logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lair
ಅಕರ್ಮಕ ಕ್ರಿಯಾಪದ
ಸೊಗಸುಗಾರ ಪುಟ್ಟಶಾಮಿಯಂತೆ ಉಡಿಗೆತೊಡಿಗೆ ತೊಡು ಯಾ ಆಡು; ಷೋಕಿಲಾಲನಂತೆ ವರ್ತಿಸು ಯಾ ವೇಷಭೂಷಣ ತೊಡು.

lairage
ನಾಮವಾಚಕ
  • (ದನಗಳನ್ನು) ತಂಗು ದೊಡ್ಡಿಯಲ್ಲಿ ಕೂಡುವುದು.
  • ತಂಗುದೊಡ್ಡಿ(ಯ ಸ್ಥಳ, ವ್ಯವಸ್ಥೆ).

  • laird
    ನಾಮವಾಚಕ
    (ಸ್ಕಾಟ್ಲೆಂಡ್‍) ಜಮೀನುದಾರ; ಭೂಮಾಲಿಕ; ಭೂಮಿದಾರ.

    lairdship
    ನಾಮವಾಚಕ
    (ಸ್ಕಾಟ್ಲೆಂಡ್‍) ಜಮೀನುದಾರಿ; ಭೂಮಾಲಿಕತ್ವ.

    Lais
    ನಾಮವಾಚಕ
    ಸುಶಿಕ್ಷಿತಳಾದ ಯಾ ಚೆಲುವೆಯಾದ ವೇಶ್ಯಾಂಗನೆ.

    laisser-aller
    ನಾಮವಾಚಕ
    = laissez-aller.

    laisser-faire
    ನಾಮವಾಚಕ
    = laissez-faire.

    laisser-passer
    ನಾಮವಾಚಕ
    = laissez-passer.

    laissez-aller
    ನಾಮವಾಚಕ
    ನಿರುಪಾಧಿಕ ಸ್ವಾತಂತ್ರ್ಯ; ಪರಮ ಸ್ವಾತಂತ್ರ್ಯ; ನಿರ್ಬಂಧರಾಹಿತ್ಯ; ನಿರಂಕುಶತೆ; ಸ್ವಚ್ಛಂದತೆ; ಸ್ವೈರತೆ; ಅಂಕೆಯಿಲ್ಲದಿರುವಿಕೆ.

    laissez-faire
    ನಾಮವಾಚಕ
    (ಮುಖ್ಯವಾಗಿ ವ್ಯಾಪಾರ, ಕೈಗಾರಿಕೆ, ಮೊದಲಾದವಲ್ಲಿ ಸರ್ಕಾರದ) ತಾಟಸ್ಥ್ಯ – ನೀತಿ, ಧೋರಣೆ; ವ್ಯಾಪಾರ ಸ್ವಾತಂತ್ರ್ಯ; ವ್ಯಕ್ತಿ ವ್ಯವಹಾರದಲ್ಲಿ ಸರ್ಕಾರ ಪ್ರವೇಶಿಸದಿರುವುದು.


    logo