logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

mahlstick
ನಾಮವಾಚಕ
maulstick ಪದದ ರೂಪಾಂತರ.

mahogany
ನಾಮವಾಚಕ
  • ಮಹಾಗನಿ – ದಾರು, ಮರ; ಪೀಠೋಪಕರಣಗಳಿಗೆ ಹೆಚ್ಚಾಗಿ ಬಳಸುವ, ಸೊಗಸಾಗಿ ಮೆರುಗು ಹಿಡಿಯುವ, ಅಮೆರಿಕದ ಉಷ್ಣವಲಯ ಪ್ರದೇಶದ, ಒಂದು ಬಗೆಯ ಮರದ ದಾರು.
  • ಮಾಗವಾನಿ; ಮಹಾಗನಿ ಮರ, ವೃಕ್ಷ.
  • ಊಟದ ಮೇಜು.
  • ಮಹಾಗನಿಯ ಬಣ್ಣ; ಕೆಂಗಂದು ಬಣ್ಣ; ಕೆಂಪು ಛಾಯೆಯ ಕಂದು ಬಣ್ಣ.

  • mahogany
    ಗುಣವಾಚಕ
    ಮಹಾಗನಿ ಬಣ್ಣದ; ಕೆಂಗಂದು ಬಣ್ಣದ.

    mahout
    ನಾಮವಾಚಕ
    ಮಾವುತ; ಮಾವಟಿಗ; ಆನೆಯನ್ನು ನಡೆಸುವವನು ಯಾ ನೋಡಿ ಕೊಳ್ಳುವವನು.

    Mahratta
    ನಾಮವಾಚಕ
    Maratha ಪದದ ರೂಪಾಂತರ.

    Mahratti
    ನಾಮವಾಚಕ
    Marathi ಪದದ ರೂಪಾಂತರ.

    Mahseer
    ನಾಮವಾಚಕ
    ಮಶೀರು ಮೀನು; ಇಂಡಿಯದ ಒಂದು ದೊಡ್ಡ ಸಿಹಿನೀರು ಮೀನು.

    maid
    ನಾಮವಾಚಕ ಪದಗುಚ್ಛ
  • ಹುಡುಗಿ; ಬಾಲೆ; ಬಾಲಿಕೆ.
  • ಕೊಡಗೂಸು; ಕನ್ಯೆ; ಕುಮಾರಿ; ಇನ್ನೂ ಮದುವೆಯಾಗದಿರುವ ಹುಡುಗಿ.
  • ಮದುವೆಯಿಲ್ಲದ ಹೆಂಗಸು; ಅವಿವಾಹಿತೆ.
  • ಹೆಣ್ಣಾಳು; ಸೇವಿಕೆ; ಸೇವಕಿ; ಪರಿಚಾರಿಕೆ; ಕೆಲಸದವಳು.

  • maidan
    ನಾಮವಾಚಕ
    (ಆಂಗ್ಲೋ ಇಂಡಿಯನ್‍)
  • ಮೈದಾನ; (ಒಂದು ಊರಿನ) ಬಯಲು.
  • ಕವಾಯತು ಮೈದಾನ; ಸೈನಿಕ ಕವಾಯತು ನಡೆಸುವ ಮೈದಾನ.

  • maiden
    ನಾಮವಾಚಕ
  • (ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ) ಹುಡುಗಿ; ಕನ್ಯೆ; ಕನ್ನಿಕೆ; ಕುಮಾರಿ; ಬಾಲೆ; ಬಾಲಿಕೆ.
  • ವೃದ್ಧ ಕನ್ಯೆ; ವಯಸ್ಕಳಾದ ಅವಿವಾಹಿತೆ.
  • (ಚರಿತ್ರೆ) ಸ್ಕಾಟ್ಲೆಂಡಿನ ಎಡಿನ್‍ ಬರೋ ನಗರದಲ್ಲಿ ಹಿಂದೆ ಬಳಸುತ್ತಿದ್ದ ಗಿಲೊಟಿನ್‍ ಯಂತ್ರದಂತಹ ಶಿರಚ್ಛೇದಕ ಯಂತ್ರ.
  • = maiden over.
  • ಅವಿಜಯಿ ಕುದುರೆ; ಪಂದ್ಯದಲ್ಲಿ ಎಂದೂ ಗೆದ್ದಿರದ ಕುದುರೆ.
  • ಪಂದ್ಯಗಳಲ್ಲಿ ಎಂದೂ ಗೆದ್ದಿರದ ಕುದುರೆಗಳ ರೇಸು, ಓಟದ ಸ್ಪರ್ಧೆ; ಅವಿಜಯಿ ಕುದುರೆ ರೇಸು.


  • logo