಪ್ರಾಸಂಗಿಕ ಕಾರಣ ಸ್ಪಷ್ಟವಾಗಿದ್ದರೂ ಅದರ ಮೂಲ ಕಾರಣವು ಗೂಢವಾಗಿರಬಹುದು. the assassination was the occasion of the war ಖೂನಿಯು ಯುದ್ಧಕ್ಕೆ ಪ್ರಾಸಂಗಿಕ ಕಾರಣವಾಗಿತ್ತು.
  • ಪ್ರೇರಕ (ಕಾರಣ); ಪ್ರೇರಣೆ: gave occasion to a burst of laughter ಗೊಳ್ಳೆಂದು ನಗಲು ಕಾರಣವಾಯಿತು.
  • ಅಗತ್ಯ; ಆವಶ್ಯಕತೆ: the Queen has no occasion for the services of the officer ರಾಣಿಯವರಿಗೆ (ಈ) ಅಧಿಕಾರಿಯ ಸೇವೆಯ ಅಗತ್ಯವಿಲ್ಲ (ಅವನನ್ನು ವಜಾ ಮಾಡಲು ಬಳಸುವ ಸೌಮ್ಯ ಸೂತ್ರ).
  • (ಬಹುವಚನದಲ್ಲಿ) ವ್ಯವಹಾರಗಳು; ಕೆಲಸಕಾರ್ಯಗಳು; ವೃತ್ತಿಗೆ ಸಂಬಂಧಿಸಿದ ಕಾರ್ಯಕಲಾಪಗಳು: go about one’s lawful occasions ತನ್ನ ನ್ಯಾಯಬದ್ಧ ವ್ಯವಹಾರಗಳಲ್ಲಿ ನಿರತನಾಗಿರು; ತನಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡುತ್ತಿರು.

  • occasion
    ಸಕರ್ಮಕ ಕ್ರಿಯಾಪದ
  • (ಆಗಲು) ಅವಕಾಶ ಕಲ್ಪಿಸು; ಸಂದರ್ಭ ಯಾ ಸನ್ನಿವೇಶ ಒದಗಿಸು.
  • ಕಾರಣವಾಗು; ಕಾರಣವಾಗಿ ಉಂಟು ಮಾಡು.
  • (ಸಂದರ್ಭಾನುಸಾರವಾಗಿ) ಆಗುವಂತೆ ಮಾಡು; ಆಗಿಸು; ಉಂಟುಮಾಡು.
  • (ವ್ಯಕ್ತಿಯನ್ನು ಯಾ ಯಂತ್ರ ಮೊದಲಾದವನ್ನು ಒಂದು ಕೆಲಸ) ಮಾಡುವಂತೆ ಮಾಡು; ಕೆಲಸಕ್ಕೆ ಪ್ರೇರಿಸು.

  • occasional
    ಗುಣವಾಚಕ
  • ಸಾಂದರ್ಭಿಕ:
    1. ವಿಶೇಷ ಸಂದರ್ಭದಿಂದ(ಗಳಿಂದ) ಹುಟ್ಟಿದ, ಜನಿಸಿದ, ಸಂಭವಿಸಿದ.
    2. ವಿಶೇಷ ಸಂದರ್ಭಕ್ಕಾಗಿ–ಮಾಡಿದ ಯಾ ಉದ್ದೇಶಿಸಿದ.
    3. ವಿಶೇಷ ಸಂದರ್ಭದಲ್ಲಿ ಬಳಸಲು ಹೊಂದಿಸಿದ.
    4. ವಿಶೇಷ ಸಂದರ್ಭಕ್ಕೆ ಸಂಬಂಧಿಸಿದ.
    5. ವಿಶೇಷ ಸಂದರ್ಭದಲ್ಲಿ ಕೆಲಸ ಮಾಡುವ, ಕಾರ್ಯಕಾರಿಯಾಗುವ.
  • ಆಕಸ್ಮಿಕ; ನಿಯತ ಕ್ರಮವಿಲ್ಲದೆ ಆಗುವ, ಸಂಭವಿಸುವ.
  • ಸಾಂದರ್ಭಿಕ; ಸಂದರ್ಭಾನುಸಾರವಾದ; ಸಮಯಾನುಸಾರವಾದ; ಪರಿಸ್ಥಿತಿ ಒದಗಿದಾಗ ಅದಕ್ಕೆ ತಕ್ಕುದಾದ.
  • ಪ್ರಾಸಂಗಿಕವಾದ; ಆಗೊಮ್ಮೆ ಈಗೊಮ್ಮೆ ಸಂಭವಿಸುವ; ನಿಯತವಾಗಿ ಯಾ ಪದೇ ಪದೇ ಸಂಭವಿಸದ.

  • occasional cause
    ನಾಮವಾಚಕ
  • ಸಾಂದರ್ಭಿಕ ಕಾರಣ; ಪ್ರಾಸಂಗಿಕ ಕಾರಣ; ಕ್ರಿಯೆಯೊಂದಕ್ಕೆ ಕಾರಣವಾದ ಸಂದರ್ಭ, ಸನ್ನಿವೇಶ.
  • ಗೌಣ, ಅಪ್ರಧಾನ, ಅಮುಖ್ಯ–ಕಾರಣ; ಅಸಮವಾಯ ಕಾರಣ.

  • occasional licence
    ನಾಮವಾಚಕ
    (ನಿಗದಿ ಮಾಡಿದ ಕಾಲಗಳಲ್ಲಿ ಮತ್ತು ನಿರ್ದೇಶಿಸಿದ ಸ್ಥಳಗಳಲ್ಲಿ ಮಾತ್ರ ಮದ್ಯಗಳನ್ನು ಮಾರಲು ಕೊಟ್ಟ) ಸಾಂದರ್ಭಿಕ ಪರವಾನಗಿ.


    logo